ತಂದೆ ICUನಲ್ಲಿದ್ರೂ ಭಾರತ ತಂಡ ಸೇರಿದ ರಿಂಕು ಸಿಂಗ್! – ನೋವಲ್ಲಿದ್ರೂ ತಂಡಕ್ಕೆ ಬೂಸ್ಟ್ ನೀಡಿದ ಫಿನಿಷರ್!

2026ರ ಟಿ20 ವಿಶ್ವಕಪ್‌ನ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿತ್ತು. ಇದೀಗ ಭಾರತಕ್ಕೆ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ಸಮಯದಲ್ಲೇ ರಿಂಕು ಸಿಂಗ್ ತಂದೆಯ ಅನಾರೋಗ್ಯದ ಕಾರಣ ತವರಿಗೆ ತೆರಳಿದ್ರು. ಇದೀಗ ರಿಂಕು ಮತ್ತೆ ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಜ್ವರ ಎಂದು ಆಸ್ಪತ್ರೆಗೆ ದಾಖಲಿಸಿದ್ದ 6 ತಿಂಗಳ ಮಗುವಿನ ಬೆರಳೇ ಕಟ್! – ಆಸ್ಪತ್ರೆ ವಿರುದ್ಧ ಕೇಸ್ ದಾಖಲು!
ರಿಂಕು ಸಿಂಗ್ ತಂದೆ ಖಾನ್ ಚಂದ್ ಸಿಂಗ್ ಅವರು 4ನೇ ಹಂತದ (ಸ್ಟೇಜ್-4) ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆಯ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ ರಿಂಕು ಗ್ರೇಟರ್ ನೋಯ್ಡಾಗೆ ತೆರಳಿದ್ದರು. ಇದೀಗ ತಂದೆಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ರಿಂಕು ದೇಶಕ್ಕಾಗಿ ಆಡಲು ಮತ್ತೆ ದೆಹಲಿಯಿಂದ ಚೆನ್ನೈಗೆ ವಿಮಾನ ಹತ್ತಿದ್ದಾರೆ. ರಿಂಕು ತಂಡಕ್ಕಾಗಿ ತಮ್ಮ ವೈಯಕ್ತಿಕ ನೋವನ್ನು ಬದಿಗಿಟ್ಟು ಬಂದಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ.
ಇನ್ನು ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಲಭ್ಯವಿರುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಭಾರೀ ಸೋಲಿನ ನಂತರ ಸೆಮಿಫೈನಲ್ ನಿರೀಕ್ಷೆಗಳು ಜಟಿಲವಾಗಿದ್ದ ಸಮಯದಲ್ಲಿ, ಈ ಎಡಗೈ ಫಿನಿಷರ್ ತಂಡದೊಂದಿಗೆ ಸೇರುವುದು ಭಾರತ ತಂಡಕ್ಕೆ ದೊಡ್ಡ ಸಮಾಧಾನವಾಗಿದೆ.

ನೋಡಿರಿ

