ರಿಂಕು ಸಿಂಗ್ KKR ಉಪನಾಯಕ – ಆಕಾಶ್ ದೀಪ್ ಬದಲಿಗೆ ತಂಡ ಸೇರಿಕೊಂಡ ಸೌರಭ್ ದುಬೆ

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್‌ಗೆ ಕೆಕೆಆರ್ ಫ್ರಾಂಚೈಸಿ ಪ್ರಮೋಷನ್ ನೀಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ರಿಂಕು ಸಿಂಗ್ ಅವರನ್ನು ತಂಡದ ಉಪನಾಯಕರನ್ನಾಗಿ ಆಯ್ಕೆ ಮಾಡಿದೆ. ಜೊತೆಗೆ ಕೆಕೆಆರ್ ಟೀಮ್‌ನ ಪ್ರಮುಖ ಬೌಲರ್ ಇಂಜುರಿಗೊಳಗಾಗಿದ್ದು, ಮತ್ತೊಬ್ಬ ವೇಗಿ ಟೀಮ್ ಸೇರಿಕೊಂಡಿದ್ದಾರೆ.
ಇದನ್ನೂ ಓದಿ:15 ನಿಮಿಷದಲ್ಲೇ ಆರ್‌ಸಿಬಿ ಪಂದ್ಯದ ಟಿಕೆಟ್ ಸೋಲ್ಡ್ ಔಟ್ – ವರ್ಷದಿಂದ ಕಾಯುತ್ತಿದ್ದ ಬೆಂಗಳೂರಿನ ಫ್ಯಾನ್ಸ್ ಆಕ್ರೋಶ
ಕೆಕೆಆರ್ ಟೀಮ್‌ನ ಸಿಕ್ಸರ್ ಕಿಂಗ್ ರಿಂಕು ಸಿಂಗ್‌ಗೆ ಭಾಗ್ಯದ ಬಾಗಿಲು ತೆರೆದಿದೆ. ರಿಂಕು ಸಿಂಗ್ ಈಗ ತಂಡದ ಉಪನಾಯಕ. ವ್ಯವಸ್ಥಾಪಕ ನಿರ್ದೇಶಕ ವೆಂಕಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ” ನಾನು ಒಂದು ಹೆಸರನ್ನು ಆಹ್ವಾನಿಸುತ್ತೇನೆ. ಆತ ಐದು ಸಿಕ್ಸರ್‌ಗಳನ್ನು ಹೊಡೆದು ಮನೆಮಾತಾಗಿರುವ ಆಟಗಾರ. ಅವರೇ ರಿಂಕು ಸಿಂಗ್. ಅವರು 2018ರಿಂದ ನಮ್ಮ ತಂಡಕ್ಕೆ ಸೇರಿದ್ದರು. ಅಂದಿನಿಂದ ಅವರು ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಈಗ ವೈಸ್ ಕ್ಯಾಪ್ಟನ್ ಆಗಿ, ಅಜಿಂಕ್ಯ ರಹಾನೆ ಅವರೊಂದಿಗೆ ತುಂಬಾ ಹತ್ತಿರದಿಂದ ಕೆಲಸ ಮಾಡುತ್ತಾರೆ ” ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಘೋಷಿಸಿದ್ದಾರೆ.
ಕೆಕೆಆರ್ ತಂಡಕ್ಕೆ ಕೊನೆಯ ಹಂತದಲ್ಲಿ ಪ್ರಚಂಡ ವೇಗಿ ಸೇರಿಕೊಂಡಿದ್ದಾರೆ. ಸೌರಭ್ ದುಬೆ ಎಡಗೈ ವೇಗದ ಬೌಲರ್. ಕೆಕೆಆರ್ ತಂಡಕ್ಕೆ 30 ಲಕ್ಷ ರೂಪಾಯಿಗೆ ಸೇರ್ಪಡೆಯಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಆಟಗಾರ ಆಕಾಶ್ ದೀಪ್ ಅವರು ಗಾಯದಿಂದಾಗಿ ಹೊರಗುಳಿದ ಕಾರಣ ಅವರ ಬದಲಿಗೆ ಎಡಗೈ ವೇಗದ ಬೌಲರ್ ಸೌರಭ್ ದುಬೆ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಬಿಸಿಸಿಐ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ.
ಕೆಕೆಆರ್ ತಂಡದಿಂದ ಆಕಾಶ್ ದೀಪ್ ಹೊರಗುಳಿಯುವುದು ನಿಜಕ್ಕೂ ದೊಡ್ಡ ಹೊಡೆತ ನೀಡಿದೆ. ಆಕಾಶ್ ದೀಪ್ ಅವರಿಗೆ ಬೆನ್ನುಮೂಳೆಯ ಒತ್ತಡದ ಗಾಯ ಆಗಿದೆ. ಇದರಿಂದ ಅವರು ಐಪಿಎಲ್ 2026ರಲ್ಲಿ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಆಕಾಶ್ ದೀಪ್ ಅವರನ್ನು ಕಳೆದ ಡಿಸೆಂಬರ್ 2025ರಲ್ಲಿ ನಡೆದ ಐಪಿಎಲ್ ಮಿನಿ ಆಕ್ಷನ್‌ನಲ್ಲಿ ಕೆಕೆಆರ್ ತಂಡವು 1 ಕೋಟಿ ರೂಪಾಯಿಗೆ ಖರೀದಿಸಿತ್ತು.

ನೋಡಿರಿ

