ರಿಂಕು ಸಿಂಗ್ ತಂದೆ ಆರೋಗ್ಯ ಸ್ಥಿತಿ ಗಂಭೀರ! – ಟೀಂ ಇಂಡಿಯಾ ಕ್ಯಾಂಪ್ ತೊರೆದ ಪ್ಲೇಯರ್!

ಟೀಮ್ ಇಂಡಿಯಾ T20 ವಿಶ್ವಕಪ್ 2026ರ ಟೂರ್ನಿಯ ಸೂಪರ್-8 ಹಂತದಲ್ಲಿ ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಹೊತ್ತಲ್ಲೇ ಸ್ಟೋಟಕ ಯುವ ಆಟಗಾರ ರಿಂಕುಗೆ ಶಾಕ್ ಎದುರಾಗಿದೆ. ಕೌಟುಂಬಿಕ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ದಿಢೀರ್ ಆಗಿ ಟೀಮ್ ಕ್ಯಾಂಪ್ ತೊರೆದು ತವರಿಗೆ ಮರಳಿದ್ದಾರೆ.
ಇದನ್ನೂ ಓದಿ:ಎರಡು ಬಾರಿ ಮದುವೆಯಾಗಲಿದ್ದಾರೆ ವಿರೋಶ್! – ರಶ್ಮಿಕಾ, ವಿಜಯ್ ಈ ನಿರ್ಧಾರ ಯಾಕೆ?
ರಿಂಕು ಸಿಂಗ್ ಅವರ ತಂದೆ ಖಂಚಂದ್ ಸಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಖಂಚಂದ್ ಸಿಂಗ್ ಅವರನ್ನು ಗ್ರೇಟರ್ ನೊಯ್ಡಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಫೆಬ್ರವರಿ 23 ರಂದು ರಿಂಕು ಭಾರತ ತಂಡದ ಜೊತೆ ಚೆನ್ನೈಗೆ ಪ್ರಯಾಣ ಬೆಳೆಸಿದ್ದರು. ಆದರೆ, ಸೋಮವಾರ ರಿಂಕು ತಂದೆ ಸ್ಥಿತಿ ಗಂಭೀರವಾಗಿದೆ ಎಂಬ ವಿಚಾರ ಗೊತ್ತಾಗಿದೆ. ಹೀಗಾಗಿ ತಮ್ಮ ತಂದೆಯನ್ನು ನೋಡುವ ಸಲುವಾಗಿ ರಿಂಕು ಮಂಗಳವಾರ ದೆಹಲಿಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ. ಈ ಘಟನೆಯ ಕಾರಣ ಮಂಗಳವಾರ ಸಂಜೆ ಭಾರತ ತಂಡದ ಅಭ್ಯಾಸದಲ್ಲಿ ರಿಂಕು ಸಿಂಗ್ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಫೆಬ್ರವರಿ 26ರಂದು ಜಿಂಬಾಬ್ವೆ ವಿರುದ್ಧದ ತನ್ನ ಎರಡನೇ ಸೂಪರ್-8ರ ಪಂದ್ಯದಲ್ಲಿ ರಿಂಕು ಸಿಂಗ್ ಆಡುವ ಸಾಧ್ಯತೆ ತುಂಬಾ ಕಡಿಮೆ ಇದೆ.
ರಿಂಕು ಸಿಂಗ್ ತಂಡದಿಂದ ನಿರ್ಗಮಿಸಿರುವುದು ಭಾರತಕ್ಕೆ ಆಘಾತ ತಂದಿದೆ. ತಮ್ಮ ಮೊದಲ ಸೂಪರ್-8ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ, ಭಾರತ ತಂಡ ಟೂರ್ನಿಯ ಮೊದಲನೇ ಹಂತದಿಂದ ಹೊರಹೊಮ್ಮುವ ಅಪಾಯವನ್ನು ಎದುರಿಸುತ್ತಿದೆ. ಭಾರತ ಇದೀಗ ಜಿಂಬಾಬ್ವೆ ತಂಡವನ್ನು ಎದುರಿಸುತ್ತಿದ್ದು, ಈ ತಂಡವು ಗುಂಪು ಹಂತದಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮತ್ತು ಶ್ರೀಲಂಕಾವನ್ನು ಸೋಲಿಸಿ ಸೂಪರ್-8ಕ್ಕೆ ಲಗ್ಗೆ ಇಟ್ಟಿದೆ.

ನೋಡಿರಿ

