ಸಿಎಂ ಶ್ರೀಮಂತಿಕೆಯ ಲೆಕ್ಕವೇನು? – ರಿಚ್ ರಿಪೋರ್ಟ್‌ ಹೇಗೆ ರೆಡಿಯಾಗುತ್ತೆ?
ಸಿದ್ದರಾಮಯ್ಯ ದಿಢೀರ್ ಶ್ರೀಮಂತರಾದ್ರಾ?

ಸಿಎಂ ಶ್ರೀಮಂತಿಕೆಯ ಲೆಕ್ಕವೇನು? – ರಿಚ್ ರಿಪೋರ್ಟ್‌ ಹೇಗೆ ರೆಡಿಯಾಗುತ್ತೆ?ಸಿದ್ದರಾಮಯ್ಯ ದಿಢೀರ್ ಶ್ರೀಮಂತರಾದ್ರಾ?

ದೇಶದಲ್ಲಿ ಶ್ರೀಮಂತ ಸಿಎಂಗಳ ಪಟ್ಟಿ ರಿಲೀಸ್ ಆದ ಮೇಲೆ ಸಾಕಷ್ಟು ಚರ್ಚೆ ಆಗುತ್ತಿದೆ.. ಬಡವರು ಅಂತ ಅನ್ಕೊಂಡವರು ಇಷ್ಟು ದೊಡ್ಡ ಶ್ರೀಮಂತರ ಅನ್ನೋ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ದೇಶದ ನಂ.1 ಶ್ರೀಮಂತ ಸಿಎಂ ಪಟ್ಟಿಯಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸಿರಿವಂತ ಮುಖ್ಯಮತ್ರಿಯಾಗಿದ್ದಾರೆ. 931ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಭಾರತದ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖುಂಡು 2ನೇ ಸ್ಥಾನದಲ್ಲಿದ್ದರೆ, 332 ಕೋಟಿ ಆಸ್ತಿಯನ್ನ ಹೊಂದಿದ್ದಾರೆ.  ಕರ್ನಾಟಕ ಸಿಎಂ ಸಿದ್ದರಾಮಯ್ಯ ಮೂರನೇ ಸ್ಥಾನದಲ್ಲಿದ್ದಾರೆ. 51 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ) ಈ ಮೂರು ಜನ ಶ್ರೀಮಂತ ಸಿಎಂ ಆದ್ರೆ, ಅತೀ ಬಡವ ಶ್ರೀಮಂತರು ಯಾರು ಅಂತ ಕೇಳಿದ್ರೆ ಶಾಕ್ ಆಗ್ತೀರಾ.. ಕೇವಲ 15 ಲಕ್ಷ ಮೌಲ್ಯದ ಆಸ್ತಿ ಹೊಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇಶದ  ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ :ಭಾರತದ ಸೋಲಿಗೆ ಮಾಜಿ ಕ್ರಿಕೆಟಿಗರ ಅಸಮಾಧಾನ – ಮಾಡಿದ ತಪ್ಪನ್ನ ಮಾಡುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದ ಮಾಜಿ ಆಟಗಾರರು

ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಈ ವರದಿಯನ್ನ ನೀಡುತ್ತೆ. ಪ್ರತಿವರ್ಷ ಸಿಎಂಗಳು ಲೋಕಾಯುಕ್ತಕ್ಕೆ ನೀಡುವ ಲೆಕ್ಕವನ್ನ ಆಧರಿಸಿ ಹಾಗೂ  ಎಲೆಕ್ಷನ್ ಟೈಂನಲ್ಲಿ ಘೋಷಣೆ ಮಾಡಿಕೊಂಡ ಆಸ್ತಿ ಮೇಲೆ ಯಾರೆಲ್ಲಾ ಶ್ರೀಮಂತರು ಅಂತ ಘೋಷಣೆ ಮಾಡಲಾಗುತ್ತೆ.. ಉದಾಹರಣೆಗೆ ಕಳೆದ ವಿಧಾನಸಭಾ ಎಲೆಕ್ಷನ್‌ನಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಕೆ ವೇಳೆ  21.35 ಕೋಟಿ ರೂ. ಚರಾಸ್ತಿ, 29.42 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟಾರೆ 50.77 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನ ಇಟ್ಟುಕೊಂಡು ಪಟ್ಟಿ ತಯಾರು ಮಾಡ್ತಾರೆ. ಇದ್ರ ಜೊತೆ ಸಿಎಂ ಸಂಬಳ, ಬೇರೆ ಎಲ್ಲಾದ್ರೂ ಇನ್‌ವೆಸ್ಟ್ ಮಾಡಿದ್ದಾರಾ ಅನ್ನೋದನ್ನ ಲೆಕ್ಕಹಾಕಿ ಪಟ್ಟಿ ರಿಲೀಸ್ ಮಾಡ್ತಾರೆ.. ಅವರ ಹೆಸರಲ್ಲಿ ಇರೋ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿಯನ್ನ ಮಾತ್ರ ಇಲ್ಲಿ ಪರಿಗಣನೆ ತೆಗೆದುಕೊಳ್ಳುತ್ತಾರೆ.

ಮಮತಾ ಬ್ಯಾನರ್ಜಿ 2021ರ ಎಲೆಕ್ಷನ್ ಟೈಂನಲ್ಲಿ ಅವರ ಆಸ್ತಿ 16 ಲಕ್ಷ ಅಂತ ಘೋಷಣೆ ಮಾಡಿಕೊಂಡಿದ್ರು, ಆದ್ರೆ ADR ಪ್ರಕಾರ ಮಮತಾ ಆಸ್ತಿ ಈಗ 15 ಲಕ್ಷ.. ಅಂದ್ರೆ ಇಲ್ಲಿ ಕಮ್ಮಿನೇ ಆಗಿದೆ ಹೊರತು ಜಾಸ್ತಿ ಆಗಿಲ್ಲ.. ಹೀಗಾಗಿ ದೇಶದ ಬಡ ಸಿಎಂಗಳ ಪೈಕಿ ಮಮತಾ ನಂ1 ಸ್ಥಾನದಲ್ಲಿದ್ದಾರೆ. ಹಾಗೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಎಲೆಕ್ಷನ್ ಟೈಂನಲ್ಲಿ 1 ಕೋಟಿ 94 ಸಾವಿರ ಅಂತ ತಮ್ಮ ಆಸ್ತಿಯನ್ನ ಘೋಷಣೆ ಮಾಡಿಕೊಂಡಿದ್ರು..  ಸಿಎಂ ಯೋಗಿ ಆದಿತ್ಯನಾಥ್​ ಬಳಿ ಜಮೀನು ಮತ್ತು ಮನೆ ಇಲ್ಲ. ರಾಷ್ಟ್ರೀಯ ಉಳಿತಾಯ ಯೋಜನೆಗಳು ಮತ್ತು ವಿಮಾ ಪಾಲಿಸಿಗಳ ಮೂಲಕ ಅವರು 37.57 ಲಕ್ಷ ರೂ. ಹೂಡಿಕೆ ಮಾಡಲಾಗಿದೆ ಎಂದು ಘೋಷಿಸಿದ್ರು.. ಅವರು ಘೋಷಣೆ ಮಾಡಿಕೊಂಡಿದ್ದು ಎರಡು ವರ್ಷಗಳ ಹಿಂದೆ.. ಅದು ಈಗ ಮತ್ತಷ್ಟು ಹೆಚ್ಚಳ ಆಗಿರುತ್ತೆ.. ಆದ್ರೆ ಈ ವರದಿ ಪ್ರಕಾರ ಅವರ ಬಳಿ ಇರೋದು 1 ಕೋಟಿ ಆಸ್ತಿ ಎಂದು ADR ಹೇಳಿದೆ.. ಹೀಗೆ ಸ್ವಲ್ಪ ಆ ಕಡೆ ಈ ಕೆಡ ಆಗುತ್ತೆ.. ಹಾಗಂತ ಈ ಎಲ್ಲಾ ಸಿಎಂಗಳ  ಬಳಿ ಇಷ್ಟು ಮಾತ್ರ ದುಡ್ಡು ಇರೋದು ಅಂತ ಅಂದುಕೊಂಡ್ರೆ ಅದು ನಮ್ಮ ತಪ್ಪು. ಹಾಗಂತ ಭಾರಿ ದುಡ್ಡು ಇದೆ ಅನ್ಕೊಳ್ಳುವುದು ಕೂಡ ತಪ್ಪು..  ದೇಶ ಎಷ್ಟೋ ಸಿಎಂಗಳು ಅವರಿಗೆ ಬರೋ ಸರ್ಕಾರಿ ಸಂಬಳವನ್ನ ಕೂಡ ಪಾರ್ಟಿಗೆ ಕೊಟ್ಟು, ಪಾರ್ಟಿಯಿಂದ ಸಂಬಳವನ್ನ ಪಡೆಯುತ್ತಾರೆ.. 1 ಲಕ್ಷ ಸರ್ಕಾರದಿಂದ ಸಿಎಂ ಸಂಬಳ ಬಂದ್ರೆ ಅದನ್ನ ಪಾರ್ಟಿಗೆ ಕೊಟ್ಟು ಪಾರ್ಟಿಯಿಂದ 15 ಸಾವಿರದಂತೆ ಸಂಬಳವನ್ನ ಪಡೆಯುವ ಸಿಎಂಗಳು ಇದ್ದಾರೆ… ಆದ್ರೆ ಸಾಕಷ್ಟು ಸಿಎಂಗಳ ಆಸ್ತಿ ದಿನಕಳೆದಂತೆ ಹೆಚ್ಚುತ್ತಲೇ ಹೋಗುತ್ತೆ..ಅವರ ಸಂಬಳ.. ತಮಗೆ ಬಂದ ಹಣವನ್ನ  ಯಾವುದಾದ್ರು ಮೇಲೆ Invest ಮಾಡಿದ್ರೆ ಅದು ಡಬಲ್ ಆಗೇ ಆಗುತ್ತೆ.. ಹೀಗಾಗಿ ಇವೆಲ್ಲಾ ಲೆಕ್ಕಹಾಕಿ ADR ಈ ವರದಿಯನ್ನ ಬಿಡುಗಡೆ ಮಾಡುತ್ತೆ.. ಈ ಲಿಸ್ಟ್ ನಲ್ಲಿ ಯಾರು  ಕೂಡ ಸಾವಿರ ಕೋಟಿ ಮೇಲೆ ಯಾವ ಸಿಎಂ ಕೂಡ ಇಲ್ಲ.. 90 % ಸಿಎಂ 50 ಕೋಟಿಗಿಂತ ಕಡಿಮೆ ಸಂಬಳದವರೇ ಇದ್ದಾರೆ.. ಇದು ಹೇಗೆ ಅಂದ್ರೆ ಬಡವರಲ್ಲಿ ಯಾರು ಶ್ರೀಮಂತ ಅನ್ನೋ ಹಾಗೇ..  ಈ ಪಟ್ಟಿ ರಿಲೀಸ್ ಆದ ಮೇಲೆ ಸಿಎಂ ಸಿದ್ದರಾಮಯ್ಯರನ್ನ ಸಾಕಷ್ಟು ತರದಲ್ಲಿ ಟ್ರೋಲ್ ಮಾಡಲಾಗುತ್ತಿದೆ..

 

Kishor KV