ಹಾಲು ಕುಡಿಯದವರಿಗೆ ಕ್ಯಾಲ್ಸಿಯಂ ಎಲ್ಲಿ ಸಿಗುತ್ತೆ? –  ಕ್ಯಾಲ್ಸಿಯಂ ಸರಿಯಾಗಿ ಸೇವಿಸಿಲ್ಲವೆಂದ್ರೆ ಏನಾಗುತ್ತೆ?

ಹಾಲು ಕುಡಿಯದವರಿಗೆ ಕ್ಯಾಲ್ಸಿಯಂ ಎಲ್ಲಿ ಸಿಗುತ್ತೆ? –  ಕ್ಯಾಲ್ಸಿಯಂ ಸರಿಯಾಗಿ ಸೇವಿಸಿಲ್ಲವೆಂದ್ರೆ ಏನಾಗುತ್ತೆ?

ದೇಹದ ಮೂಳೆಗಳು ಗಟ್ಟಿಯಾಗಿರಬೇಕು ಅಂದ್ರೆ ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಅತ್ಯವಶ್ಯಕ.. ಕ್ಯಾಲ್ಸಿಯಂ ಹೆಚ್ಚಿರುವ ಮತ್ತು ಸುಲಭವಾಗಿ ಸಿಗುವ ಆಹಾರ ಅಂದ್ರೆ ಹಾಲು.. ಆದ್ರೆ ಕೆಲವರಿಗೆ ಹಾಲು ಕುಡಿದ್ರೂ ಆಗಲ್ಲ.. ಒಂದು ಗ್ಲಾಸ್ ಹಾಲು ಕುಡಿದ್ರೂ ಹೊಟ್ಟೆ ಹಾಳಾಗುವವರಿದ್ದಾರೆ.. ಹಾಗಾಗಿ ಹಾಲು ಸೇವಿಸೋದಿಕ್ಕೂ ಆಗಲ್ಲ.. ಹಾಲು ಕುಡಿಯದಿದ್ರೂ ಕ್ಯಾಲ್ಸಿಯಂಯುಕ್ತ ಪದಾರ್ಥಗಳನ್ನು ಸೇವಿಸಲೇಬೇಕು.. ಹಾಲಿನ ಬದಲು ಯಾವ ಆಹಾರ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ದೊರೆಯುತ್ತದೆ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ತಾಯಿಯ ಎದೆಹಾಲಿನಷ್ಟೇ ಸಮಾನ ಕತ್ತೆ ಹಾಲು – ಕತ್ತೆ ಹಾಲು ಸೇವಿಸಿದ್ರೆ ಎಷ್ಟೆಲ್ಲಾ ಪ್ರಯೋಜನ?

ಹಾಲು ಕುಡಿದರೆ ಆಗದೇ ಇರುವವರು ತಿನ್ನಲೇಬೇಕಾದ ಆಹಾರ ಅಂದ್ರೆ ಎಳ್ಳು.. ಎಳ್ಳುಂಡೆ ಅಥವಾ ಎಳ್ಳಿನ ಪಾನಕ ಮಾಡಿ ಕುಡಿದ್ರೆ ಹಾಲಿನಷ್ಟೇ ಕ್ಯಾಲ್ಸಿಯಂ ದೇಹಕ್ಕೆ ಸಿಗುತ್ತದೆ. ಹತ್ತು ಗ್ರಾಂನಷ್ಟು ಎಳ್ಳಿನಲ್ಲಿ 140 ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ ಸಿಗುತ್ತದೆ.. ಅದೇ ಹಾಲಿನಲ್ಲಾದ್ರೆ 200ಎಂಎಲ್‌ನಲ್ಲಿ240 ಮಿಲಿಗ್ರಾಂನಷ್ಟು ಕ್ಯಾಲ್ಸಿಯಂಮಾತ್ರ ಸಿಗುತ್ತದೆ.. ಹಾಗಂತ ಕೇವಲ ಎಳ್ಳು ಮಾತ್ರವಲ್ಲ.. ಹುರುಳಿ ಕೂಡ ಅತಿಹೆಚ್ಚು ಕ್ಯಾಲ್ಸಿಯಂಯುಕ್ತ ಆಹಾರವಾಗಿದೆ..

ಇನ್ನು ಒಂದು ಗ್ಲಾಸ್‌ನಷ್ಟು ಕ್ಯಾರೆಟ್‌ ಜ್ಯೂಸ್ ಮಾಡಿ ಕುಡಿದ್ರೂ ದೇಹಕ್ಕೆ ಬೇಕಷ್ಟು ಕ್ಯಾಲ್ಸಿಯಂ ದೊರೆಯುತ್ತದೆ.. ಕ್ಯಾರೆಟ್‌ ಜೊತೆಗೆ 50 ಗ್ರಾಂನಷ್ಟು ಪಾಲಕ್‌ ಸೊಪ್ಪು ಸೇರಿಸಿ ಜ್ಯೂಸ್‌ ಮಾಡಿದ್ರೆ ಇನ್ನೂ ಉತ್ತಮ ಎಂದು ಪೌಷ್ಟಿಕಾಂಶ ತಜ್ಞರು ಸಲಹೆ ನೀಡುತ್ತಾರೆ.. ಇನ್ನು ಅಂಜೂರ ಹಾಗೂ ಬಾದಾಮಿ ಕೂಡ ಅತಿಹೆಚ್ಚು ಕ್ಯಾಲ್ಸಿಯಂ ಹೊಂದಿರುವ ಆಹಾರಗಳಾಗಿವೆ. ಜೊತೆಗೆ ಕಿತ್ತಳೆ ಹಣ್ಣಿನಲ್ಲೂ ವಿಟಮಿನ್‌ ಸಿ ಮತ್ತು ಕ್ಯಾಲ್ಸಿಯಂ ಅಂಶಗಳು ದೊರೆಯುತ್ತವೆ.. ಹಾಗೆಯೇ ಬ್ರೂಕೊಲಿಯನ್ನು ನಿಮ್ಮ ಆಹಾರದ ಪಟ್ಟಿಯಲ್ಲಿ ಸೇರಿಸಲು ಮರೆಯಬೇಡಿ.. ಯಾಕಂದ್ರೆ ಬ್ರೂಕೊಲಿಯಲ್ಲೂ ದೇಹಕ್ಕೆ ಅತ್ಯಗತ್ಯವಿರುವ ಕ್ಯಾಲ್ಸಿಯಂ ದೊರೆಯುತ್ತದೆ.. ಇದಲ್ಲದೆ ರಾಜ್ಮಾ ಕಾಳು, ಕಾಬೂಲ್‌ ಕಡಲೆಯಿಂದಲೂ ಕ್ಯಾಲ್ಸಿಯಂ ಸಿಗುತ್ತದೆ.. ಹೀಗೆ ಹಾಲು ಕುಡಿದ್ರೆ ಆಗಲ್ಲ ಅಂತ ಇರುವವರು  ದೇಹದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.. ಹಾಲಿನ ಬದಲು ಬೇರೆ ಆಹಾರವನ್ನು ಡಯೆಟ್‌ನಲ್ಲಿ ಸೇರಿಸಿಕೊಳ್ಳುವುದು ಉತ್ತಮ.. ಯಾಕಂದ್ರೆ ಕ್ಯಾಲ್ಸಿಯಂ ನಿಗದಿತ ಪ್ರಮಾಣದಲ್ಲಿ ಸಿಗುತ್ತಿದ್ದರೆ ಮಾತ್ರ ದೇಹದ ಮೂಳೆಗಳು ಗಟ್ಟಿಯಾಗಿರುತ್ತವೆ.. ಇಲ್ಲದೇ ಹೋದ್ರೆ ಮಂಡಿ ನೋವು, ಮೂಳೆ ನೋವು, ಸಂದಿ ನೋವು ಅಂತ ಒಂದಿಲ್ಲೊಂದು ನೋವಿನಿಂದ ಬಳಲುತ್ತಿರಬೇಕಾಗುತ್ತದೆ.

Shwetha M