ಶಿವ Vs ರಾಮ!, ಬಡವ Vs ಶ್ರೀಮಂತ – ರೇವಂತ್ ರೆಡ್ಡಿ ಹೇಳಿಕೆ ಭಾರಿ ವಿವಾದ!

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಒಂದು ಹೇಳಿಕೆ ಇದೀಗ ದೇಶದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, “ಶಿವ ಬಡವರ ದೇವರು, ರಾಮ ಶ್ರೀಮಂತರ ದೇವರು” ಎಂದು ಹೇಳಿದ್ದಾರೆ. ಜೊತೆಗೆ, ಬಿಜೆಪಿ ‘ಜೈ ಶ್ರೀರಾಮ್’ ಘೋಷಣೆಗೆ ಹೆಚ್ಚಿನ ಒತ್ತು ನೀಡುತ್ತದೆ, ಆದರೆ ‘ಹರ ಹರ ಮಹಾದೇವ್’ ಘೋಷಣೆಯನ್ನು ಯಾಕೆ ಬಳಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ರೇವಂತ್ ರೆಡ್ಡಿ, ಉತ್ತರ ಮತ್ತು ದಕ್ಷಿಣ ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ನಡುವೆಯೂ ಹೋಲಿಕೆ ಮಾಡಿದ್ದಾರೆ. ತಾವು ದ್ರಾವಿಡರು, ಶಿವನ ಭಕ್ತರು; ಉತ್ತರ ಭಾರತದವರು ಆರ್ಯರು, ರಾಮನ ಭಕ್ತರು ಎಂಬ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಬಿಜೆಪಿ ಉತ್ತರ ಭಾರತದಲ್ಲಿ ಚುನಾವಣಾ ಯಶಸ್ಸು ಸಾಧಿಸಲು ರಾಮನನ್ನು ರಾಜಕೀಯ ಸಂಕೇತವಾಗಿ ಬಳಸಿಕೊಂಡಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್ನಲ್ಲಿ ಮತ್ತೆ ಟ್ವಿಸ್ಟ್! ವಿಜಯಲಕ್ಷ್ಮಿ ಮೇಲ್ಮನವಿ.. ಮುಂದೆ ಏನಾಗುತ್ತೆ?
ಈ ಹೇಳಿಕೆಗೆ ಬಿಜೆಪಿ ನಾಯಕರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು, ಧಾರ್ಮಿಕ ವಿಚಾರಗಳನ್ನು ರಾಜಕೀಯವಾಗಿ ಬಳಸಿಕೊಂಡು ಜನರ ನಡುವೆ ವಿಭಜನೆ ಸೃಷ್ಟಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ, ರೇವಂತ್ ರೆಡ್ಡಿ ಅವರ ಈ ಹೇಳಿಕೆ ಇದೀಗ ಶಿವ-ರಾಮ, ಉತ್ತರ-ದಕ್ಷಿಣ ಹಾಗೂ ಬಿಜೆಪಿ-ಕಾಂಗ್ರೆಸ್ ನಡುವಿನ ರಾಜಕೀಯ ಚರ್ಚೆಗೆ ಹೊಸ ಆಯಾಮ ನೀಡಿದೆ.

ನೋಡಿರಿ

