ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲು ಹಿಂದಿನ ಶಕ್ತಿಯೇ ರಿಕ್ಕಿಪಾಂಟಿಂಗ್ – ರಣತಂತ್ರಗಾರ ರಿಕ್ಕಿಯ ಮೈಂಡ್ಗೇಮ್ ಸಕ್ಸಸ್ ಆಗಿದ್ದು ಹೇಗೆ?

ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲು ಹಿಂದಿನ ಶಕ್ತಿಯೇ ರಿಕ್ಕಿಪಾಂಟಿಂಗ್ – ರಣತಂತ್ರಗಾರ ರಿಕ್ಕಿಯ ಮೈಂಡ್ಗೇಮ್ ಸಕ್ಸಸ್ ಆಗಿದ್ದು ಹೇಗೆ?

6ನೇ ಬಾರಿಗೆ ಆಸ್ಟ್ರೇಲಿಯಾ ವರ್ಲ್ಡ್​​ಕಪ್ ಗೆದ್ದಿದ್ದೇ ಗೆದ್ದಿದ್ದು.. ಎಲ್ಲರೂ ಫೈನಲ್​ನಲ್ಲಿ ಅಸ್ಸೀಗಳ ಪರ್ಫಾಮೆನ್ಸ್​ ಬಗ್ಗೆಯೇ ಮಾತನಾಡ್ತಿದ್ದಾರೆ. ಆಸ್ಟ್ರೇಲಿಯನ್ನರ ತಾಕತ್ತು ಏನು? ಬೇರೆಲ್ಲಾ ಟೀಮ್​ಗಳಿಗಿಂತಲೂ ಆಸ್ಟ್ರೇಲಿಯಾ ಅಷ್ಟೊಂದು ಡಿಫರೆಂಟ್ ಯಾಕೆ ಅನ್ನೋದು ಅವರ ಆಟದಿಂದಲೇ ಎಲ್ಲರಿಗೂ ಅರ್ಥವಾಗಿದೆ. ಆದ್ರೆ ಈ ಎಲ್ಲಾ ರಣತಂತ್ರದ ಹಿಂದೆ ಒಬ್ಬ ಕ್ರಿಕೆಟ್ ಮಾಂತ್ರಿಕನಿದ್ದಾನೆ. ಫೈನಲ್​ನಲ್ಲಿ ಟೀಂ ಇಂಡಿಯಾಗೆ ಯಾವ ರೀತಿ ಸ್ಟ್ರ್ಯಾಟಜಿ ಮಾಡಬೇಕು. ಹೇಗೆ ಸೋಲಿಸಬೇಕು ಅನ್ನೋ ಮೇಜರ್ ರೋಲ್ ನಿಭಾಯಿಸಿದ್ದೇ ಆ ಒಬ್ಬ ರಣತಂತ್ರಗಾರ. ಆತ ಯಾರು? ಆಸ್ಟ್ರೇಲಿಯಾ ಮತ್ತೊಮ್ಮೆ ವಿಶ್ವಕಪ್ ಗೆಲ್ಲೋಕೆ ಅವರ ಕೊಡುಗೆ ಏನು ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಕ್ರಿಕೆಟ್ ನಲ್ಲಿ ಹೊಸ ರೂಲ್ಸ್ ಜಾರಿಗೆ ತಂದ ಐಸಿಸಿ – ಬೌಲರ್ಸ್ ಯಾಮಾರಿದ್ರೆ ಬೀಳುತ್ತೆ 5 ರನ್ ಗಳ ದಂಡ!

ರಿಕ್ಕಿ ಪಾಂಟಿಂಗ್.. ಎರಡು ಬಾರಿ ಆಸ್ಟ್ರೇಲಿಯಾಗೆ ವರ್ಲ್ಡ್​​ಕಪ್​​ ಗೆಲ್ಲಿಸಿಕೊಟ್ಟ ಯಶಸ್ವೀ ನಾಯಕ. 2003 ಮತ್ತು 2007ರಲ್ಲಿ ಪಾಂಟಿಂಗ್​ ಕ್ಯಾಪ್ಟನ್ಸಿಯಲ್ಲಿ ಸತತವಾಗಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತ್ತು. ಕೇವಲ ಆಸ್ಟ್ರೇಲಿಯಾ ಮಾತ್ರವಲ್ಲ ವರ್ಲ್ಡ್​​ ಕ್ರಿಕೆಟ್​ನ ಬೆಸ್ಟ್ ನಾಯಕರಲ್ಲಿ ರಿಕ್ಕಿ ಪಾಂಟಿಂಗ್​ ಹೆಸರು ಉತ್ತುಂಗದಲ್ಲಿದೆ. ಆದ್ರೆ ಕ್ರಿಕೆಟ್​ನಿಂದ ರಿಟೈರ್ ಆದ್ರೂ ಕೂಡ ಮತ್ತೊಂದು ರೀತಿಯಲ್ಲಿ ಆಸ್ಟ್ರೇಲಿಯಾಗೆ ವಿಶ್ವಕಪ್​ನ್ನ ಗೆಲ್ಲಿಸಿಕೊಡುತ್ತಲೇ ಬಂದಿದ್ದಾರೆ ರಿಕ್ಕಿ ಪಾಂಟಿಂಗ್. ಈ ಬಾರಿ ಫೈನಲ್​​ನಲ್ಲಿ ಆಸ್ಟ್ರೇಲಿಯಾ ಟೀಂ ಇಂಡಿಯಾವನ್ನ ಮಣಿಸೋಕೆ ಪರೋಕ್ಷ ಕಾರಣವೇ ರಿಕ್ಕಿ ಪಾಂಟಿಂಗ್. ನಿರಂತರ 10 ಮ್ಯಾಚ್​ಗಳನ್ನ ಗೆದ್ದುಕೊಂಡು ಫೈನಲ್​ಗೇರಿ ವರ್ಲ್ಡ್​​ಕಪ್​ ಗೆಲ್ಲುವ ತಂಡವಾಗಿ ಭಾರತ ಹೊರಹೊಮ್ಮಿತ್ತು. ಟೀಂ ಇಂಡಿಯಾವನ್ನ ಮಣಿಸೋದು ಅಂದ್ರೆ ನಿಜಕ್ಕೂ ಸುಲಭದ ಸಂಗತಿಯಾಗಿರಲಿಲ್ಲ. ಜೊತೆಗೆ ಯಾವ ಪಿಚ್ ಬಗ್ಗೆಯೂ ಆಸ್ಟ್ರೇಲಿಯನ್ನರಿಗೆ ಸಾಕಷ್ಟು ಕನ್​ಫ್ಯೂಷನ್​ಗಳಿದ್ದವು. ಇದೇ ಕಾರಣಕ್ಕೆ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಹಲವು ಪಿಚ್​​ನ್ನ ಸೂಕ್ಷ್ಮವಾಗಿ ಪರಿಶೀಲಿಸಿದ್ರು. ಆದ್ರೆ ರಿಕ್ಕಿ ಪಾಂಟಿಂಗ್​​ಗೆ ಮಾತ್ರ ಫೈನಲ್​​ ಪ್ಲ್ಯಾನ್​ ಹೇಗಿರಬೇಕು? ಟೀಂ ಇಂಡಿಯಾವನ್ನ ಸೋಲಿಸೋದು ಹೇಗೆ ಅನ್ನೋ ಬಗ್ಗೆ ಕಂಪ್ಲೀಟ್ ಕ್ಲಾರಿಟಿ ಹೊಂದಿದ್ದರು. ವರ್ಲ್ಡ್​​​ ಕ್ರಿಕೆಟ್​​ಗೆ ವನ್​ ಆಫ್ ದಿ ಬೆಸ್ಟ್ ಬ್ರೈನ್ ಪಾಂಟಿಂಗ್ ಮ್ಯಾಚ್​ಗೂ ಎರಡು ದಿನ ಮತ್ತು ಮ್ಯಾಚ್​ ಡೇನಂದು ಕೂಡ ಪ್ರಾಕ್ಟೀಸ್ ಮಾಡ್ತಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಟೀಮ್​ನ್ನ ಭೇಟಿಯಾಗಿದ್ದರು. ಈ ವೇಳೆ ಅಸ್ಸೀಗಳಿಗೆ ಒಂದು ಸಿಂಪಲ್ ಅಡ್ವೈಸ್ ಕೊಡ್ತಾರೆ. ಆ ಒಂದು ಅಡ್ವೈಸ್ ಆಸ್ಟ್ರೇಲಿಯನ್​ ಪ್ಲೇಯರ್ಸ್​ಗಳಿಗೆ ಬಿಗ್ ರಿಲೀಫ್ ನೀಡುತ್ತೆ. ಕಾನ್ಫಿಡೆನ್ಸ್ ಹೆಚ್ಚಿಸುತ್ತೆ. ಕಮಿನ್ಸ್ ಟೀಂ ಮೆಂಬರ್ಸ್​ಗೆ ಒಂದಷ್ಟು ಕ್ಲಾರಿಟಿ ಸಿಗುತ್ತೆ. ಎಲ್ಲರ ಮೈಂಡ್​ಸೆಟ್​ನ್ನ ಕೂಡ ಚೇಂಜ್ ಮಾಡಿಬಿಡುತ್ತೆ.

ರಿಕ್ಕಿ ಪಾಂಟಿಂಗ್ ಹೇಳಿದ್ದೇನು?

‘Don’t worry about the surface. It’s a cricket pitch, its 22 yards long and just go out there and play your best game’

‘ನೀವ್ಯಾರು ಕೂಡ ಪಿಚ್ ಬಗ್ಗೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಇದೊಂದು ಕ್ರಿಕೆಟ್ ಪಿಚ್. ಇದು 22 ಯಾರ್ಡ್ಸ್​ ಉದ್ದ ಇದೆ. ಸುಮ್ಮನೆ ಪಿಚ್​ಗೆ ಹೋಗಿ, ನಿಮ್ಮ ಬೆಸ್ಟ್ ಪರ್ಫಾಮೆನ್ಸ್ ಕೊಡಿ’

ಇದು ಫೈನಲ್​ ಮ್ಯಾಚ್​ಗೂ ಮುನ್ನ ರಿಕ್ಕಿ ಪಾಂಟಿಂಗ್​ ಎಲ್ಲಾ ಆಸ್ಟ್ರೇಲಿಯನ್​ ಪ್ಲೇಯರ್ಸ್​ಗಳಿಗೂ ಹೇಳಿದಂಥಾ ಮಾತು. ಯಾಕಂದ್ರೆ ಅಂದು ಆಸ್ಟ್ರೇಲಿಯನ್ನರು ಫೈನಲ್​ಗೆ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದರು. ಟೀಂ ಇಂಡಿಯಾಗೆ ಸರಿಯಾದ ಕೌಂಟರ್​​ ಸ್ಟ್ರ್ಯಾಟಜಿಯನ್ನೇ ಮಾಡಿದ್ರು. ಆದ್ರೆ ಪಿಚ್​ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ರು. ಈ ಪಿಚ್ ಹೇಗೆ ವರ್ತಿಸುತ್ತೋ? ಮ್ಯಾಚ್​ ಶುರುವಾದಂತೆ ಯಾವ ರೀತಿ ಬದಲಾಗುತ್ತೆ. ತಮ್ಮ ಪ್ಲ್ಯಾನ್ ಎಲ್ಲಿ ಉಲ್ಟಾ ಹೊಡೆಯುತ್ತಾ? ಇಂಥಾ ಹಲವಾರು ಪ್ರಶ್ನೆಗಳು ಅಸ್ಸೀಗಳಿಗಿತ್ತು. ಈ ಹಿಂದಿನಿಂದಲೂ ಭಾರತದಲ್ಲಿ ಆಡುವಾಗ ಇಲ್ಲಿನ ಪಿಚ್​ಗಳ ಬಗ್ಗೆ ಆಸ್ಟ್ರೇಲಿಯನ್ಸ್​ ಯಾವಾಗಲೂ ತಲೆ ಕೆಡಿಸಿಕೊಳ್ತಾನೆ ಇದ್ದಾರೆ. ಹೀಗಾಗಿ 2004ರಿಂದ ಇದುವರೆಗೂ ಭಾರತದಲ್ಲಿ ಆಸ್ಟ್ರೇಲಿಯಾಗೆ ಒಂದೇ ಒಂದು ಟೆಸ್ಟ್ ಸೀರಿಸ್​​ ಗೆಲ್ಲೋಕೆ ಸಾಧ್ಯವಾಗಿಲ್ಲ. 2008 ಮತ್ತು 2010ರಲ್ಲಿ 2-0 ಅಂತರದಿಂದ ಟೀಂ ಇಂಡಿಯಾ ಮುಂದೆ ಸೋತಿದ್ರು. 2013ರಲ್ಲಿ 4-0 ಅಂತರದಲ್ಲಿ ಮತ್ತೆ ಸೋತಿದ್ರು. 2017ರಲ್ಲಿ 2-1 ಅಂತರದಿಂದ ಸೀರಿಸ್ ಸೋತ್ರು. ಇತ್ತೀಚೆಗೆ ಮತ್ತು 2-1 ಅಂತರದಿಂದ ಟೆಸ್ಟ್ ಸೀರಿಸ್ ಕಳ್ಕೊಂಡಿದ್ರು. ಹೀಗಾಗಿ ವರ್ಲ್ಡ್​​ಕಪ್​ ಫೈನಲ್ ಪಿಚ್ ಕಂಡೀಷನ್ ಬಗ್ಗೆಯೂ ಆಸ್ಟ್ರೇಲಿಯನ್ಸ್ ತಲೆಗೆ ಹುಳ ಬಿಟ್ಟುಕೊಂಡಿದ್ರು. ಆದ್ರೆ ಪಿಚ್ ಬಗ್ಗೆ ತಲೆನೇ ಕೆಡಿಸಿಕೊಳ್ಳಬೇಡಿ. ಅದು ಹೇಗೆ ಬೇಕಾದ್ರೂ ಇರಲಿ. ನಿಮ್ಮಿಂದಾದಷ್ಟು ಬೆಸ್ಟ್ ಕ್ರಿಕೆಟ್ ಆಡಿ ಅನ್ನೋ ರಿಕ್ಕಿಯ ಒಂದೇ ಒಂದು ಮಾತು ಪ್ಲೇಯರ್ಸ್​ಗಳ ಮೆಂಟಾಲಿಟಿಯನ್ನೇ ಬದಲಾಯಿಸಿತ್ತು. ಆ ಕ್ಷಣವೇ ಪಿಚ್ ಬಗ್ಗೆ ಯೋಚನೆ ಮಾಡೋದನ್ನೇ ಬಿಟ್ಟಿದ್ರು.

ಇವೆಲ್ಲದ್ರ ಜೊತೆಗೆ ಇನ್ನೊಂದು ವಿಚಾರವನ್ನ ಹೇಳಲೇಬೇಕು. ಮೈಂಡ್ ಗೇಮ್ ಆಡೋದ್ರಲ್ಲಿ ರಿಕ್ಕಿ ಪಾಂಟಿಂಗ್ ಮಹಾ ಚಾಣಕ್ಯ. ಇಂಡಿಯನ್ ಪ್ಲೇಯರ್ಸ್​ಗಳ ಮೆಂಟಾಲಿಟಿ ಬಗ್ಗೆ ಪಾಂಟಿಂಗ್​​ಗೆ ಚೆನ್ನಾಗಿಯೇ ಗೊತ್ತು. ಈ ಹಿಂದೆ 2003ರ ವರ್ಲ್ಡ್ ​​ಕಪ್​ ಫೈನಲ್​ನಲ್ಲಿ ಪಾಂಟಿಂಗ್ ನೇತೃತ್ವದ ಟೀಂ ಭಾರತವನ್ನ ಮಣಿಸಿತ್ತು. ಆ ಮ್ಯಾಚ್​​ನಲ್ಲಿ ಪಾಂಟಿಂಗ್ ಸೆಂಚೂರಿ ಹೊಡೆದಿದ್ರು. ಹೈಯೆಸ್ಟ್ ಸ್ಕೋರರ್​ ಆಗಿದ್ರು. ನಂತರ ಐಪಿಎಲ್​​ನಲ್ಲೂ ಮುಂಬೈ ಬಳಿ ದೆಹಲಿ ಕ್ಯಾಪಿಟಲ್ಸ್ ತಂಡದ ಕೋಚ್​ ಬೇರೆ​. ರೋಹಿತ್​ ಶರ್ಮಾ ಸ್ಟ್ರ್ಯಾಟಜಿ ಬಗ್ಗೆ ಪಾಂಟಿಂಗ್​​ಗೆ ಚೆನ್ನಾಗಿಯೇ ಐಡಿಯಾ ಇರುತ್ತೆ. ವರ್ಲ್ಡ್​​ಕಪ್​ ಫೈನಲ್​ನಂಥಾ ಹೈಪ್ರೆಷರ್​ ಗೇಮ್​ನಲ್ಲಿ ನಮ್ಮವರ ಮೈಂಡ್​ಸೆಟ್ ಹೇಗಿರುತ್ತೆ ಅನ್ನೋದು ಕೂಡ ಪಾಟಿಂಗ್​ಗೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಆರಂಭದಿಂದಲೂ ಟೀಂ ಇಂಡಿಯಾದ ಮೇಲೆ ಪ್ರೆಷರ್ ಬಿಲ್ಡ್ ಮಾಡೋಕೆ ಬೇಕಾದ ಕೆಲ ಟಿಪ್ಸ್​ಗಳನ್ನ ಕೂಡ ಪಂಟರ್ ಆಸ್ಟ್ರೇಲಿಯನ್ನರಿಗೆ ಕೊಟ್ಟಿದ್ರು. ಇನ್ನು ಫೈನಲ್​​ ಮ್ಯಾಚ್​​ಗಳಲ್ಲಿ, ಅದ್ರಲ್ಲೂ ವರ್ಲ್ಡ್​​ಕಪ್​​ ಫೈನಲ್​ನಲ್ಲಂತೂ ಪ್ರತಿ ಬಾರಿಯೂ ಆಸ್ಟ್ರೇಲಿಯಾದ ಒಬ್ಬಲ್ಲಾ ಒಬ್ಬ ಪ್ಲೇಯರ್​​ ಇಂಡಿವಿಜ್ಯುವಲ್ ತನ್ನ ಬೆಸ್ಟ್ ಪರ್ಫಾಮೆನ್ಸ್​ನ್ನ ಕೊಟ್ಟೇ ಕೊಡ್ತಾರೆ. 2003ರಲ್ಲಿ ಪಾಂಟಿಂಗ್, 2007ರಲ್ಲಿ ಗಿಲ್​ಕ್ರಿಸ್ಟ್, ಈ ಬಾರಿ ಟ್ರಾವಿಸ್ ಹೆಡ್ ಯಾವ ರೀತಿ ಆಡಿದ್ರು ಅನ್ನೋದನ್ನ ನೀವು ನೋಡಿದ್ರಿ. ಹೈಪ್ರೆಷರ ಗೇಮ್​ನಲ್ಲಿ ಇಂಥಾ ಮೇಜರ್​​ ಇನ್ನಿಂಗ್ಸ್​ ಕಟ್ಟೋದ್ರ ಬಗ್ಗೆಯೂ ಪಾಂಟಿಂಗ್ ಅಸ್ಸೀಗಳಿಗೆ ಒಂದಷ್ಟು ಸಲಹೆಗಳನ್ನ ನೀಡಿದ್ರು.

ಇನ್ನು ಈ ಬಾರಿಯ ವರ್ಲ್ಡ್​​ಕಪ್​​ನಲ್ಲಿ ಆಲ್​​ಮೋಸ್ಟ್ ಎಲ್ಲಾ ಗ್ರೌಂಡ್​​ನ ಪಿಚ್​ಗಳು ಕೂಡ ಫ್ಲ್ಯಾಟ್ ಪಿಚ್ ಆಗಿತ್ತು. ಅಂದ್ರೆ ಬ್ಯಾಟ್ಸ್​​ಮನ್​​ಗಳಿಗೆ ಹೆಚ್ಚು ಫೇವರ್ ಆಗಿತ್ತು. ರನ್​ ಪ್ರವಾಹವೇ ಹರಿದುಬಂದಿತ್ತು. ಕಳೆದ ಹಲವು ವರ್ಷಗಳಿಂದ ಭಾರತದ ಬಹುತೇಕ ಪಿಚ್​​ಗಳು ಇದೇ ರೀತಿ ಇದೆ. ಆದ್ರೆ, ವರ್ಲ್ಡ್​​ಕಪ್ ಫೈನಲ್ ಮ್ಯಾಚ್​ನಲ್ಲಿ ಮಾತ್ರ ಸಬ್ ಕಾಂಟಿನೆಂಟಲ್ ಮಾದರಿಯ ಪಿಚ್ ನಿರ್ಮಾಣ ಮಾಡಲಾಗಿತ್ತು. ಇದು ಟೀಂ ಇಂಡಿಯಾಗೆ ಬ್ಯಾಕ್​ಫೈರ್ ಆಗಿದೆ ಅಂತಾ ಪಾಂಟಿಂಗ್ ಹೇಳಿದ್ದಾರೆ. ಇನ್ನು ಟಾಸ್ ಗೆದ್ರೆ ಬೌಲಿಂಗೇ ಮಾಡೋದು ಅಂತಾ ಆಸ್ಟ್ರೇಲಿಯನ್ಸ್ ಮೊದಲೇ ಫಿಕ್ಸ್ ಆಗಿದ್ರು. ಫೈನಲ್​ನಲ್ಲಿ ಫಸ್ಟ್ 10 ಓವರ್​ಗಳವರೆಗೆ ಮಾತ್ರ ಬಾಲ್ ಸ್ವಿಂಗ್ ಮತ್ತು ಸೀಮ್ ಆಗ್ತಿತ್ತು. ಬಳಿಕ ಸ್ಪಿನ್ನರ್ಸ್​ಗಳಿಗೂ ಪಿಚ್​ ಹೆಲ್ಪ್ ಆಗಿರಲಿಲ್ಲ. ಹೀಗಾಗಿ ಚೇಸಿಂಗ್ ವೇಳೆ ಆರಂಭದಲ್ಲಿ 3 ವಿಕೆಟ್​ಗಳು ಬಿದ್ರೂ ಕೂಡ ಆಸ್ಟ್ರೇಲಿಯನ್ ಬ್ಯಾಟ್ಸ್​ಮನ್​ಗಳು ನಂತರ ಪಿಚ್​​ನ್ನ ಚೆನ್ನಾಗಿ ರೀಡ್ ಮಾಡಿ ಈಸಿಯಾಗಿ ರನ್ ಗಳಿಸ್ತಾ ಹೋದ್ರು. ಜೊತೆಗೆ ಆಗಲೇ ಹೇಳಿದ ಹಾಗೆ ಪಿಚ್ ಬಗ್ಗೆ ವರಿ ಮಾಡದೆ ಗೇಮ್ ಮೇಲೆಯೇ ಹೆಚ್ಚು ಫೋಕಸ್ ಮಾಡಿದ್ರು. ಪಾಂಟಿಂಗ್​ ಸಲಹೆಯಿಂದಾಗಿ ಮೆಂಟಲಿ ನಮ್ಮವರಿಗಿಂತ ಹೆಚ್ಚು ಸ್ಟ್ರಾಂಗ್​ ಆಗಿದ್ರು. ಪಾಸಿಟಿವ್ ಮೈಂಡ್​ಸೆಟ್​​ನಲ್ಲಿ.. ಸೋಲೋ ಭಯ ಅವರಲ್ಲಿ ಇರಲೇ ಇಲ್ಲ. ಅಂತೂ ತಮ್ಮ ಟಿಪ್ಸ್ ಮೂಲಕವೇ ಪಂಟರ್ ಟೀಂ ಇಂಡಿಯಾವನ್ನ​ ಮತ್ತೊಮ್ಮೆ ಹಂಟ್ ಮಾಡಿದ್ದಾರೆ. ಅದಕ್ಕೆ ರಿಕ್ಕಿ ಪಾಂಟಿಂಗ್​​ ಮೋಸ್ಟ್ ಸಕ್ಸಸ್​ಫುಲ್ ಕ್ಯಾಪ್ಟನ್ ಆಗಿರೋದು. ಎರಡು ಬಾರಿ ತಮ್ಮ ದೇಶಕ್ಕೆ ವರ್ಲ್ಡ್​ಕಪ್​ ಗೆಲ್ಲಿಸಿಕೋಡೋಕೆ ಸಾಧ್ಯವಾಗಿರೋದು.

Sulekha