ನೀನು ದೊಡ್ಡ ಡ್ರಮ್.. – ಕಾವ್ಯಗಾಗಿ ರಿಷಾ ಜೊತೆಗೆ ಫೈಟ್ ಮಾಡಿದ ಗಿಲ್ಲಿ!

ನೀನು ದೊಡ್ಡ ಡ್ರಮ್.. – ಕಾವ್ಯಗಾಗಿ ರಿಷಾ ಜೊತೆಗೆ ಫೈಟ್ ಮಾಡಿದ ಗಿಲ್ಲಿ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಗಿಲ್ಲಿ- ಕಾವ್ಯ ಜೋಡಿ ಸಖತ್‌ ಹೈಲೈಟ್.‌ ಆರಂಭದಿಂದಲೂ ಒಟ್ಟಿಗೆ ಇದ್ದಾರೆ. ಇಲ್ಲಿವರೆಗೂ ಒಬ್ಬರನ್ನೊಬ್ಬರು ಬಿಟ್ಟು ಕೊಡ್ತಿಲ್ಲ. ಇದೀಗ ಕಾವ್ಯಗಾಗಿ ಗಿಲ್ಲಿ, ರಿಷಾ ಜೊತೆಗೆ ಜಗಳ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅತ್ತರೆ ಸಮಾಧಾನ ಮಾಡಲ್ಲ, ಜೊತೆಯಲ್ಲಿ ಇರಲ್ಲ – ಸೂರಜ್ ಜೊತೆ ಟೂ ಬಿಟ್ಟ ರಾಶಿಕಾ

ದೊಡ್ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಜೋಡೆತ್ತುಗಳಂತೆ ಇದ್ದ ಅಶ್ವಿನಿ, ಜಾಹ್ನವಿ ಈಗ ಕಿತ್ತಾಡಿಕೊಳ್ತಿದ್ದಾರೆ. ಇತ್ತ ಸೂರಜ್‌ ಹಾಗೂ ರಾಶಿಕ ಮಧ್ಯೆಯೂ ಮನಸ್ತಾಪ ಶುರುವಾಗಿದೆ. ಆದ್ರೆ ಗಿಲ್ಲಿ, ಕಾವು ಫ್ರೆಂಡ್‌ಶಿಪ್‌ ಮುಂದುವರಿದಿದೆ. ಈ ಜೋಡಿದೆ ಅದೆಷ್ಟೋ ಫ್ಯಾನ್ಸ್‌ ಇದ್ದಾರೆ. ಆದ್ರೆ ಈ ಜೋಡಿಯನ್ನ ಕಂಡ್ರೆ ಸಹ ಸ್ಪರ್ಧಿಗಳು ಮಾತ್ರ ಉರ್ಕೊಳ್ತಿದ್ದಾರೆ. ಇಬ್ಬರ ಬಾಂಧವ್ಯದ ಬಗ್ಗೆ ಕಮೆಂಟ್ಸ್‌ ಮಾಡ್ತಿದ್ದಾರೆ. ಇದೀಗ ಬೆನ್ನಲ್ಲೇ ಕಾವ್ಯಗಾಗಿ ಗಿಲ್ಲಿ ಹಾಗೂ ವೈಲ್ಡ್​ಕಾರ್ಡ್​ ಕಂಟೆಸ್ಟೆಂಟ್​ ರಿಷಾ ಗೌಡ ಮಧ್ಯೆ ಜಗಳವೇ ಆಗೋಗಿದೆ.  ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಸ್ಪರ್ಧಿಗಳೆಲ್ಲಾ ಬೆಡ್ ಮೇಲೆ ಇರುವಾಗ ರಿಷಾ ಗೌಡ ಹಾಗೂ ಗಿಲ್ಲಿ ನಡುವೆ ವಾಕ್ಸಮರ ನಡೆದಿದೆ. ಕಾವ್ಯ ಒಂದು ಸಾರಿ ಜಗಳ ಆಡಿದರೆ ಲೈಫ್​ನಲ್ಲಿ ಮತ್ತೆ ಮಾತನಾಡಲ್ಲ. ಕಾವ್ಯಗೆ ಬೇಡ ಅಂದರೆ ಬೇಡ, ಬೇಕು ಅಂದರೆ ಬೇಕು ಅಷ್ಟೇ ಎಂದು ಚಂದ್ರಪ್ರಭ ಬಳಿ ಕುಳಿತು ಗಿಲ್ಲಿ ನಟ ಹೇಳುತ್ತಿದ್ದನು. ಗಿಲ್ಲಿ ಮಾತಿಗೆ ಕಾವ್ಯ ನಗುತ್ತಿದ್ದಳು.  ಆದರೆ ಇದೇ ವೇಳೆ ಇನ್ನೊಂದು ಬೆಡ್​ ಮೇಲೆ ಇದ್ದ ವೈಲ್ಡ್​ಕಾರ್ಡ್​ ಕಂಟೆಸ್ಟೆಂಟ್​ ರಿಷಾ, ಗಿಲ್ಲಿ ನೀನು ಕಾವ್ಯಗೆ ಬಕೆಟ್ ಹಿಡಿಯುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಗಿಲ್ಲಿ ನೀನು ಎಲ್ಲರಿಗೂ ಬಕೆಟ್ ಹಿಡಿಯುತ್ತಿದ್ದೀಯಾ ಎಂದು ಟಕ್ಕರ್ ಕೊಟ್ಟಿದ್ದಾನೆ.

ಇದ್ದಕ್ಕಿದ್ದಂತೆ ಫುಲ್ ಗರಂ ಆದ ರಿಷಾ ಜೋರು ಧ್ವನಿಯಲ್ಲಿ, ನಿನ್ನ ಹತ್ರ ನಾನು ಅನಿಸಿಕೊಳ್ಳಲ್ಲ ಗಿಲ್ಲಿ. ಬಂದಾಗಿಂದ ನೋಡುತ್ತ ಇದ್ದೀನಿ, ಕಾವ್ಯ..ಕಾವ್ಯ..ಕಾವ್ಯ..ಕಾವ್ಯ.. ಅಂತನೇ ಇರುತ್ತೀಯಾ ಎಂದು ಕಿರುಚಾಡಿದ್ದಾರೆ. ನನ್ನ ಹತ್ರ ನೀನು ಕಾಲು ಎಳೆಯಬೇಡ. ನೀನು ಫ್ರೀ ಪ್ರಾಡೆಕ್ಟ್​ ಎಂದು ಗಿಲ್ಲಿ ನಟನಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಮಲ್ಲಯುದ್ಧ ತಾರಕಕ್ಕೇರಿದ್ದು, ನೀನು ಬಕೆಟ್​ ಎಂದಿದ್ದಕ್ಕೆ, ನೀನು ಡ್ರಮ್​ ಎಂದು ಗಿಲ್ಲಿ ಬಿಗ್ ಆನ್ಸರ್ ಮಾಡಿದ್ದಾರೆ.

Shwetha M