ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ – ವಯನಾಡು ಕ್ಷೇತ್ರದ ಉಪಚುನಾವಣೆ ಯಾವಾಗ?
ಬೈ ಎಲೆಕ್ಷನ್ ಬಗ್ಗೆ ಚುನಾವಣಾಧಿಕಾರಿ ಮಾಹಿತಿ!

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ – ವಯನಾಡು ಕ್ಷೇತ್ರದ ಉಪಚುನಾವಣೆ ಯಾವಾಗ?ಬೈ ಎಲೆಕ್ಷನ್ ಬಗ್ಗೆ ಚುನಾವಣಾಧಿಕಾರಿ ಮಾಹಿತಿ!

ಸಂಸದ ಸ್ಥಾನದಿಂದ ಅನರ್ಹರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿನ ನಡೆಯೇ ನಿಗೂಢವಾಗಿವೆ. ಇದರ ನಡುವೆ ರಾಹುಲ್ ಗಾಂಧಿ ಸಂಸದರಾಗಿದ್ದ ಕೇರಳದ ವಯನಾಡು ಲೋಕಸಭಾ  ಕ್ಷೇತ್ರದ ಉಪಚುನಾವಣೆ ವಿಚಾರವೂ ಭಾರೀ ಸುದ್ದಿ ಮಾಡುತ್ತಿದೆ.

ಇವತ್ತು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಟಿ ನಡೆಸಿ ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಮಾಡಿದೆ. ಈ ವೇಳೆ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಚುನಾವಣೆ ಘೋಷಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ECI) ಯಾವುದೇ ಆತುರವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ಹೇಳಿದ್ದಾರೆ. 2019 ರ ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ರಾಹುಲ್ ಅವರನ್ನು ಲೋಕಸಭೆಯಿಂದ ಅನರ್ಹ ಮಾಡಲಾಗಿತ್ತು. ಆದಾಗ್ಯೂ ಈ ತೀರ್ಪು ವಿರುದ್ದ ಮೇಲ್ಮನವಿ ಸಲ್ಲಿಸಲು ರಾಹುಲ್​ಗೆ 30 ದಿನಗಳ ಸಮಯವಿದೆ.

ಇದನ್ನೂ ಓದಿ : ಮೋದಿ ವಿರುದ್ಧ ಗುಡುಗಿದ್ದ ಕೋಲಾರದಲ್ಲೇ ಮತ್ತೆ ರಾಹುಲ್ ಭಾಷಣಕ್ಕೆ ‘ಕೈ’ ಪ್ಲ್ಯಾನ್ – ‘ಅನರ್ಹ’ವೇ ಅಸ್ತ್ರವಾಗುತ್ತಾ..?

ಮೋದಿ ಉಪನಾಮ ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ. ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದಾಗ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ಲೋಕಸಭೆಯ ಸದಸ್ಯರಾಗಿದ್ದ ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಬಹುದು ಎಂಬ ವದಂತಿ ಹಬ್ಬಿತ್ತು. ಆದಾಗ್ಯೂ, ಮೇಲ್ಮನವಿ ಸಲ್ಲಿಸಿ ಶಿಕ್ಷೆಯನ್ನು ಪ್ರಶ್ನಿಸಲು ರಾಹುಲ್ ಗಾಂಧಿಗೆ 30 ದಿನಗಳ ಗಡುವು ನೀಡಿರುವುದರಿಂದ ಚುನಾವಣಾ ಆಯೋಗವು ಕಾಯಲಿದೆ ಎಂದು ಕುಮಾರ್ ಹೇಳಿದ್ದಾರೆ.

ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 151 ರ ಅಡಿಯಲ್ಲಿ, ಆಯೋಗವು ವಯನಾಡ್ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶವಿದೆ. ರಾಹುಲ್ ಗಾಂಧಿ ಅವರಿಗೆ ನ್ಯಾಯಾಂಗ ಪರಿಹಾರವನ್ನು ಕೇಳಲು ವಿಚಾರಣಾ ನ್ಯಾಯಾಲಯವು ಮೂವತ್ತು ದಿನಗಳ ಕಾಲಾವಕಾಶವನ್ನು ನೀಡಿದೆ. ಆದ್ದರಿಂದ ನಾವು ಕಾಯುತ್ತೇವೆ. ಯಾವುದೇ ಆತುರವಿಲ್ಲ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.

suddiyaana