9 ಗಲ್ಫ್ ರಾಷ್ಟ್ರಗಳ ಏರ್‌ಸ್ಪೇಸ್ ಪ್ರವೇಶಕ್ಕೆ ನಿರ್ಬಂಧ – ವಿಮಾನಯಾನ ಕಂಪನಿಗಳಿಗೆ DGCA ಸೂಚನೆ

9 ಗಲ್ಫ್ ರಾಷ್ಟ್ರಗಳ ಏರ್‌ಸ್ಪೇಸ್ ಪ್ರವೇಶಕ್ಕೆ ನಿರ್ಬಂಧ – ವಿಮಾನಯಾನ ಕಂಪನಿಗಳಿಗೆ DGCA ಸೂಚನೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದೆ. ಇದೀಗ ಯುದ್ಧದ ಹಿನ್ನೆಲೆ ಮಾ.28ರವರೆಗೆ 9 ಗಲ್ಫ್ ರಾಷ್ಟ್ರಗಳ ವಾಯುಪ್ರದೇಶವನ್ನು ಪ್ರವೇಶಿಸದಂತೆ ನಿರ್ಬಂಧ ಹೇರಿ, ನಾಗಕರಿಕ ವಿಮಾನಯಾನ ಸಚಿವಾಲಯ ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಯುದ್ಧ ನಿಂತರೂ ಮುಗಿಯಲ್ಲ ಅನಿಲ ಸಮಸ್ಯೆ – ಇರಾನ್ ಹುಚ್ಚಾಟಕ್ಕೆ ಭಾರತ ಸೇರಿ ಇಡೀ ಜಗತ್ತಿಗೇ 2 ವರ್ಷ ಸಂಕಷ್ಟ!  

ಇರಾನ್ & ಇಸ್ರೇಲ್, ಅಮೆರಿಕ ಜಂಟಿ ಯುದ್ಧದಿಂದಾಗಿ ಹೆಚ್ಚುತ್ತಿರುವ ಉದ್ವಗ್ನತೆಯನ್ನು ಗಮನದಲ್ಲಿಟ್ಟುಕೊಂಡು ನಾಗಕರಿಕ ವಿಮಾನಯಾನ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. ವಿಮಾನಯಾನ ಕಂಪನಿಗಳಿಗೆ ಮಾ.28ರವರೆಗೆ 9 ಗಲ್ಫ್ ರಾಷ್ಟ್ರಗಳಾದ ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಾಯುಪ್ರದೇಶವನ್ನು ಪ್ರವೇಶಿಸದಂತೆ ನಿರ್ಬಂಧ ಹೇರಿದೆ.

ಇನ್ನೂ ಇರಾನ್, ಇಸ್ರೇಲ್, ಲೆಬನಾನ್, ಇರಾಕ್, ಸೌದಿ ಅರೇಬಿಯಾ, ಯುಎಇ, ಕತಾರ್, ಬಹ್ರೇನ್, ಕುವೈತ್, ಓಮನ್ ಮತ್ತು ಜೋರ್ಡಾನ್ ಈ 11 ರಾಷ್ಟ್ರಗಳನ್ನು ಹೈರಿಸ್ಕ್ ಝೋನ್‌ನಲ್ಲಿರಿಸಿದೆ. ಈ ರಾಷ್ಟçಗಳಲ್ಲಿ 32,000 ಅಡಿಗಿಂತ ಕಡಿಮೆ ಪ್ರದೇಶದಲ್ಲಿ ಕಾರ್ಯನಿರ್ವಹಿಸದಂತೆ ತಿಳಿಸಿದೆ.

ಡಿಜಿಸಿಎ ನೀಡಿದ ಈ ಸೂಚನೆಯಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳ ಪರಿಣಾಮ ಬೀರಿದೆ. ಈಗಾಗಲೇ ಹಲವು ವಿಮಾನಗಳು ರದ್ದಾಗಿದ್ದು, ಇನ್ನೂ ಕೆಲವು ವಿಮಾನಗಳು ಮಾರ್ಗ ಬದಲಾವಣೆ ಮಾಡಿವೆ. ಈ ಮೂಲಕ ಭಾರತ ಮತ್ತು ಯುರೋಪ್, ಉತ್ತರ ಅಮೆರಿಕಾ ಮತ್ತು ಮಧ್ಯಪ್ರಾಚ್ಯದ ನಡುವೆ ಸಂಚರಿಸುವ ಪ್ರಯಾಣಿಕರ ಪ್ರಯಾಣದ ಸಮಯವನ್ನು ಹೆಚ್ಚಿಸಿದೆ.

Shwetha M

Leave a Reply

Your email address will not be published. Required fields are marked *