ಶ್ರೀಮಂತ ಕ್ರಿಕೆಟರ್‌ ರೇಸ್‌! – ಈ ಆರು ಮಂದಿಯಲ್ಲಿ No.1 ಯಾರು?

ಶ್ರೀಮಂತ ಕ್ರಿಕೆಟರ್‌ ರೇಸ್‌! – ಈ ಆರು ಮಂದಿಯಲ್ಲಿ No.1 ಯಾರು?

ಭಾರತ ತಂಡದ ಲೆಜೆಂಡ್‌ ಆಟಗಾರರು ಕ್ರಿಕೆಟ್‌ ಜೊತೆಗೆ ಶ್ರೀಮಂತಿಕೆಯಲ್ಲೂ ಅಷ್ಟೇ ಸೌಂಡ್‌ ಮಾಡ್ತಿದ್ದಾರೆ.. ದೇಶದಲ್ಲಿ ನಂ.1 ಶ್ರೀಮಂತ ಆಟಗಾರ ಯಾರು? ಯಾರ ಬಳಿ ಎಷ್ಟು ಆಸ್ತಿಯಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: LSG ನಾಯಕತ್ವಗೆ ಕೆ‌ಎಲ್ ಗುಡ್ ಬೈ? – RCB ಗೆ ಬರ್ತಾರಾ ಕೆ.ಎಲ್ ರಾಹುಲ್?

ಭಾರತದಲ್ಲಿ ಕ್ರಿಕೆಟ್‌ ಬಗ್ಗೆ ಮಾತಾಡ್ಬೇಕು ಅಂದ್ರೆ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರಿಂದಲೇ ಶುರು ಮಾಡಬೇಕು.. ಯಾಕಂದ್ರೆ ಭಾರತದ ಕ್ರಿಕೆಟ್‌ ಬಗ್ಗೆ ತೆಂಡೂಲ್ಕರ್‌ ಅವರನ್ನು ಬಿಟ್ಟು ಮಾತಾಡುವಂತಿಲ್ಲ.. ಕ್ರಿಕೆಟ್‌ನ ರೆಕಾರ್ಡ್‌ಗಳಲ್ಲಿ ಮಾತ್ರ ಸಚಿನ್‌ ನಂ.1 ಇರೋದಲ್ಲ.. ಶ್ರೀಮಂತಿಕೆಯಲ್ಲೂ ಸಚಿನ್‌ ಅವರೇ ನಂಬರ್‌ 1.. ಅದೂ ಸಾವಿರ ಕೋಟಿಗಿಂತ ಹೆಚ್ಚು ಆಸ್ತಿಯಿರುವ ಏಕೈಕ ಕ್ರಿಕೆಟರ್‌ ಅಂದರೆ ಅದು ಕ್ರಿಕೆಟ್‌ ದೇವರು ಸಚಿನ್‌.. ಸಚಿನ್‌ ತೆಂಡೂಲ್ಕರ್‌ ಅವರ ಒಟ್ಟು ಆಸ್ತಿ ಮೌಲ್ಯ 1,300 ಕೋಟಿ ರುಪಾಯಿ ಎಂದು ವರದಿಯಾಗಿದೆ..

ಇನ್ನು ಸಚಿನ್  ಅವರ ರೆಕಾರ್ಡ್‌ಗಳಿಗೆ ಸವಾಲಾಗಿರುವ ಬ್ಯಾಟ್ಸ್‌ಮನ್‌ ಅಂದ್ರೆ ಅದು ಕಿಂಗ್‌ ಕೊಹ್ಲಿ.. ಕೇವಲ ರೆಕಾರ್ಡ್‌ ವಿಚಾರದಲ್ಲಿ ಮಾತ್ರವಲ್ಲ.. ಶ್ರೀಮಂತಿಕೆಯಲ್ಲೂ ಸಚಿನ್‌ಗೆ ಹತ್ತಿರ ಇರುವುದು ವಿರಾಟ್‌ ಕೊಹ್ಲಿ.. ವಿರಾಟ್‌ ಅವರ ಒಟ್ಟು ಆಸ್ತಿ 980 ಕೋಟಿ ರೂಪಾಯಿಗಳಷ್ಟಿದೆಯಂತೆ.. ಇನ್ನೊಬ್ಬ ಲೆಜೆಂಡ್‌ ಮಾತ್ರವಲ್ಲದೆ ವಿಶ್ವಕಪ್‌ ವಿಜೇತ ಕೂಲ್  ಕ್ಯಾಫ್ಟನ್‌ ಮಹೇಂದ್ರ ಸಿಂಗ್‌ ಧೋನಿ ಶ್ರೀಮಂತಿಕೆಯ ವಿಚಾರಕ್ಕೆ ಬಂದಾಗ ಮೂರನೇ ಸ್ಥಾನದಲ್ಲಿದ್ದಾರೆ.. ಧೋನಿಯವರು ಕ್ರಿಕೆಟ್‌ ಹಾಗೂ ಜಾಹೀರಾತುಗಳ ಮೂಲಕ ಮಾಡಿಟ್ಟಿರುವ ಆಸ್ತಿಯ ಮೌಲ್ಯ ಈಗ  860 ಕೋಟಿ ರೂಪಾಯಿಗಳಿಗೆ ತಲುಪಿದೆಯಂತೆ..

ಟೀಂ ಇಂಡಿಯಾದ ಇನ್ನೋರ್ವ ಲೆಜೆಂಡರಿ ಕ್ಯಾಫ್ಟನ್‌ ಅಂದ್ರೆ ಅದು ಸೌರವ್‌ ಗಂಗೂಲಿ.. ಅಭಿಮಾನಿಗಳ ಪಾಲಿಗೆ ಪ್ರೀತಿಯ ದಾದಾ ಆಗಿರುವ ಟೀಂ ಇಂಡಿಯಾದ ಮಾಜಿ ಕ್ಯಾಫ್ಟನ್‌ ಸೌರವ್‌ ಗಂಗೂಲಿಯ ಬಳಿ 365 ಕೋಟಿ ರೂಪಾಯಿಗಳ ಆಸ್ತಿಯಿದೆಯಂತೆ..

ಇನ್ನು ಟೀಂ ಇಂಡಿಯಾದ ಡ್ಯಾಷಿಂಗ್‌ ಓಪನರ್‌ ಅಂದ್ರೆ ಅದು ವೀರೇಂದ್ರ ಸೆಹ್ವಾಗ್‌.. ಶ್ರೀಮಂತಿಕೆಯಲ್ಲೂ ಸೆಹ್ವಾಗ್‌ ಟಾಪ್‌ನಲ್ಲೇ ಇದ್ದಾರೆ.. ಟಾಪ್‌ 5 ಶ್ರೀಮಂತ ಕ್ರಿಕೆಟರ್‌ ಆಗಿರುವ ಸೆಹ್ವಾಗ್‌ ಬಳಿಯಲ್ಲಿ 286 ಕೋಟಿ ರುಪಾಯಿಗಳಷ್ಟಿದೆಯಂತೆ..

ಸೆಹ್ವಾಗ್‌ ನಂತರದ ಸ್ಥಾನದಲ್ಲಿರುವುದು ಅಂದರೆ ನಂ.6ನಲ್ಲಿ ಇರುವ ಶ್ರೀಮಂತ ಕ್ರಿಕೆಟರ್‌ ಅಂದ್ರೆ ಟೀಂ ಇಂಡಿಯಾಗೆ ವಿಶ್ವಕಪ್‌ ಗೆಲ್ಲಿಸಿಕೊಟ್ಟ ಕ್ರಿಕೆಟರ್‌, ಯುವರಾಜ್‌ ಸಿಂಗ್‌.  ಒಟ್ಟು 255 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹೊಂದಿರುವ ಯುವಿ ಶ್ರೀಮಂತಿಕೆಯಲ್ಲಿ ನಂ.6ರಲ್ಲಿದ್ದಾರೆ.. ಹೀಗೆ ಕ್ರಿಕೆಟ್‌ ಮೂಲಕ ಜನಪ್ರಿಯತೆ ಗಳಿಸಿರುವ ಈ ಆಟಗಾರರು ತಮ್ಮ ಹಾರ್ಡ್‌ವರ್ಕ್‌ ಮತ್ತು ಕ್ರಿಕೆಟ್‌ ಬಗೆಗಿನ ಬದ್ಧತೆಯಿಂದಾಗಿ ಶ್ರೀಮಂತಿಕೆಯಲ್ಲಿಯೂ ಟಾಪ್‌ನಲ್ಲಿರುವುದು ಗಮನಾರ್ಹ..

Shwetha M