35 ವರ್ಷಗಳ ನಂತರ ಪ್ರೇಮಿಗಳ ಪುನರ್ಮಿಲನ – ಪ್ರೀತಿ ಎಂದರೆ ಇದುವೆ ತಾನೇ…!

35 ವರ್ಷಗಳ ನಂತರ ಪ್ರೇಮಿಗಳ ಪುನರ್ಮಿಲನ – ಪ್ರೀತಿ ಎಂದರೆ ಇದುವೆ ತಾನೇ…!

ಇಬ್ಬರಿಗೂ ಒಬ್ಬರಿಗೊಬ್ಬರು ಬಿಡಲಾರದ ಮನಸ್ಥಿತಿ. ಎರಡು ಮನಸುಗಳನ್ನು ಒಂದು ಮಾಡಿತ್ತು ಪವಿತ್ರ ಪ್ರೀತಿ. ಪರಿಸ್ಥಿತಿಯ ಒತ್ತಡವೋ..ಏನೋ.. ಪ್ರೀತಿಸಿದ ಮನಸುಗಳು ದೂರ ದೂರ ಆಗಬೇಕಾಯ್ತು. ಬೇರೆ ಪ್ರೇಮಿಗಳಾಗಿದ್ದರೆ ನನಗಿಂತ ಒಳ್ಳೆಯ ಹುಡುಗ ಸಿಗುತ್ತಾನೆ ಬಿಡು ಎಂದು ಪ್ರೇಯಸಿಯನ್ನು ಸಮಾಧಾನ ಮಾಡುತ್ತಾನೆ. ಪ್ರಿಯತಮೆ ಕೂಡಾ ನನಗಿಂತ ಒಳ್ಳೇ ಹುಡುಗಿ ಸಿಗುತ್ತಾಳೆ ಬಿಡು ಎಂದು ಒಂದಿಷ್ಟು ಕಣ್ಣೀರು ಸುರಿಸಿ ದೂರ ಹೋಗುತ್ತಾಳೆ. ಇಲ್ಲವೇ ಮನೆಯವರ ಒಪ್ಪಿಗೆ ಸಿಗದೆ ದೂರ ಆಗಿರುವ ಪ್ರೇಮಿಗಳು ಇದ್ದಾರೆ. ಜಾತಿ, ಧರ್ಮ, ಸಮಾಜದ ಕಟ್ಟುಪಾಡು ಹೀಗೆ ಪ್ರೀತಿ ಪ್ರೇಮಕ್ಕೆ ಅನೇಕ ಅಡೆತಡೆಗಳು ಇರುತ್ತದೆ. ಆದರೆ, ಈಗ ನಾವು ಹೇಳುತ್ತಿರುವ ಈ ಲವ್ ಸ್ಟೋರಿ ಎಲ್ಲಕ್ಕಿಂತ ಮಿಗಿಲು. ಇಲ್ಲಿ ಪ್ರೇಮಿಗಳಿಗೆ ಪ್ರೀತಿಸಿದ ಗಳಿಗೆಯಲ್ಲಿ ಒಂದಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರೀತಿಸಿದ ಜೀವವೇ ಸ್ವಂತ ಎಂದುಕೊಂಡು ಇಬ್ಬರೂ ಪ್ರೇಮಿಗಳು ಅವಿವಾಹಿತರಾಗಿಯೇ ಉಳಿದುಬಿಟ್ಟಿದ್ದರು. ಅವನ ಸುದ್ದಿಗೆ ಅವಳು ಹೋಗಲಿಲ್ಲ. ಅವಳ ಜೀವನದಲ್ಲಿ ಇವನು ಪ್ರವೇಶ ಮಾಡಲಿಲ್ಲ.

ಇದನ್ನೂ ಓದಿ: ‘ಅಶ್ವಿನ್‌ಗೆ ನನ್ನ ಮೇಲೆ ಕ್ರಶ್ ಇರುವುದು ಇಡೀ ಶಾಲೆಗೆ ತಿಳಿದಿತ್ತು’ – ಆರ್.ಅಶ್ವಿನ್ ಜೊತೆಗಿನ– ಲವ್ ಸ್ಟೋರಿ ಬಿಚ್ಚಿಟ್ಟ ಪತ್ನಿ ಪ್ರೀತಿ

ಪ್ರೀತಿಸಿದವರನ್ನೇ ಮದುವೆಯಾಗಲು ಕೆಲವೇ ಕೆಲವರಿಗೆ ಅದೃಷ್ಟ ಇರುತ್ತದೆ. ಆದರೆ, ಕೆಲವರು ಪ್ರೀತಿಸಿದ ಜೀವ ಖುಷಿಯಾಗಿರಲಿ ಎಂದು ಹಾರೈಸಿ ದೂರ ಆಗುತ್ತಾರೆ. ಹಾಗೆ ಒಳ್ಳೆ ಮನಸಿನಿಂದ ದೂರ ಆದ ಜೋಡಿ ಮತ್ತೆ ಒಂದಾದರೆ ಹೇಗಿರುತ್ತದೆ. ಇದೀಗ ಒಂದು ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇರುವುದು ಹಳೇ ಪ್ರೇಮಿಗಳು. 35 ವರ್ಷಗಳ ನಂತರ ಒಬ್ಬರನೊಬ್ಬರು ಭೇಟಿಯಾಗಿದ್ದಾರೆ. ಪ್ರೀತಿಸಿದ ಮೇಲೆ ಇಬ್ಬರೂ ಅನಿವಾರ್ಯವಾಗಿ ಬೇರೆ ಬೇರೆಯಾಗಿದ್ದರು. ಆದರೆ, ಬೇರ್ಪಟ್ಟ ನಂತರವೂ ಅವರು ಅವಿವಾಹಿತರಾಗಿಯೇ ಉಳಿದಿದ್ದರು.

ಇದೀಗ 35 ವರ್ಷಗಳ ನಂತರ ಪ್ರೇಮಿಗಳು ಮತ್ತೆ ಒಂದಾಗಿದ್ದಾರೆ. ನನ್ನ ಪ್ರಕಾರ ಪ್ರೀತಿ ಎಂದರೆ ಇದು ಎಂದು ರಾಜ್ ಎನ್ನುವವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಪ್ರೇಮಿಗಳ ಪುನರ್ಮಿಲನವನ್ನು ಇವರ ಪರಿಚಿತರೇ ಚಿತ್ರಿಸಿದ್ದಾರೆ. ಮತ್ತು ಉದಕ್ಕೂ ಅವರು ಕ್ಯಾಮೆರಾದೆಡೆ ತಿರುಗಿ ನೋಡಿಲ್ಲ. ಬಹಳ ಸಹಜವಾಗಿ ಈ ಚಿತ್ರೀಕರಣ ಮೂಡಿ ಬಂದಿದೆ. ಇದು ಶುದ್ಧ ಪ್ರೀತಿ. ಪರಸ್ಪರ ತ್ಯಾಗ, ಗೌರವ ಮತ್ತು ಹೊಂದಾಣಿಕೆ ಎಂದರೆ ಇದೆ. ಹೀಗಿದ್ದವರನ್ನು ಭೂಮಿಯ ಮೇಲಿನ ಯಾವ ಶಕ್ತಿಯೂ ಬೇರ್ಪಡಿಸಲು ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ. ಇದು 1996ರಲ್ಲಿ ತೆರೆಕಂಡ ತಮಿಳು ಸಿನಿಮಾವನ್ನು ನೆನಪಿಸುತ್ತಿದೆ. ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ಇದೇ ರೀತಿ ಸಂಭಾಷಣೆ ನಡೆಸಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ವಿಡಿಯೋ ಮಾತ್ರ ಅದ್ಭುತ!. ಇದು ನಿಜವೇ ಆಗಿದ್ದರೆ ಈ ಪುನರ್ಮಿಲನದ ಬಗ್ಗೆ ಬರೆಯಲು ಶಬ್ದಗಳೇ ಇಲ್ಲ ಎಂದು ಈ ವಿಡಿಯೋ ನೋಡಿ ನೆಟ್ಟಿಗರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

suddiyaana