ರಿಂಕು ಸಿಂಗ್ ಹೊಸ ಇನ್ನಿಂಗ್ಸ್‌ ಶುರು – ಸಂಸದೆ ಪ್ರಿಯಾ ಸರೋಜ್ ಜೊತೆ ರಿಂಕು ನಿಶ್ಚಿತಾರ್ಥ

ರಿಂಕು ಸಿಂಗ್ ಹೊಸ ಇನ್ನಿಂಗ್ಸ್‌ ಶುರು – ಸಂಸದೆ ಪ್ರಿಯಾ ಸರೋಜ್ ಜೊತೆ ರಿಂಕು ನಿಶ್ಚಿತಾರ್ಥ

ಟೀಮ್ ಇಂಡಿಯಾದ ಯಂಗ್ ಕ್ರಿಕೆಟರ್​ ಹಾಗೂ ಕೆಕೆಆರ್ ತಂಡದ ಆಟಗಾರ ರಿಂಕು ಸಿಂಗ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಜೊತೆ ರಿಂಕು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಇದು ವಿಶ್ವದ ವೆಜ್‌ ಸಿಟಿ! – ನಾನ್‌ವೆಜ್‌ ತಿಂದ್ರೆ ಶಿಕ್ಷೆ ಫಿಕ್ಸ್!

ಉತ್ತರ ಪ್ರದೇಶದ ಲಕ್ನೋ ನಗರದ ಫೈವ್​ ಸ್ಟಾರ್​ ಹೋಟೆಲ್​ ಸೆಂಟ್ರಮ್​ನಲ್ಲಿ ಎಂಗೇಜ್ಮೆಂಟ್​ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸಮಾರಂಭದಲ್ಲಿ ರಿಂಕು ಸಿಂಗ್ ಅವರು ಪ್ರಿಯಾ ಸರೋಜ್ ಅವರ ಕೈ ಬೆರಳಿಗೆ ಉಂಗುರ ಹಾಕಿದರು. ಈ ವೇಳೆ ಪ್ರಿಯಾ ಸರೋಜ್ ಕಣ್ಣೀರು ಹಾಕುತ್ತಿದ್ದರು. ಈ ಮೂಲಕ ರಿಂಕು ಸಿಂಗ್ ಅವರು ತಮ್ಮ ಜೀವನದ ಹೊಸ ಅಧ್ಯಯನವನ್ನು ಪ್ರಾರಂಭಿಸಿದಂತೆ ಆಗಿದೆ. ಇನ್ನು ಮದುವೆಯೊಂದೇ ಬಾಕಿ ಇದೆ.

ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರ ಎಂಗೇಜ್ಮೆಂಟ್​ ಕಾರ್ಯಕ್ರಮಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಮಿತಾಬ್ ಬಚ್ಚನ್ ಹೆಂಡತಿ ಸಂಸದೆ ಜಯಾ ಬಚ್ಚನ್, ಡಿಂಪಲ್ ಯಾದವ್ ಸೇರಿದಂತೆ ರಾಜಕೀಯ ಗಣ್ಯರು ಆಗಮಿಸಿದ್ದರು. ರಿಂಕು ಸಿಂಗ್​ ಅವರ ಕ್ರಿಕೆಟ್​ನ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು. ಇದರ ಜೊತೆಗೆ ಬಿಸಿಸಿಐನ ಉಪಾಧ್ಯಕ್ಷ ಕಾಂಗ್ರೆಸ್​ ಸಂಸದ ರಾಜೀವ್ ಶುಕ್ಲಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಟ್ಟು 300 ಜನರಿಗೆ ಆಹ್ವಾನ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಅದ್ಧೂರಿಯಾಗಿ ಎಂಗೇಜ್ಮೆಂಟ್​ ಸಮಾರಂಭ ಮುಗಿದಿದ್ದು ಇನ್ನೇನಿದ್ದರೂ ಮದುವೆ ಸಮಾರಂಭ ಕುರಿತು ಎರಡು ಮನೆಗಳಲ್ಲೂ ಪೂರ್ವ ತಯಾರಿ ನಡೆಯಲಿದೆ. ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರ ಮದುವೆ ನವೆಂಬರ್ 18 ರಂದು ವಾರಣಾಸಿ ತಾಜ್​ ಹೋಟೆಲ್​ನಲ್ಲಿ ಭರ್ಜರಿಯಾಗಿ ನಡೆಯಲಿದೆ. ಮದುವೆ ಕಾರಣದಿಂದ ರಿಂಕು ಸಿಂಗ್ ಅವರು ಟೀಮ್ ಇಂಡಿಯಾದ ಕೆಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Shwetha M

Leave a Reply

Your email address will not be published. Required fields are marked *