ಮೊದಲು ಸ್ನೇಹ, ನಂತರ ಪ್ರೀತಿ, ಮದುವೆಗೆ ಸಾವಿರ ಸವಾಲು- ಸಿನಿಮಾಕ್ಕಿಂತಲೂ ರೋಚಕ ರೇವಂತ್ ರೆಡ್ಡಿ ಲವ್ ಸ್ಟೋರಿ..!

ಮೊದಲು ಸ್ನೇಹ, ನಂತರ ಪ್ರೀತಿ, ಮದುವೆಗೆ ಸಾವಿರ ಸವಾಲು- ಸಿನಿಮಾಕ್ಕಿಂತಲೂ ರೋಚಕ ರೇವಂತ್ ರೆಡ್ಡಿ ಲವ್ ಸ್ಟೋರಿ..!

ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅವರನ್ನು ಘೋಷಿಸಲಾಗಿದ್ದು, ಡಿಸೆಂಬರ್ 7ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರೇವಂತ್ ರೆಡ್ಡಿ ಯಾರು? ರಾಜಕೀಯ ರಂಗದಲ್ಲಿ ರೇವಂತ್ ರೆಡ್ಡಿ ಪ್ರಭಾವ ಎಷ್ಟಿದೆ? ಅವರನ್ನೇ ಸಿಎಂ ಮಾಡಲು ಕಾರಣಗಳೇನು?. ರೇವಂತ್ ರೆಡ್ಡಿ ಪತ್ನಿ ಯಾರು? ಈ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಮೂರು ರಾಜ್ಯಗಳ ಸೋಲಿನ‌ ಕಹಿ ನಡುವೆ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು! – ರೇವಂತ್ ರೆಡ್ಡಿ ಸೋತರೂ ಸಿಎಂ ಆಗ್ತಾರಾ?

ತೆಲಂಗಾಣದ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅವರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಿದೆ. ಡಿಸೆಂಬರ್ 7ರಂದು ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರೇವಂತ್ ರೆಡ್ಡಿಯವರ ರಾಜಕೀಯ ಜೀವನ ಎಷ್ಟು ರೋಚಕವಾಗಿದೆಯೋ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಥೆಯೂ ಅಷ್ಟೇ ಸ್ವಾರಸ್ಯವಾಗಿದೆ. ರೇವಂತ್ ರೆಡ್ಡಿಯವರದ್ದು ಪ್ರೇಮವಿವಾಹ. ತನ್ನ ಪ್ರೀತಿಯನ್ನು ದಕ್ಕಿಸಿಕೊಳ್ಳಲು ರೇವಂತ್ ರೆಡ್ಡಿ ಪಟ್ಟ ಪಾಡು, ನಂತರ ಪ್ರೀತಿಸಿದ ಹುಡುಗಿಯನ್ನು ಕೈಹಿಡಿದಿದ್ದರು ರೇವಂತ್ ರೆಡ್ಡಿ.

ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ,   ದಿವಂಗತ ನಾಯಕ ಜೈಪಾಲ್ ರೆಡ್ಡಿ ಅವರ ಸಹೋದರನ ಮಗಳು ಗೀತಾ ರೆಡ್ಡಿ ಅವರನ್ನು ರೇವಂತ ರೆಡ್ಡಿ ವರಿಸಿದ್ದರು. ರೇವಂತ್ ರೆಡ್ಡಿ ಅವರದ್ದು  ನಿಜ ಜೀವನದಲ್ಲಿ ಒಂದು ಸುಂದರ ಪ್ರೇಮಕಥೆ. ಅಷ್ಟೇ ಅಲ್ಲ ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ ಇವರ ಲವ್‌ಸ್ಟೋರಿ. ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ ಅವರ ಕಿರಿಯ ಸಹೋದರನ ಮಗಳು. ಕಾಲೇಜು ದಿನಗಳಲ್ಲಿ ಇಬ್ಬರ ನಡುವೆ ಸ್ನೇಹವಾಗಿತ್ತು.

ರೇವಂತ್ ರೆಡ್ಡಿ ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿ ನಾಯಕರಾಗಿ ಹಲವು ಕಾರ್ಯಕ್ರಮಗಳನ್ನು ಹಾಗೂ ಚಳವಳಿಗಳನ್ನು ಮಾಡಿದ್ದರು. ಆ ವೇಳೆ ರೇವಂತ್ ರೆಡ್ಡಿಗೆ ಗೀತಾ ರೆಡ್ಡಿ ಮೇಲೆ ಪ್ರೀತಿ ಮೂಡಿತ್ತು. ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡುತ್ತಿದ್ದಾಗ ರೇವಂತ್ ಗೀತಾರನ್ನ ಪ್ರೀತಿಸುತ್ತಿದ್ದರು. ಗೀತಾ ರೆಡ್ಡಿ ಅವರ ತಂದೆಗೆ ಈ ವಿಷಯ ತಿಳಿಯುತ್ತಿದ್ದಂತೆ, ವಿಷಯ ಸ್ವಲ್ಪ ಸೀರಿಯಸ್​ ಆಗಿತ್ತು. ಆ ಬಳಿಕ ರೇವಂತ್ ರೆಡ್ಡಿ, ಜೈಪಾಲ್ ರೆಡ್ಡಿ ಜೊತೆ ಮಾತನಾಡಿ ಮನವರಿಕೆ ಮಾಡಿದ್ದರು. ರೇವಂತ್ ಅವರಲ್ಲಿರುವ ಧೈರ್ಯ, ಚಾಣಾಕ್ಷತನ, ಪ್ರತಿಭೆಯನ್ನು ಕಂಡ ಜೈಪಾಲ್ ರೆಡ್ಡಿ ಅವರು ಮುಂದೊಂದು ದಿನ ಒಳ್ಳೆಯ ನಾಯಕನಾಗಿ ಬೆಳೆಯಬಹುದು ಎಂದು ಕಿರಿಯ ಸಹೋದರನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇನ್ನು ರೇವಂತ್ ರೆಡ್ಡಿ ಮತ್ತು ಗೀತಾ ರೆಡ್ಡಿ ಪ್ರೇಮಕಥೆ ಶುರುವಾಗಿದ್ದು ಇಂಟರ್ ಮೀಡಿಯೇಟ್ ನಲ್ಲಿ. ಇವರಿಬ್ಬರು ನಾಗಾರ್ಜುನಸಾಗರದಲ್ಲಿ ಮೊದಲ ಬಾರಿ ಭೇಟಿಯಾದರು. ಅಲ್ಲಿಂದ ಶುರುವಾದ ಪರಿಚಯ ಒಳ್ಳೆ ಗೆಳೆತನಕ್ಕೆ ತಿರುಗಿ ಪ್ರೀತಿಗೆ ತಿರುಗಿತ್ತು. ಮೊದಲು ಪ್ರಸ್ತಾಪಿಸಿದವರು ರೇವಂತ್ ರೆಡ್ಡಿ. ಗೀತಾ ರೆಡ್ಡಿ ಕೂಡ ರೇವಂತ್ ಅವರ ನೇರ ವ್ಯಕ್ತಿತ್ವವನ್ನು ಮೆಚ್ಚಿದ್ದರಿಂದ ತಕ್ಷಣ ಒಪ್ಪಿಕೊಂಡರು. ಹಾಗೆ ಇಬ್ಬರು ತಮ್ಮ ಪ್ರೀತಿಯ ಪಯಣ ಆರಂಭಿಸಿದರು. ಡಿಗ್ರಿ ಮುಗಿದ ನಂತರ ಮನೆಯಲ್ಲಿ ಹೇಳಿ ಒಪ್ಪಿಸಿ 1992ರಲ್ಲಿ ಮದುವೆಯಾದರು. ಮೊದಲು ಪೇಂಟರ್ ಆಗಿ ವೃತ್ತ ಜೀವನ ಆರಂಭಿಸಿದ್ದ ರೇವಂತ್ ರೆಡ್ಡಿ, ನಂತರ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಹಂತ ಹಂತವಾಗಿ ಬೆಳೆದರು. ಹಾಗೆಯೇ ರಾಜಕೀಯ ಪ್ರವೇಶಿಸಿದರು. ತಮ್ಮ ನೇರ ವ್ಯಕ್ತಿತ್ವದಿಂದ ತೆಲಂಗಾಣದಲ್ಲಿ ಬಂಡಾಯ ನಾಯಕರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ರೇವಂತ್ ರೆಡ್ಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿದ್ಯಾರ್ಥಿ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದ ರೇವಂತ್ ರೆಡ್ಡಿ ನಂತರ ಶಾಸಕರಾಗಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಅವರು ಸ್ವತಂತ್ರ ಶಾಸಕರಾಗಿ ಗೆದ್ದು ಟಿಡಿಪಿ ಸೇರಿದರು. ಆ ನಂತರ ರಾಜ್ಯ ಪ್ರತ್ಯೇಕಗೊಂಡು ರೇವಂತ್ ರೆಡ್ಡಿ ಟಿಡಿಪಿಯಿಂದ ಕಾಂಗ್ರೆಸ್‌ಗೆ ಬಂದರು. ಈಗ ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.

Sulekha