ಪಾಸ್ ಪೋರ್ಟ್ ರ‍್ಯಾಂಕಿಂಗ್ ಬಿಡುಗಡೆ- ಎಲ್ಲಿದೆ ಭಾರತದ ಸ್ಥಾನ?

ಪಾಸ್ ಪೋರ್ಟ್ ರ‍್ಯಾಂಕಿಂಗ್ ಬಿಡುಗಡೆ- ಎಲ್ಲಿದೆ ಭಾರತದ ಸ್ಥಾನ?

ಇಸ್ಲಾಮಾಬಾದ್‌: 2023ನೇ ಸಾಲಿನ ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಭಾರತ ಸ್ಥಾನ ಈ ಬಾರಿಯೂ ಸುಧಾರಿಸಿಲ್ಲ. ಹೊಸದಾಗಿ ಬಿಡುಗಡೆಮಾಡಿರುವ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಭಾರತಕ್ಕೆ 85 ಸ್ಥಾನ ಲಭಿಸಿದೆ.

ಬೇರೆ-ಬೇರೆ ತಾಣಗಳಿಗೆ ವೀಸಾ ಮುಕ್ತ ಪ್ರವೇಶಕ್ಕೆ ಅನುಮತಿಸುವ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಿ ಹೆನ್ಲಿ ಪಾಸ್‌ಪೋರ್ಟ್‌ ತನ್ನ ಸೂಚ್ಯಂಕವನ್ನು ಬಿಡುಗಡೆಗೊಳಿಸಿದೆ. ಪ್ರಸಕ್ತ ಸಾಲಿನ ಪಾಸ್‌ಪೋರ್ಟ್‌ ಶ್ರೇಯಾಂಕದಲ್ಲಿ ಭಾರತದ ಪಾಸ್‌ಪೋರ್ಟ್‌ಗೆ 85ನೇ ಸ್ಥಾನ ಸಿಕ್ಕಿದೆ. 2019, 2020, 2021 ಮತ್ತು 2022ನೇ ಸಾಲಿನಲ್ಲಿ ಕ್ರಮವಾಗಿ 82, 84, 85 ಮತ್ತು 83 ನೇ ಸ್ಥಾನ ಪಡೆದಿತ್ತು.

ಇದನ್ನೂ ಓದಿ: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ‘ಆರ್‌ಆರ್‌ಆರ್’ – ಪ್ರತಿಷ್ಠಿತ ಪ್ರಶಸ್ತಿ ಪಡೆದ ತಂಡಕ್ಕೆ ಮೋದಿ ಅಭಿನಂದನೆ

ಹೆನ್ಲಿ ಪಾಸ್‌ಪೋರ್ಟ್‌ ಬಿಡುಗಡೆ ಮಾಡಿದ ಸೂಚ್ಯಂಕದಲ್ಲಿ 193 ಜಾಗತಿಕ ತಾಣಗಳಿಗೆ ವೀಸಾ ಮುಕ್ತ ಪ್ರಯಾಣ ಅವಕಾಶ ಹೊಂದುವ ಮೂಲಕ ಜಪಾನ್‌ ಪಾಸ್‌ಪೋರ್ಟ್‌ ಸತತ 5ನೇ ವರ್ಷ ಅತ್ಯಂತ ಪ್ರಭಾವ ಶಾಲಿಯಾಗಿದೆ.  ಪಾಕಿಸ್ತಾನ ಅತ್ಯಂತ ದುರ್ಬಲ ಪಾಸ್‌ಪೋರ್ಟ್‌ ಹೊಂದಿರುವ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದು, ಕಳೆದ ವರ್ಷದ ಶ್ರೇಯಾಂಕದಲ್ಲಿಯೇ ಮುಂದುವರಿದಿದೆ. ಅಗ್ರ 5ರ ಪಟ್ಟಿಯಲ್ಲಿ ಸಿಂಗಾಪುರ, ದಕ್ಷಿಣ ಕೊರಿಯಾ, ಜರ್ಮನಿ ಹಾಗೂ ಸ್ಪೇನ್‌ ಸೇರಿವೆ. ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ 22 ರಾಷ್ಟ್ರಗಳ ಸಾಲಿನಲ್ಲಿ ಇದೆ.

suddiyaana