ಕಾಂತಾರ ಕಣ್ಮಣಿಗಳು – ರಿಷಭ್ ಶೆಟ್ಟಿ ,ಪ್ರಗತಿ ಶೆಟ್ಟಿ ಸಕ್ಸಸ್ ಹಿಂದಿನ ಶ್ರಮ ಹೇಗಿತ್ತು?

ಕಾಂತಾರ ಅನ್ನೋದು ಒಂದು ಸಿನಿಮಾ ಅಲ್ಲ ಒಂದೊಂದು ಶಕ್ತಿ.. ನಾವೆಲ್ಲಾ ಕಾಂತಾರ ರಿಲೀಸ್ ಆದಾಗ ಆ ಸಿನಿಮಾದ ಬಗ್ಗೆ ಮಾತನಾಡಿದ್ವಿ.. ಥಿಯೇಟರ್ಗೆ ಹೋಗಿ ಆ ಸಿನಿಮಾವನ್ನ ಆನಂದಿಸಿದ್ವಿ.. ಆ ಸಿನಿಮಾದ ಪ್ರತಿಯೊಂದು ದೃಶ್ಯವನ್ನ ನೋಡಿ ವಾಹ್ಹ್ ಅಂತ ಹೇಳಿದ್ವಿ. ಕಾಂತಾರ ಸಿನಿಮಾ ಪ್ರಚಾರ ಇಲ್ಲದೇ ಬಂದು ಪ್ಲ್ಯಾನ್ ಇಂಡಿಯಾ ಸಿನಿಮಾ ಆಗಿದ್ದು.. ಈ ಸಿನಿಮಾ ರಿಲೀಸ್ಗೂ ಮುಂಚೆ ಯಾವುದೇ ಬಿಟ್ಟಿ ಬಿಲ್ಡಪ್ ಇರಲಿಲ್ಲ.. ಇದಿದ್ದು ಕೇವಲ ಶ್ರದ್ಧ, ಭಕ್ತಿ, ತ್ಯಾಗ ಮಾತ್ರ.. ಕಾಂತಾರ ಈ ಮಟ್ಟಿಗೆ ಹಿಟ್ ಆಗೋದ್ದಕ್ಕೆ ಕಾರಣ.. ಕಾಂತಾರ ಚಾಪ್ಪರ್ 1 ಈ ಮುಟ್ಟಿಗೆ ಸುದ್ದು ಮಾಡೋದ್ದಕ್ಕೆ ಕಾರಣ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿಯ ತ್ಯಾಗ ಬಿಟ್ಟು ಬೇರೆನೂ ಇಲ್ಲ ಅನ್ಸುತ್ತೆ.. 5 ವರ್ಷ ಕಾಂತಾರಕ್ಕಾಗಿ ತಮ್ಮ ಎಲ್ಲಾ ಸುಖ, ನೆಮ್ಮದಿಯನ್ನ ಈ ಗಂಡ ಹೆಂಡತಿ ಒತ್ತೆ ಇಟ್ಟು ಕಾಂತಾರ ಅನ್ನೋ ಬೆಳಕನ್ನ ವಿಶ್ವಕ್ಕೆ ಚೆಲ್ಲೋಕೆ ರೆಡಿಯಾಗಿದ್ದಾರೆ. ಬನ್ನಿ ಹಾಗಿದ್ರೆ ಕಾಂತಾರಕ್ಕೆ ರಿಷಭ್ ಜೊತೆ ಪ್ರಗತಿ ಪಯಣ ಹೇಗಿತ್ತು.. ರಿಷಭ್ ಶೆಟ್ಟಿಗೆ ಹೆಂಡತಿ ಪ್ರಗತಿ ಹೇಗೆ ಬೆನ್ನೆಲುಬಾಗಿ ನಿಂತಿದ್ರು ಅನ್ನೋದ್ದನ್ನ ನೋಡೋಣ..

ಕಾಂತಾರ.. ಅನ್ನೋದು ಒಂದು ಸಿನಿಮಾದ ಹೆಸರಲ್ಲ.. ಕನ್ನಡಿಗರ ಉಸಿರು.. ಕನ್ನಡಿಗರಿಗೆ ಈ ಉಸಿರು ಕೊಟ್ಟಿರೋದು ರಿಷಭ್ ಶೆಟ್ಟಿ ಅನ್ನೋ ಅದ್ಫುತ ನಟ, ನಿರ್ದೇಶಕ.. ನಿಮಗೆಲ್ಲಾ ಗೊತ್ತಿರೋ ಹಾಗೇ ಕಾಂತಾರ ರಿಲೀಸ್ ಆಗಿದ್ದು 2023ರಲ್ಲಿ.. ಈ ಸಿನಿಮಾ ಬಂದಿದ್ದ ಮೊದಲ ದಿನವೇ ನಾನು ಈ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋಗೆ ಹೋಗಿದ್ದೇ.. ನಮ್ದು ತೀರ್ಥಹಳ್ಳಿ ಆದ್ರೂ ಅಲ್ಲಿ ಹಾಕಿರಲ್ಲಿ ಅಂತ ನಮ್ಗೆ ಹತ್ತಿರವಾಗಿದ್ದ ಕೊಪ್ಪಕ್ಕೆ ಹೋಗಿ ನೋಡಿದ್ದೇ.. ನಾನು ಹೋಗಿದ್ದ ದಿನ ಇಡೀ ಥಿಯೇಟರ್ನಲ್ಲಿ ಇದಿದ್ದು ಕೇವಲ 20 ರಿಂದ 30 ಜನ.. ಆಮೇಲೆ ಈ ಸಿನಿಮಾದ ಹವಾ ಶುರು ಆಯ್ತು ನೋಡಿ.. ರಿಲೀಸ್ ಆದ ಮಾರನೇ ದಿನನೇ ಯಾರ್ ಬಾಯಲ್ಲಿ ಕೇಳಿದ್ರೂ ಕಾಂತಾರ ನೋಡಿದ್ರಾ? ಕಾಂತಾರ ನೋಡಿದ್ರಾ ಅಂತ.. ಥಿಯೇಟರ್ ಕಡೆ ಮುಖ ಹಾಕದವರು ಕೂಡ ಕಾಂತಾರ ಸಿನಿಮಾ ನೋಡೋಕೆ ಥಿಯೇಟರ್ಗೆ ಹೋಗಿದ್ರು.. ಕೆಲಸಕ್ಕೆ ರಜೆ ಹಾಕಿ.. ಕಾರು ಬಸ್ಸು ಮಾಡಿಸಿಕೊಂಡು ಈ ಕಾಂತಾರ ಸಿನಿಮಾ ನೋಡೋಕೆ ಸಿಟಿ ಕಡೆ ಹೋಗಿದ್ರು. ಕೇವಲ ಕನ್ನಡದಲ್ಲಿ ರಿಲೀಸ್ ಆಗಿ ಪ್ಲ್ಯಾನ್ ಇಂಡಿಯಾ ಸಿನಿಮಾ ಆಯ್ತು.. ಕನ್ನಡದಲ್ಲಿ ಮಾಡಿದ ಕ್ರೇಜ್ ನೋಡಿ ನಮ್ಮ ಬಾಷೆಯಲ್ಲೂ ಸಿನಿಮಾ ರಿಲೀಸ್ ಮಾಡಿ ಅನ್ನೋಕೆ ಶುರು ಮಾಡಿದ್ರು. ಹೀಗೆ ಎಲ್ಲಾ ವರ್ಗದ ಜನಕ್ಕೆ ಹಿಡಿಸಿದ ಸಿನಿಮಾ ಅಂದ್ರೆ ಈ ಕಾಂತಾರ.. ಈಗ ಕಾಂತಾರ ಚಾಪ್ಪರ್ 1 ಕಿಕ್ ಕೊಡುವುದ್ದಕ್ಕೆ ಬರ್ತಿದೆ. ಕಾಂತಾರ ಅನ್ನೋ ಹೆಸರು ಈ ಮಟ್ಟಿಗೆ ಸದ್ದು ಮಾಡೋಕೆ ಕಾರಣ ರಿಷಭ್ ಶೆಟ್ಟಿಯ ತ್ಯಾಗ ಮತ್ತು ಪ್ರಗತಿ ಶೆಟ್ಟಿ ಸಪೋರ್ಟ್..ನೀವು ಸಾಕಷ್ಟು ಇಂಟ್ರವ್ಯೋವ್ನಲ್ಲಿ ಕೇಳಿ ಇರ್ತಿರಾ.. ರಿಷಭ್ ಶೆಟ್ಟಿ ಹೇಳುವುದ್ದನ್ನ.. ನನ್ನ ಈ ಸಕ್ಸಸ್ಗೆ ಕಾರಣ ನನ್ನ ಹೆಂಡತಿ ಪ್ರಗತಿ ಶೆಟ್ಟಿ ಅನ್ನೋದ್ದನ್ನ.. ಹೆಂಡತಿಯ ಸಪೋರ್ಟ್ ಇದ್ರೆ ಜೀವನದಲ್ಲಿ ಎಷ್ಟೇ ಕಷ್ಟ ಬಂದ್ರೂ ಗೆಲ್ಲಬಹುದು ಅನ್ನೋದ್ದನ್ನ ರಿಷಭ್ ಮತ್ತು ಪ್ರಗತಿ ತೋರಿಸಿಕೊಟ್ಟಿದ್ದಾರೆ..
ನಿಜಕ್ಕೂ ರಿಷಭ್ ಶೆಟ್ರ ಈ ಮಾತು ಕೇಳಿದ್ರನೇ ಮೈಜುಮ್ಮು ಅನ್ಸುತ್ತೆ ಅಲ್ವಾ. ನಾವು ಕೇಳಿದ್ದಂತೆ ಕಾಂತಾರ ಚಾಪ್ಪರ್ 1 ಶೂಟಿಂಗ್ನಲ್ಲಿ ಹಾಗ್ ಆಯ್ತು.. ಹೀಗ್ ಆಯ್ತು ಅಂತ ಕೇಳಿದ್ವಿ.. ಅದ್ರು ಬಗ್ಗೆ ನಾವು ಕೂಡ ಸುದ್ದಿ ಮಾಡಿದ್ವಿ.. ಬಟ್ ರಿಷಭ್ ಬಾಯಲ್ಲಿ ಆ ಮಾತನ್ನ ಕೇಳಿದಾಗ ನಿಜಕ್ಕೂ ಈ ಸಿನಿಮಾಕ್ಕೆ ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತೆ ಅಲ್ವಾ.. 4-5 ಸರಿ ರಿಷಭ್ ಜೀವಕ್ಕೆ ಆಪತ್ತು ಇತ್ತಂತೆ.. ಬಟ್ ಇವತ್ತು ಎಲ್ಲಾ ಕಷ್ಟವನ್ನ ಮೆಟ್ಟು ನಿಂತು ಇವತ್ತು ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ ಅಂದ್ರೆ ಇವರಿಗೆ ದೈವದ ಆಶೀರ್ವಾದದ ಜೊತೆ ಇವರ ಶ್ರಮ ಬೆಟ್ಟದಷ್ಟಿದೆ. ಕಾಂತಾರ ಮತ್ತು ಕಾಂತಾರ ಚಾಪ್ಪರ್ 1 ಸಿನಿಮಾ ಸೇರಿ ಒಟ್ಟು 5 ವರ್ಷ ಶೂಟಿಂಗ್ ಮಾಡಿದ್ದಾರೆ. ಕಾಂತಾರ ರಿಲೀಸ್ ಆದಾಗ ಅಂದ್ರೆ ಕಾಂತಾರ ಮೊದಲ ಸಿನಿಮಾ ರಿಲೀಸ್ ಆಗೋ ಮುಂಚೆ 2 ವರ್ಷ ಅದ್ದಕ್ಕೆ ರಿಷಭ್ ಶೆಟ್ರು ಊಟ ನಿದ್ದೆ ಕುಟುಂಬ ಬಿಟ್ಟು ಕೆಲಸ ಮಾಡಿದ್ದಾರೆ.. ಅದ್ರಲ್ಲೂ ಕಾಂತಾರ ಶೂಟಿಂಗ್ ಟೈಂನಲ್ಲಿ ಪ್ರಗತಿ ಶೆಟ್ಟಿ ಪ್ರೆಗ್ನೆಂಟ್ ಆಗಿದ್ರು.. ಪ್ರಗತಿ ಶೆಟ್ಟಿ ಪ್ರೆಗ್ನೆಂಟ್ನಲ್ಲೂ ಕಾಂತಾರಕ್ಕಾಗಿ ಕೆಲಸ ಮಾಡಿದ್ದಾರೆ. ಕಾಂಸ್ಟಿಮಂ ಡಿಸೈನರ್ ಆಗಿ ಕೆಲಸ ಮಾಡಿ ಗಂಡನ ಕೆಲಸಕ್ಕೆ ಬೆನ್ನಲುಬಾಗಿ ನಿಂತಿದ್ರು. ಹಗಲು ರಾತ್ರಿ ಎನ್ನದೇ ಗಂಡನ ಕೆಲಸಕ್ಕೆ ಸಾಥ್ ನೀಡಿದ್ರು. ಹೇಗೆ ಕಾಂತಾರದಲ್ಲಿ ಸಪೋರ್ಟ್ ಮಾಡಿದ್ರೋ ಹಾಗೇ ಕಾಂತಾರ ಚಾಪ್ಪರ್ 1ನ ಶೂಟಿಂಗ್ನಲ್ಲೂ ಕೂಡ ಪ್ರಗತಿ ಶೆಟ್ಟಿ ರಿಷಭ್ ಶೆಟ್ಟಿ ಜೊತೆ ನಿಂತಿದ್ರು. ರಿಷಭ್ ಮತ್ತು ಪ್ರಗತಿ ಕಾಂತಾರಕ್ಕಾಗಿ 5 ವರ್ಷ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ. ಕಾಂತಾರ ಬಹುತೇಕ ಕುಂದಾಪುರದಲ್ಲೇ ಶೂಟಿಂಗ್ ಆಗಿದ್ದು.. ಅಲ್ಲೇ ಸೆಟ್ ಹಾಕಿ ಶೂಟಿಂಗ್ ಮಾಡಿದ್ದಾರೆ. ಹೀಗಾಗಿ ರಿಷಭ್ ಬೆಂಗಳೂರಿನಿಂದ ಕುಟುಂಬ ಸಮೇತವಾಗಿ ಕುಂದಾಪುರಕ್ಕೆ ಶಿಫ್ಟ್ ಆಗಿದ್ರು. ಬೆಂಗಳೂರಿನಲ್ಲಿ ಶಾಲೆ ಬಿಡಿಸಿ ಕುಂದಾಪುರದ ಹಳ್ಳಿಯ ಶಾಲೆಗೆ ಸೇರಿಸಿದ್ರು. ಬೆಂಗಳೂರು ಕುಂದಾಪುರ ಅಂತ ಓಡಾಡೋಕೆ ಆಗಲ್ಲ.. ಫ್ಯಾಮೀಲಿಗೆ ಟೈಂ ಕೊಡೋಕೆ ಆಗಲ್ಲ ಅಂತ ಇಡೀ ಕುಂಟಬವನ್ನ ಕುಂದಾಪುರಕ್ಕೆ ಶಿಫ್ಟ್ ಆಗಿದ್ರು.. 38 ಅವರ್ 48 ಅವರ್ ನಿದ್ದೆ ಬಿಟ್ಟು ಕಾಂತಾರ ಸಿನಿಮಾಕ್ಕೆ ರಿಷಭ್ ಶೆಟ್ಟಿ ಕೆಲಸ ಮಾಡಿದ್ದಾರೆ.

ಕಾಂತಾರ ಸಿಟಿಯಲ್ಲೋ ಅಂಥವಾ ಗ್ರೀನ್ ಮ್ಯಾಟ್ನಲ್ಲೋ ಶೂಟಿಂಗ್ ಮಾಡಿದ್ದು ಅಲ್ಲ..ದೊಡ್ಡ ಕಾಡಿನಲ್ಲಿ ಶೂಟಿಂಗ್ ಮಾಡಿರೋ ಸಿನಿಮಾ.. ಅಲ್ಲಿ ಹಗಲು ರಾತ್ರಿ ಅಂತ ರಿಷಭ್ ಶೆಟ್ಟಿ ಶೂಟಿಂಗ್ ಮಾಡಿದ್ರೆ, ಅವರ ಜೊತೆ ನಿಂತಿದ್ದು ಪ್ರಗತಿ ಶೆಟ್ಟಿ.. ಗಂಡನ ಎಲ್ಲಾ ಕೆಲಸದಲ್ಲೂ ಪ್ರಗತಿ ಶೆಟ್ಟಿ ಕೈ ಜೋಡಿಸಿದ್ದಾರೆ.. ಮಕ್ಕಳನ್ನ ನೋಡಿಕೊಂಡು ತಾಯಿ ಕಾರ್ತವ್ಯವನ್ನ ನಿಭಾಯಿಸಿದ್ದಾರೆ. ಕಾಂತಾರದಂತೆ ಕಾಂತಾರ ಚಾಪ್ಪರ್ 1ನಲ್ಲೂ ಕೂಡ ಎಲ್ಲಾರಿಗೂ ಕಾಸ್ಟೂಮ್ ಡಿಸೈನ್ ಮಾಡಿದ್ದು ಪ್ರಗತಿ ಶೆಟ್ಟಿಯೇ.. ನೀವು ಟ್ರೇಲರ್ನಲ್ಲಿ ನೋಡಿದಾಗ ರುಕ್ಮುಣಿ ವಸಂತ್ ಎಷ್ಟು ಸೂಪರ್ ಆಗಿ ಕಂಡಿದ್ದಾರೆ. ಅವರ ಅಷ್ಟು ಚೆನ್ನಾಗಿ ಕಾಣೋಕೆ.. ಪ್ಲ್ಯಾನ್ ಇಂಡಿಯಾ ಕ್ರಷ್ ಆಗೋಕೆ ಈ ಪ್ರಗತಿ ಶೆಟ್ಟಿಯ ಪಾತ್ರ ದೊಡ್ಡದು. ಅವರು ಅಷ್ಟು ಚೆನ್ನಾಗಿ ಕಾಣೋ ಹಾಗೇ ಕಾಸ್ಟೂಮ್ ಡಿಸೈನ್ ಮಾಡಿದ್ದು ಈ ಪ್ರಗತಿ ಶೆಟ್ಟಿಯೇ.. ಚಿಕ್ಕ ಮಗುವನ್ನಜೊತೆಯಲ್ಲೇ ಹಾಕಿಕೊಂಡು ಶೂಟಿಂಗ್ ಮಾಡಿದ್ದಾರೆ ಅಂದ್ರೆ ಇವರು ನಿಜಕ್ಕೂ ಗ್ರೇಟ್ .

ನೋಡಿರಿ

