9ನೇ ಕ್ಲಾಸ್ ಫೇಲ್.. ಶಿಕ್ಷಣ ಅಧಿಕಾರಿ – ರಿಂಕುಗೆ ಅರ್ಹತೆ ಮೀರಿದ ಹುದ್ದೆ ಸರಿನಾ?
ಕ್ರೀಡಾ ಕೋಟಕ್ಕೆ ಕ್ವಾಲಿಫಿಕೇಷನ್ ಬೇಕಿಲ್ವಾ?

9ನೇ ಕ್ಲಾಸ್ ಫೇಲ್.. ಶಿಕ್ಷಣ ಅಧಿಕಾರಿ – ರಿಂಕುಗೆ ಅರ್ಹತೆ ಮೀರಿದ ಹುದ್ದೆ ಸರಿನಾ?ಕ್ರೀಡಾ ಕೋಟಕ್ಕೆ ಕ್ವಾಲಿಫಿಕೇಷನ್ ಬೇಕಿಲ್ವಾ?

ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವ ತಂದವರಿಗೆ ಕ್ರೀಡಾ ಕೋಟದಲ್ಲಿ ಸರ್ಕಾರಿ ಕೆಲಸ ಕೊಡೋದು ಹೊಸದೇನಲ್ಲ. ಈಗಾಗ್ಲೇ ಸಾಕಷ್ಟು ಆಟಗಾರರು ಪೊಲೀಸ್ ಇಲಾಖೆ, ರಿಸರ್ವ್ ಬ್ಯಾಂಕ್, ಸೇನೆ ಸೇರಿದಂತೆ ಸಾಕಷ್ಟು ವಲಯಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ಸಾಲಿಗೆ ರಿಂಕು ಸಿಂಗ್ ಕೂಡ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಶಿಕ್ಷಣ ಅಧಿಕಾರಿ ಜವಾಬ್ದಾರಿ ನೀಡಲಾಗಿದೆ. ಬಟ್ ಇಲ್ಲಿ ರಿಂಕುಗೆ ಕೊಟ್ಟಿರೋ ಪೋಸ್ಟ್ ದೊಡ್ಡ ವಿವಾದ ಸೃಷ್ಟಿಸಿದೆ. ಟೀಂ ಇಂಡಿಯಾ ಯಂಗ್ ಕ್ರಿಕೆಟರ್ ರಿಂಕು ಸಿಂಗ್ ಕಳೆದ ಕೆಲ ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಂಸದೆ ಜೊತೆ ಮದುವೆ ನಿಶ್ಚಯ ಆಗಿದ್ದು ಈ ಸಂಬಂಧ ದಿನಕ್ಕೊಂದು ವಿಚಾರ ಹೊರ ಬೀಳ್ತಿದೆ. ಇದ್ರ ನಡುವೆ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಶಿಕ್ಷಣ ಅಧಿಕಾರಿ ಪೋಸ್ಟ್ ಕೂಡ ಸಿಕ್ಕಿದೆ. ಬಟ್ ವಿಷ್ಯ ಅಂದ್ರೆ ರಿಂಕು ಸಿಂಗ್ ಎಜುಕೇಷನ್​ಗೂ ಅವ್ರಿಗೆ ಕೊಟ್ಟಿರೋ ಜವಾಬ್ದಾರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಟೆಸ್ಟ್‌ ನಲ್ಲಿ ಪ್ಲಾಫ್ ಆದ ಐಪಿಎಲ್‌ ಹೀರೋಗಳು – ಬೆಸ್ಟ್ ಚಾನ್ಸ್ ಕೈ ಬಿಟ್ರಾ ಕರುಣ್, ಸಾಯಿ – ಬೆಸ್ಟ್ ಚಾನ್ಸ್ ಕೈ ಬಿಟ್ರಾ ಕರುಣ್, ಸಾಯಿ

ಟೀಮ್‌ ಇಂಡಿಯಾದ ಕ್ರಿಕೆಟಿಗ ರಿಂಕು ಸಿಂಗ್ ಅವರನ್ನು ಇತ್ತೀಚೆಗಷ್ಟೇ ಉತ್ತರ ಪ್ರದೇಶದ Basic Education Officer ಅಂದ್ರೆ ಜಿಲ್ಲಾ ಮೂಲ ಶಿಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. 9ನೇ ತರಗತಿ ಫೇಲ್‌ ಆಗಿದ್ದರೂ ರಿಂಕು ಅವರನ್ನು ಈ ಹುದ್ದಗೆ ನೇಮಕ ಮಾಡಿದ್ದೇ ವಿವಾದಕ್ಕೆ ಕಾರಣವಾಗಿದೆ. ನಿಯಮಗಳ ಪ್ರಕಾರ, ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿಯಾಗಿ ನೇಮಕ ಆಗಬೇಕಾದರೇ, ಕನಿಷ್ಠ ವಿದ್ಯಾರ್ಹತೆ ಪದವಿ ಪಡೆದಿರಬೇಕು. 21 ವರ್ಷದಿಂದ 40 ವರ್ಷದ ಒಳಗಿನವರಾಗಿರಬೇಕು. ಆದ್ರೆ 9ನೇ ತರಗತಿಯಲ್ಲಿ ಫೇಲಾದ ಅಥವಾ ಶಾಲೆ ಬಿಟ್ಟ ರಿಂಕು ಸಿಂಗ್‌ನನ್ನು ಮೂಲ ಶಿಕ್ಷಣ ಅಧಿಕಾರಿಯನ್ನಾಗಿ ಮಾಡಿರೋದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ. ನಿಯಮಗಳ ಪ್ರಕಾರ ರಿಂಕು ಸಿಂಗ್ ಯಾವುದೇ ಪದವಿಯನ್ನು ಪಡೆದಿಲ್ಲ, ಕನಿಷ್ಠ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ. ಹೀಗಿದ್ದರೂ ಅವರನ್ನು ಶಿಕ್ಷಣ ಅಧಿಕಾರಿಯಾಗಿ ನೇಮಿಸಿದ್ದು ಹೇಗೆ? ಇದು ಪದವೀಧರರಿಗೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

9ನೇ ಕ್ಲಾಸ್ ಫೇಲ್.. ಶಿಕ್ಷಣ ಅಧಿಕಾರಿ!

ಅಂತಾರಾಷ್ಟ್ರೀಯ ಪದಕ ವಿಜೇತ ನೇರ ನೇಮಕಾತಿ ನಿಯಮ 2022 ರ ಅಡಿ

ಸರ್ಕಾರದ ಜಿಲ್ಲಾ ಮಟ್ಟದ ಪ್ರತಿನಿಧಿಯಾಗಿ ಮೂಲಭೂತ ಶಿಕ್ಷಣಕ್ಕಾಗಿ ಸೇವೆ

ಗ್ರೂಪ್ ಎ ಹುದ್ದೆಯಾಗಿದ್ದು ಸೇವಾ ಆಯೋಗದ ಪರೀಕ್ಷೆಗಳ ಮೂಲಕ ಭರ್ತಿ

5ನೇ ತರಗತಿಯವರೆಗೆ ಮೇಲ್ವಿಚಾರಣೆ, ಸಹಾಯಕ ಶಿಕ್ಷಣ ನಿರ್ದೇಶಕರಿಗೆ ವರದಿ

ಶಾಲಾ ತಪಾಸಣೆ, ಶಿಕ್ಷಕರ ಕಾರ್ಯಕ್ಷಮತೆ ಮತ್ತು ನೀತಿ ಅನುಷ್ಠಾನ ಮೇಲ್ವಿಚಾರಣೆ

ರಿಂಕುಗೆ 70,000 ದಿಂದ 90,000 ರೂಪಾಯಿಗಳವರೆಗೆ ಸಂಬಳ, ಸರ್ಕಾರಿ ಭತ್ಯೆ

ಸರ್ಕಾರಿ ಕೆಲಸ ಅಂದ್ಮೇಲೆ ಇಷ್ಟೆಲ್ಲಾ ಸವಲತ್ತುಗಳು ಇದ್ದೇ ಇರುತ್ತೆ. ಆದ್ರೆ ಕ್ವಾಲಿಫಿಕೇಷನ್​ಗೆ ತಕ್ಕಂತೆ ಕೆಲಸ ಕೊಡಿ ಅನ್ನೋದು ಪದವೀದರರ ಒತ್ತಾಯ. ಹೇಳಿ ಕೇಳಿ ರಿಂಕು ಬಡತನದ ಕುಟುಂಬದಲ್ಲಿ ಜನಿಸಿದ್ರು. ಉತ್ತರ ಪ್ರದೇಶದ ಅಲಿಘರ್‌ನಲ್ಲಿ ರಿಂಕು ಅವರ ತಂದೆ ಗ್ಯಾಸ್ ಸಿಲಿಂಡರ್‌ಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಜೀವನ ನಿರ್ವಹಣೆ ಮಾಡ್ತಿದ್ರು. ಮನೆಯಲ್ಲಿ 9 ಮಂದಿ ಇದ್ದ ಕಾರಣಕ್ಕೆ ತಂದೆಗೆ ಸಹಾಯ ಆಗ್ಲಿ ಮನೆ ನಿರ್ವಹಣೆಯಲ್ಲಿ ಆಸರೆಯಾಗೋಕೆ ಅಂತಾ 9ನೇ ಕ್ಲಾಸ್​ನಲ್ಲೇ ಸ್ಕೂಲ್ ಬಿಟ್ಟ ರಿಂಕು ಕಸ ಗುಡಿಸೋ ಕೆಲಸ ಮಾಡ್ತಿದ್ರು. ಆಟೋ ಕೂಡ ಓಡಿಸಿದ್ದಾರೆ. ಬಟ್ ಕ್ರಿಕೆಟ್​ ಮೇಲಿದ್ದ ಅವ್ರ ಡೆಡಿಕೇಷನ್ ಮಾತ್ರ ಕಿಂಚಿತ್ತೂ ಕಮ್ಮಿಯಾಗಿರಲಿಲ್ಲ. ಅದೇ ಕ್ರಿಕೆಟ್ ಪ್ರೀತಿಯಿಂದಾಗೇ 2018ರ ಐಪಿಎಲ್ ಹರಾಜಿನಲ್ಲಿ ರಿಂಕು ಸಿಂಗ್ ಅವ್ರನ್ನ 80 ಲಕ್ಷ ರೂಪಾಯಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಖರೀದಿ ಮಾಡಿತ್ತು. ಅಲ್ಲಿಂದ ಈಚೆಗೆ ರಿಂಕು ಹಿಂತಿರುಗಿ ನೋಡಿದ್ದೇ ಇಲ್ಲ. ಈಗ ಕೋಟಿಗಳ ಒಡೆಯ. ಎರಡ್ಮೂರು ಐಷಾರಾಮಿ ಮನೆಗಳನ್ನೂ ಖರೀದಿ ಮಾಡಿದ್ದಾರೆ. 2023 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ರಿಂಕು ಇಲ್ಲಿಯವರೆಗೆ ಟೀಂ ಇಂಡಿಯಾ ಪರ 2 ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈಗ ಸರ್ಕಾರಿ ಹುದ್ದೆಯೂ ಒಲಿದು ಬಂದಿದೆ. ರಿಂಕುಗೆ ಸರ್ಕಾರಿ ಹುದ್ದೆ ನೀಡಿರೋದ್ರ ಬಗ್ಗೆ ಇಲ್ಲಿ ಯಾರ ತಕರಾರೂ ಇಲ್ಲ. ಆದ್ರೆ ಒಂದು ಅಂಗನವಾಡಿ ಟೀಚರ್ ಸೆಲೆಕ್ಷನ್​ಗೇ ಬೇಸಿಕ್ ಕ್ವಾಲಿಫಿಕೇಷನ್ ಕೇಳೋ ಸರ್ಕಾರ ಒಬ್ಬ ಶಿಕ್ಷಣ ಅಧಿಕಾರಿ ನೇಮಕಕ್ಕೆ ಪ್ರೊಸೀಜರ್ಸ್​ನ ಫಾಲೋ ಮಾಡಿಲ್ಲ. ಹೋಗ್ಲಿ ಬೇರೆ ಕ್ಷೇತ್ರದಲ್ಲಿ ಜಾಬ್ ನೀಡಿದ್ರೂ ಅಷ್ಟೊಂದು ವಿವಾದ ಆಗ್ತಿರಲಿಲ್ಲ. ಪ್ರೌಢ ಶಿಕ್ಷಣವನ್ನೇ ಕಂಪ್ಲೀಟ್ ಮಾಡದವ ಶಿಕ್ಷಣ ಅಧಿಕಾರಿಯಾದ್ರೆ ಅದ್ರಿಂದ ಆಗುವಂತ ಪರಿಣಾಮಗಳ ಬಗ್ಗೆಯೂ ಯೋಚನೆ ಮಾಡ್ಬೇಕಾಗುತ್ತೆ.

Shantha Kumari