2023ರ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿ ಬಿಡುಗಡೆ – ಅಮೆರಿಕ ಫಸ್ಟ್.. ಭಾರತಕ್ಕೆ ಎಷ್ಟನೇ ಸ್ಥಾನ?

2023ರ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿ ಬಿಡುಗಡೆ – ಅಮೆರಿಕ ಫಸ್ಟ್.. ಭಾರತಕ್ಕೆ ಎಷ್ಟನೇ ಸ್ಥಾನ?

ದಿನಗಳು ಉರುಳಿದಂತೆ ರಾಷ್ಟ್ರಗಳು ಕೂಡ ಬಲಿಷ್ಠವಾಗುತ್ತಿವೆ. ಅದರಲ್ಲೂ ಕೆಲ ರಾಷ್ಟ್ರಗಳು ತಮ್ಮ ಪ್ರಾಬಲ್ಯವನ್ನ ಮತ್ತಷ್ಟು ಮುಂದುವರಿಸಿಕೊಂಡು ಹೋಗುತ್ತಿವೆ. 2023 ರ ಜಾಗತಿಕ ಶಕ್ತಿ ಶ್ರೇಯಾಂಕಗಳಲ್ಲಿ, ಯುನೈಟೆಡ್ ಸ್ಟೇಟ್ಸ್, ಚೀನಾ, ರಷ್ಯಾ ವಿಶ್ವದ ಅತ್ಯಂತ ಪ್ರಬಲ ಮತ್ತು ಶಕ್ತಿಯುತ ರಾಷ್ಟ್ರಗಳಾಗಿವೆ. ಅವು ‘ಅತ್ಯುತ್ತಮ ದೇಶಗಳು’ ಅಧ್ಯಯನದ ಭಾಗವಾಗಿ ನಡೆಸಲಾದ ಈ ಮೌಲ್ಯಮಾಪನದಲ್ಲಿ ಒಟ್ಟು 17,000 ವ್ಯಕ್ತಿಗಳನ್ನು ಮತ್ತು 87 ವೈವಿಧ್ಯಮಯ ದೇಶಗಳ ಕುರಿತು ಅವರ ಅಭಿಪ್ರಾಯಗಳ ಸಮೀಕ್ಷೆಯನ್ನು ಒಳಗೊಂಡಿದೆ. ಈ ಸಮೀಕ್ಷೆಯ ಭಾಗವಾಗಿ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯದಂತಹ ಅಂಶಗಳನ್ನು ಪರಿಗಣಿಸಲಾಗಿದೆ. ಇದರ ಅನ್ವಯ ಯಾವ ದೇಶಗಳು ಶಕ್ತಿಶಾಲಿ ಎಂಬುದನ್ನು ವಿಶ್ಲೇಷಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್

ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಅಗ್ರಸ್ಥಾನವನ್ನು ಪಡೆದಿದೆ. ದೇಶವು ಶಕ್ತಿ ಶ್ರೇಯಾಂಕದಲ್ಲಿ ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಎತ್ತಿ ತೋರಿಸಿದೆ. ಸುಮಾರು $25.5 ಟ್ರಿಲಿಯನ್ GDP ಹೊಂದಿರುವುದು ಮಾತ್ರವಲ್ಲದೇ, ತಾಂತ್ರಿಕವಾಗಿ ಮುಂದುವರಿದ ದೇಶ ಎಂದು ಕೂಡ ಹೆಗ್ಗಳಿಕೆ ಪಡೆದಿದೆ. ನ್ಯಾಟೋ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರಗಳನ್ನು ಹೊಂದಿದೆ.

ಚೀನಾ

ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಚೀನಾ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಹೌದು, ಅಧ್ಯಯನದ ಪ್ರಕಾರ ಭೂಪ್ರದೇಶ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಚೀನಾ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಮಾನವ ಹಕ್ಕುಗಳ ಕಾಳಜಿ, ಪರಮಾಣು ಸಾಮರ್ಥ್ಯಗಳು ಮತ್ತು ಪ್ರಭಾವಶಾಲಿ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿನ ಸದಸ್ಯತ್ವವು ಅದರ ಶಕ್ತಿಯ ಶ್ರೇಯಾಂಕವನ್ನು ಹೆಚ್ಚಿಸುತ್ತದೆ.

ರಷ್ಯಾ

ರಷ್ಯಾ ಹಾಗು ಉಕ್ರೇನ್‌ ಯದ್ದದ ನಡುವೆಯೂ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ 3 ನೇ ಸ್ಥಾನವನ್ನು ಪಡೆದಿದೆ ಎಂದು ಅಧ್ಯಯನಗಳು ತಿಳಿಸಿವೆ. ಕೈಗಾರಿಕೆಗಳು, ಸಾಂಸ್ಕೃತಿಕ ಕೊಡುಗೆಗಳು ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿನ ಇತಿಹಾಸವನ್ನು ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. ಅಲ್ಲದೆ, ರಷ್ಯಾ G20 ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂತಹ ಮಹತ್ವದ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಹೊಂದಿದೆ.

ಜರ್ಮನಿ

ವಿಶ್ವದ ಅತ್ಯಂತ ಪ್ರಭಾವಶಾಲಿ ದೇಶಗಳಲ್ಲಿ ಜರ್ಮನಿ 4 ನೇ ಸ್ಥಾನದಲ್ಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿಗಳು, ಅಸಾಧಾರಣ ಆರ್ಥಿಕ ಸಾಮರ್ಥ್ಯದಿಂದಾಗಿ ಉನ್ನತ ಸ್ಥಾನವನ್ನು ಅಲಂಕರಿಸಿದೆ. ಅಲ್ಲದೆ, ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದನ್ನು ಹೊಂದಿರುವ ಅತ್ಯಂತ ಜನಸಂಖ್ಯೆಯುಳ್ಳ EU ರಾಷ್ಟ್ರವಾಗಿ, ವ್ಯಾಪಕ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಇದು UN, EU, NATO ಮತ್ತು OECD ಯಂತಹ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾಗವಹಿಸುತ್ತದೆ.

ಯುನೈಟೆಡ್ ಕಿಂಗ್ಡಮ್

5 ನೇ ಸ್ಥಾನವನ್ನು ಅಲಂಕರಿಸಿರುವ ಯುನೈಟೆಡ್ ಕಿಂಗ್ಡಮ್ ವಿಶ್ವದ ಅತ್ಯಂತ ಪ್ರಭಾವಶಾಲಿ ದೇಶವಾಗಿದೆ. ರಾಜಕೀಯ, ಅರ್ಥಶಾಸ್ತ್ರ, ಸಂಸ್ಕೃತಿ ಮತ್ತು ವಿಜ್ಞಾನದಲ್ಲಿ ಮಹತ್ವದ ಅಂತರರಾಷ್ಟ್ರೀಯ ಪ್ರಭಾವವನ್ನು ಹೊಂದಿದೆ. ಅಲ್ಲದೆ, ಹೆಚ್ಚು ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. UK ವಿವಿಧ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾಗವಹಿಸುತ್ತದೆ ಮತ್ತು ಶಾಶ್ವತ UN ಭದ್ರತಾ ಮಂಡಳಿ ಸ್ಥಾನವನ್ನು ಹೊಂದಿದೆ.

ದಕ್ಷಿಣ ಕೊರಿಯಾ

ಪ್ರಪಂಚದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ದಕ್ಷಿಣ ಕೊರಿಯಾ 6 ನೇ ಸ್ಥಾನದಲ್ಲಿದೆ.

ಫ್ರಾನ್ಸ್

ಪ್ರಪಂಚದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಫ್ರಾನ್ಸ್ 7 ನೇ ಸ್ಥಾನದಲ್ಲಿದೆ.

ಜಪಾನ್

ಪ್ರಪಂಚದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಜಪಾನ್ 8 ನೇ ಸ್ಥಾನದಲ್ಲಿದೆ.

ಸೌದಿ ಅರೇಬಿಯಾ

ಪ್ರಪಂಚದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಸೌದಿ ಅರೇಬಿಯಾ 9 ನೇ ಸ್ಥಾನದಲ್ಲಿದೆ.

ಭಾರತ

ಪ್ರಪಂಚದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಭಾರತ 12 ನೇ ಸ್ಥಾನದಲ್ಲಿದೆ.

 

Shantha Kumari