ಟಿ-20 ಮಾತ್ರವಲ್ಲ, ಏಕದಿನಕ್ಕೂ ಒಬ್ಬ ಬೆಸ್ಟ್ ಫಿನಿಷರ್! – ಟೆಸ್ಟ್​ ಟೀಮ್​ನಲ್ಲೂ ರಿಂಕು ಚಾನ್ಸ್‌ ಪಡೆಯುತ್ತಾರಾ?

ಟಿ-20 ಮಾತ್ರವಲ್ಲ, ಏಕದಿನಕ್ಕೂ ಒಬ್ಬ ಬೆಸ್ಟ್ ಫಿನಿಷರ್! – ಟೆಸ್ಟ್​ ಟೀಮ್​ನಲ್ಲೂ ರಿಂಕು ಚಾನ್ಸ್‌ ಪಡೆಯುತ್ತಾರಾ?

ಸೌತ್​ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮತ್ತೊಮ್ಮೆ ವಂಡೇ ಸೀರಿಸ್ ವಿನ್ ಆಗಿದೆ. ಈ ಹಿಂದೆ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಭಾರತ ವಂಡೇ ಸೀರಿಸ್ ಗೆದ್ದಿತ್ತು. ಇದೀಗ ಕೊಹ್ಲಿ ಬಳಿಕ ಕೆಎಲ್​ ರಾಹುಲ್​ ನಾಯಕತ್ವದಲ್ಲಿ ಟೀಂ ಇಂಡಿಯಾ ಸೀರಿಸ್ ಗೆದ್ದಿದೆ. ಈ ಮ್ಯಾಚ್‌ನಲ್ಲಿ ರಿಂಕು ಸಿಂಗ್​ ಇನ್ನಿಂಗ್ಸ್, ಸೌತ್​ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ ಮತ್ತು ಕೆಎಲ್​ ರಾಹುಲ್ ನಡುವಿನ ರಾಮ್​ ಸಿಯಾ ರಾಮ್ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ..

ಈ ಮ್ಯಾಚ್‌ನಲ್ಲಿ ಒಂದಂತೂ ಗ್ಯಾರಂಟಿಯಾಗಿದೆ. ಟಿ-20 ಮಾತ್ರವಲ್ಲ, ವಂಡೇಗೂ ಅಷ್ಟೇ..ಟೀಂ ಇಂಡಿಯಾಗೆ ಒಬ್ಬ ಬೆಸ್ಟ್ ಫಿನಿಷರ್ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ರಿಂಕು ಟೆಸ್ಟ್​ ಟೀಮ್​ನಲ್ಲೂ ಚಾನ್ಸ್ ಪಡೀಬಹುದು.. ಅಲ್ಲೂ ಪರ್ಫಾಮ್ ಮಾಡಬಹುದು ಅದ್ರಲ್ಲಿ ಡೌಟೇ ಇಲ್ಲ.

ಇದನ್ನೂ ಓದಿ: ಐಪಿಎಲ್‌ನಲ್ಲಿ ರೂಲ್ಸ್ ಚೇಂಜ್! – ಹೊಸ ನಿಯಮ ಪ್ಲೇಯರ್ಸ್​ ಮೇಲೆ ಯಾವ ರೀತಿ ಎಫೆಕ್ಟ್ ಆಗುತ್ತೆ?

ಸೌತ್ ಆಫ್ರಿಕಾ ವಿರುದ್ಧ ಫೈನಲ್​ ಮ್ಯಾಚ್​​ನಲ್ಲೂ ರಿಂಕು ಟೀಂಗೆ ನೆರವಾದ್ರು. 27 ಬಾಲ್​ಗಳಲ್ಲಿ 38 ರನ್ ಹೊಡೆದ್ರು. 3 ಬೌಂಡರಿ, 2 ಸಿಕ್ಸರ್. ಬಳಿಕ ಸಿಕ್ಸರ್ ಹೊಡೆಯೋಕೆ ಹೋಗಿ ಔಟಾದ್ರು. ಆದ್ರೆ ಬೇರೆ ಗ್ರೌಂಡ್​​ನಲ್ಲಾಗ್ತಿದ್ರೆ ಅದು ಕೂಡ ಸಿಕ್ಸರ್ ಆಗ್ತಿತ್ತು. ಆದ್ರೆ ಫೈನಲ್ ಮ್ಯಾಚ್​ ನಡೆದ ಗ್ರೌಂಡ್​​ನಲ್ಲಿ ಬೌಂಡರಿ ಲೈನ್ 84 ಮೀಟರ್​ನಷ್ಟಿತ್ತು. ಜಸ್ಟ್​ ಬೌಂಡರಿ ಲೈನ್ ಬಳಿ ಕ್ಯಾಚ್ ಆಗಿದೆ. ಬಟ್ ರಿಂಕು ಸಿಂಗ್​ ಇನ್ನಿಂಗ್ಸ್​ಗಂತೂ ಹ್ಯಾಟ್ಸಾಪ್​ ಹೇಳಲೇಬೇಕು.

ಇನ್ನು ಟೀಂ ಇಂಡಿಯಾದ ಬೌಲಿಂಗ್ ವಿಚಾರಕ್ಕೆ ಬಂದಾಗ ಅರ್ಶ್​​ದೀಪ್ ಸಿಂಗ್ ಅಂತೂ ಕಮ್​​ಬ್ಯಾಕ್ ಮಾಡಿದ್ದಾರೆ. 9 ಓವರ್​ಗಳಲ್ಲಿ 30 ರನ್​​ ಕೊಟ್ಟು 4 ವಿಕೆಟ್​​ಗಳನ್ನ ಕಬಳಿಸಿದ್ರು. ಆರಂಭದಲ್ಲಿ ಸೌತ್​ ಆಫ್ರಿಕಾ ಓಪನರ್ ಟೋನಿ ಡೇ ಜೋರ್ಸಿ ಟೀಂ ಇಂಡಿಯಾಗೆ ಸ್ವಲ್ಪ ಬಿಸಿ ಮುಟ್ಟಿಸಿದ್ದಂತೂ ಸುಳ್ಳಲ್ಲ. 81 ರನ್ ಹೊಡೆದ್ರು. ಆದ್ರೆ ಉಳಿದ ಯಾವುದೇ ಆಫ್ರಿಕಾ ಬ್ಯಾಟ್ಸ್​​ಮನ್​ಗಳು ಪರ್ಫಾಮ್ ಮಾಡಿಲ್ಲ. ಮೂರು ವಿಕೆಟ್ ಬೀಳ್ತಿದ್ದಂತೆ ಪ್ರೆಷರ್ ಹ್ಯಾಂಡಲ್ ಮಾಡೋಕೆ ಯಾರಿಗೂ ಸಾಧ್ಯವಾಗಿಲ್ಲ. ಇನ್ನು ಕೆಎಲ್ ರಾಹುಲ್ ಕ್ಯಾಪ್ಟನ್ಸಿ ಕೂಡ ಚೆನ್ನಾಗಿಯೇ ಇತ್ತು. ಸ್ಮಾರ್ಟ್ ಬೌಲಿಂಗ್ ರೊಟೇಶನ್, ಫೀಲ್ಡಿಂಗ್ ಸೆಟ್​ನಿಂದ ಸೌತ್ ಆಫ್ರಿಕಾ ಬ್ಯಾಟ್ಸ್​​ಮನ್​ಗಳ ಮೇಲೆ ಪ್ರೆಷರ್ ಹಾಕ್ತಾನೆ ಹೋದ್ರು. ಆದ್ರೆ ರಾಹುಲ್​ ಬ್ಯಾಟ್​ನಿಂದ ಮತ್ತೊಮ್ಮೆ ರನ್ ಬಂದಿಲ್ಲ. ಹೈಪ್ರೆಷರ್​ ಗೇಮ್​​ನಲ್ಲಿ, ಕ್ರೂಶಿಯಲ್​​ ಮ್ಯಾಚ್​ಗಳಲ್ಲಿ ರಾಹುಲ್ ಹೆಚ್ಚಾಗಿ ಆಡೋದೆ ಇಲ್ಲ. ಇದು ಕನ್ನಡಿಗನ ಮೇನ್ ಡ್ರಾಬ್ಯಾಕ್. ಈ ನಡುವೆ ಮ್ಯಾಚ್​ ಸಂದರ್ಭದಲ್ಲಿ ಒಂದು ಇಂಟ್ರೆಸ್ಟಿಂಗ್ ಘಟನೆ ಕೂಡ ನಡೀತು. ಭಾರತೀಯ ಮೂಲದ ಸೌತ್​ ಆಫ್ರಿಕಾ ಬ್ಯಾಟ್ಸ್​ಮನ್ ಕೇಶವ್ ಮಹಾರಾಜ್ ಬ್ಯಾಟಿಂಗ್​ಗೆ ಬಂದಾಗ ಸ್ಟೇಡಿಯಂನಲ್ಲಿ ರಾಮ್ ಸಿಯಾ ರಾಮ್ ಹಾಡು ಪ್ಲೇ ಮಾಡಿದ್ರು. ಈ ಮ್ಯಾಚ್ ಅಂತೇನಲ್ಲ, ಸೌತ್​ ಆಫ್ರಿಕಾದಲ್ಲಿ ನಡೆಯೋ ಪ್ರತಿ ಮ್ಯಾಚ್​ ವೇಳೆಯೂ ಕೇಶವ್ ಮಹಾರಾಜ್​ ಬ್ಯಾಟಿಂಗ್​ಗೆ ಬಂದಾಗ ರಾಮ್ ಸಿಯಾ ರಾಮ್ ಹಾಡು ಪ್ಲೇ ಮಾಡ್ತಾರೆ. ಕೀಪಿಂಗ್ ಮಾಡ್ತಿದ್ದ ಕೆಎಲ್ ರಾಹುಲ್​ ಕೇಶವ್ ಮಹಾರಾಜ್ ಬಳಿ ಈ ಬಗ್ಗೆ ವಿಚಾರಿಸ್ತಾರೆ. ನೀವು ಪ್ರತಿ ಬಾರಿ ಬ್ಯಾಟಿಂಗ್​ಗೆ ಬಂದಾಗಲೂ ಈ ಹಾಡು ಪ್ಲೇ ಮಾಡ್ತಾರಲ್ವಾ ಅಂತಾ ಕೇಶವ್​ರನ್ನ ಮಾತನಾಡಿದ್ತಾರೆ. ಅದಕ್ಕೆ ಕೇಶವ್ ಕೂಡ ಹೌದು ಅಂತಾರೆ. ಹೇಳಿಕೇಳಿ ಕೇಶವ್ ಮಹಾರಾಜ್ ದೇವರ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿರೋ ವ್ಯಕ್ತಿ, ಅವರ ಬ್ಯಾಟ್​ನಲ್ಲೂ ಕೂಡ ಓಂ ಸಿಂಬಲ್ ಇದೆ. ಭಾರತಕ್ಕೆ ಭೇಟಿ ನೀಡಿದಾಗಲೆಲ್ಲಾ ದೇವಾಲಯಗಳಿಗೆ ಭೇಟಿ ಕೊಡ್ತಾರೆ.

Shwetha M