ಸನ್ನೆಗೆ ಪ್ರತಿಸನ್ನೆ, ಅತಿರೇಕದ ವರ್ತನೆ – ಕ್ರಿಕೆಟ್ ಆಟವೆಂದರೆ ಕಿತ್ತಾಟವೇ ? – ಕೊಹ್ಲಿ ಮಾಡಿದ್ದೇನು?

ಸನ್ನೆಗೆ ಪ್ರತಿಸನ್ನೆ, ಅತಿರೇಕದ ವರ್ತನೆ – ಕ್ರಿಕೆಟ್ ಆಟವೆಂದರೆ ಕಿತ್ತಾಟವೇ ? – ಕೊಹ್ಲಿ ಮಾಡಿದ್ದೇನು?

ಕ್ರಿಕೆಟ್ ಆಟ ಬರೀ ಕ್ರೀಡೆಯಲ್ಲ.. ಕೋಟಿ ಕೋಟಿ ಅಭಿಮಾನಿಗಳ ಭಾವನೆಗಳ ಪ್ರತೀಕವೂ ಹೌದು. ಕ್ರಿಕೆಟ್ ಆಟಗಾರರು ಅದೆಷ್ಟೋ ಅಭಿಮಾನಿಗಳ ಪಾಲಿನ ಹೀರೋ ಕೂಡಾ ಹೌದು.. ಕ್ರಿಕೆಟಿಗರು ಅಭಿಮಾನಿಗಳಿಗೆ ಸ್ಪೂರ್ತಿಯಾಗಿರುತ್ತಾರೆ. ಜೊತೆಗೆ ರೋಲ್ ಮಾಡೆಲ್ ಆಗಿರುತ್ತಾರೆ. ಆದರೆ, ಈ ಬಾರಿ ಐಪಿಎಲ್ ಬರೀ ಕಿತ್ತಾಟಕ್ಕೆ ಕಾರಣವಾಗುತ್ತಿದೆ. ಆಟದ ಮಧ್ಯೆ ತೋರಿಸುವ ಆಕ್ರೋಶ, ಅತಿರೇಕದ ವರ್ತನೆ ಇದೀಗ ಚರ್ಚೆಗೂ ಕಾರಣವಾಗಿದೆ. ಸನ್ನೆಗೆ ಪ್ರತಿಸನ್ನೆ, ಆವೇಶದ ಸಂಭ್ರಮ ಇದು ಕ್ರಿಕೆಟ್ ಆಟಕ್ಕೆ ಶೋಭೆ ತರುತ್ತಾ ಅನ್ನೋ ಮಾತು ಕೇಳಿಬರುತ್ತಿದೆ. ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ನಡೆದಿದ್ದು ಅಕ್ಷರಶಃ ಕಿತ್ತಾಟ.

ಇದನ್ನೂ ಓದಿ: ಪಾನಿಪೂರಿ ಮಾರುತ್ತಿದ್ದ ಹುಡುಗ ಈಗ ಕ್ರಿಕೆಟ್ ಜಗತ್ತಿನ ಹೀರೋ – ಜೈಸ್ವಾಲ್ ಯಶಸ್ಸಿನ ಹಿಂದಿದೆ ರೋಚಕ ಕಥೆ..!

ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 1 ವಿಕೆಟ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲಿಸಿತ್ತು. ಈ ಗೆಲುವಿನ ಸಂಭ್ರಮದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಆರ್‌ಸಿಬಿ ಪ್ರೇಕ್ಷಕರನ್ನು ಗುರಿಯಾಗಿಸಿ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದ್ದರು. ಈ ಸನ್ನೆಯನ್ನು ನೋಡಿದ ವಿರಾಟ್ ಕೊಹ್ನಿ ಮನಸಲ್ಲಿ ಅದೆಂಥಾ ಸೇಡಿನ ಕಿಚ್ಚಿತ್ತೋ.. ಇದೀಗ ಲಕ್ನೋ ತಂಡವನ್ನು ಸೋಲಿಸಿದ ವಿರಾಟ್ ಕೊಹ್ಲಿ, ಅದೇ ರೀತಿ ಸನ್ನೆ ಮಾಡುವ ಮೂಲಕ ಗೌತಮ್ ಗಂಭೀರ್ ಅವರ ನಡೆಗೆ ಪ್ರತ್ಯುತ್ತರ ನೀಡಿದ್ದಾರೆ.

ಕೃನಾಲ್ ಪಾಂಡ್ಯ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದಾಗ, ಕಿಂಗ್ ಕೊಹ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ಮುಖ ಮಾಡಿದರು. ಅಭಿಮಾನಿಗಳತ್ತ ಮುಖ ಮಾಡಿದ ಕೊಹ್ಲಿ ಫ್ಲೈ ಕಿಸ್ ನೀಡಿ, ಮತ್ತೆ ಸನ್ನೆ ಮಾಡಿದರು. ಆರ್‌ಸಿಬಿ ಲೋಗೋ ಮುಟ್ಟಿ ಸೂಚನೆ ನೀಡಿದರು. ಇದೀಗ ಲಕ್ನೋನದಲ್ಲಿ ನೆರೆದಿದ್ದ ಪ್ರೇಕ್ಷಕರತ್ತ ವಿರಾಟ್ ಕೊಹ್ಲಿ ನೀಡಿದ ಸೂಚನೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತ್ತ ಲಕ್ನೋ ಸೂಪರ್ ಜೈಂಟ್ಸ್ ಅಭಿಮಾನಿಗಳು ಕೊಹ್ಲಿಯ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇತ್ತ ಆರ್‌ಸಿಬಿ ಅಭಿಮಾನಿಗಳು ಕಿಂಗ್ ಕೊಹ್ಲಿಯ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಕ್ರಿಕೆಟ್ ಆಟದ ಗಂಭೀರತೆಗೆ ತಕ್ಕದಲ್ಲ ಅನ್ನೋ ಮಾತು ಕೂಡಾ ಕೇಳಿಬರುತ್ತಿದೆ. ಕ್ರಿಕೆಟ್ ನ್ನು ಆಟವಾಗಿಯೇ ನೋಡಬೇಕು. ಅಭಿಮಾನಿಗಳಂತೂ ರೊಚ್ಚಿಗೇಳೋದು ಇದ್ದೇ ಇರುತ್ತದೆ. ಈಗ ವಿರಾಟ್ ಕೊಹ್ಲಿ ಕೂಡಾ ಈ ರೀತಿ ರೊಚ್ಚಿಗೆದ್ದು ಅತಿರೇಕವಾಗಿ ನಡೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಅನ್ನೋ ಮಾತು ಕೂಡಾ ಕೇಳಿಬರುತ್ತದೆ.

suddiyaana