ಕೊಹ್ಲಿ-ರೋಹಿತ್ಗೆ ನೋ ರೆಸ್ಟ್ – ಬೂಮ್ರಾ ಬಗ್ಗೆ ಬಾಸ್ ಸೈಲೆಂಟ್
ಬಾಂಗ್ಲಾ ವಿರುದ್ಧ ಆಡಲ್ಲವೇಕೆ?
ಟೀಮ್ ಇಂಡಿಯಾ ಸೂಪರ್ ತ್ರೀ ಸ್ಟಾರ್‌ಗಳೆಂದ್ರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬೂಮ್ರಾ. ಈ ತ್ರಿಮೂರ್ತಿಗಳಿದ್ರೆ ತಂಡದ ಸ್ಟ್ರೆಂಥ್ ಬೇರೇ ಲೆವೆಲ್ ನಲ್ಲೇ ಇರುತ್ತೆ. ಆದ್ರೆ, ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿಗೆ ನೋ ರೆಸ್ಟ್ ಅಂತಾ ಖಡಕ್ ವಾರ್ನಿಂಗ್ ಮಾಡಿದ ಬಿಸಿಸಿಐ, ಜಸ್ಪ್ರಿತ್ ಬೂಮ್ರಾ ವಿಚಾರದಲ್ಲಿ ಮಾತ್ರ ಸೈಲೆಂಟ್ ಆಗಿದೆ. ಬಾಂಗ್ಲಾ ಸರಣಿಗೆ ರೋಕೋ ಜೊತೆ ಬೂಮ್ರಾ ಕೂಡಾ ಕಮ್ ಬ್ಯಾಕ್ ಮಾಡ್ತಾರೆ ಅಂತಾ ಕಾಯ್ತಿದ್ದ ಫ್ಯಾನ್ಸ್ ಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಬೂಮ್ರಾ ವಿಚಾರದಲ್ಲಿ ಬಾಸ್ ಈ ರೀತಿ ಮೈಂಡ್ ಗೇಮ್ ಆಡ್ತಿರೋದು ಯಾಕೆ ಅನ್ನೋ ಕುತೂಹಲವೂ ಹೆಚ್ಚಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಚಾರದಲ್ಲಿ ಖಡಕ್ ಆಗಿರೋ ಬಿಸಿಸಿಐ ಬೂಮ್ರಾ ವಿಚಾರ ಬಂದ್ರೆ ರೂಲ್ಸ್ ಫಾಲೋ ಮಾಡಲ್ಲ ಯಾಕೆ?, 3 ತಿಂಗಳ ಸುದೀರ್ಘ ವಿಶ್ರಾಂತಿ ಬೂಮ್ರಾಗೆ ಯಾಕೆ ಬೇಕು? ನ್ಯಾಷನಲ್ ಟ್ರೆಷರ್ ವಿಚಾರದಲ್ಲಿ ಇಂಥಾ ನಿರ್ಧಾರವೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಲಕ್ಷ್ಮೀ ಮೈಯಲ್ಲಿ ಕೀರ್ತಿ ಆತ್ಮ.. ಶ್ರೇಷ್ಠಾ ಮೇಲೂ ದೆವ್ವ ಬಂತಾ? – ಎರಡು ಸೀರಿಯಲ್.. ಭಯಾನಕ ಟ್ವಿಸ್ಟ್!!
ಟಿ20 ವಿಶ್ವಕಪ್‌ನಲ್ಲಿ ಬೂಮ್ ಬೂಮ್ ಬೂಮ್ರಾ ಮ್ಯಾಜಿಕ್ ನೋಡಿದ್ದೇ ಕೊನೆ. ಅಲ್ಲಿಂದ ಇಲ್ಲಿಯವರೆಗೂ ಜಸ್ಪ್ರೀತ್ ಬೂಮ್ರಾ ಕಣ್ಣಿಗೂ ಬಿದ್ದಿಲ್ಲ. ಲಂಕಾ ಪ್ರವಾಸದಿಂದಲೂ ಬೂಮ್ರಾಗೆ ಬಿಸಿಸಿಐ ರೆಸ್ಟ್ ನೀಡಿತ್ತು. ಲಂಕಾ ಪ್ರವಾಸದಿಂದ ರೆಸ್ಟ್ ಪಡೆದ ಬೂಮ್ರಾ, ಬಾಂಗ್ಲಾದೇಶದಲ್ಲಿ ಬೌಲಿಂಗ್ ಮ್ಯಾಜಿಕ್ ಮಾಡೋದು ಪಕ್ಕಾ ಅಂತಾ ಕಾಯ್ತಿದ್ದ ಫ್ಯಾನ್ಸ್ ಗೆ ಇಲ್ಲೂ ನಿರಾಶೆಯಾಗಿದೆ. ಬಾಂಗ್ಲಾ ಸರಣಿಯಿಂದಲೂ ಬೂಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಬೂಮ್ರಾಗೆ ಸುದೀರ್ಘ ಅಂದರೆ ಒಟ್ಟು ಬರೋಬ್ಬರಿ 3 ತಿಂಗಳ ವಿಶ್ರಾಂತಿ ನೀಡಲಾಗ್ತಿದೆ. ಕುಟುಂಬಕ್ಕೆ ಸಮಯ ಮೀಸಲಿಟ್ಟಿರುವ ಬೂಮ್ರಾ, ಕ್ರಿಕೆಟ್ ಫೀಲ್ಡ್ನಿಂದ ಮಾತ್ರವಲ್ಲ. ಅಭ್ಯಾಸದಿಂದಲೂ ದೂರ ಉಳಿದಿದ್ದಾರೆ. ಶ್ರೀಲಂಕಾ ಪ್ರವಾಸದ ಟಿ20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದ ಬೂಮ್ರಾಗೆ ದುಲೀಪ್ ಟ್ರೋಫಿಯಿಂದಲೂ ರೆಸ್ಟ್ ನೀಡಲಾಗಿದೆ. ಇಷ್ಟೆಲ್ಲಾ ರೆಸ್ಟ್ ಕೊಡ್ತಿರೋದ್ಯಾಕೆ ಅನ್ನೋದಕ್ಕೂ ಮೈನ್ ರೀಸನ್ ಇದೆ.
3 ತಿಂಗಳು 17 ದಿನಗಳ ಕಾಲ ಕ್ರಿಕೆಟ್ನಿಂದ ಬೂಮ್ರಾರನ್ನ ಬಿಸಿಸಿಐ ಸುಮ್ಮನೆ ದೂರ ಇಟ್ಟಿಲ್ಲ. ಮುಂದಿನ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿ ಆರಂಭವಾಗೋದು ಅಕ್ಟೋಬರ್ 16ರಿಂದ. ಬೂಮ್ರಾ ನೇರವಾಗಿ ಕಿವೀಸ್ ಎದುರು ಕಣಕ್ಕಿಳಿಯಲಿದ್ದಾರೆ.
ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ವಿಶ್ರಾಂತಿ ಬಯಸಿದ್ರು. ಚಾಂಪಿಯನ್ಸ್ ಟ್ರೋಫಿ ಸಿದ್ಧತೆಯ ದೃಷ್ಟಿಯಿಂದ ಲಂಕಾ ಎದುರು ಆಡಲೇಬೇಕೆಂದು ಗಂಭೀರ್ ಕಟ್ಟಪ್ಪಣೆ ಹೊರಡಿಸಿದ್ರು. ಬಳಿಕ ಇಬ್ಬರು ಸರಣಿಯನ್ನಾಡಿದ್ರು. ಬೂಮ್ರಾಗೆ ಮಾತ್ರ ಮೇಲಿಂದ ಮೇಲೆ ವಿಶ್ರಾಂತಿ ನೀಡಲಾಗ್ತಿದೆ. ನಿಮಗೆ ನೆನಪಿರಬೇಕು. ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯ ವೇಳೆ ವಿರಾಟ್ ಕೊಹ್ಲಿ ಜಸ್ಪ್ರಿತ್ ಬೂಮ್ರಾರನ್ನ ರಾಷ್ಟ್ರೀಯ ಸಂಪತ್ತು ಎಂದು ಬಣ್ಣಿಸಿದ್ರು. ಕೊಹ್ಲಿ ಹೀಗೆ ಬಣ್ಣಿಸಿದ್ರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಬೂಮ್ರಾ ಟೀಮ್ ಇಂಡಿಯಾದ ರಿಯಲ್ ಮ್ಯಾಚ್ ವಿನ್ನರ್. ಟಿ20 ವಿಶ್ವಕಪ್ನ ಪರ್ಫಾಮೆನ್ಸ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. T20 ಮಾತ್ರವಲ್ಲ. ಮೂರೂ ಫಾರ್ಮೆಟ್ನಲ್ಲಿ ಬೂಮ್ರಾ, ಟೀಮ್ ಇಂಡಿಯಾದ ಬಲವಾಗಿದ್ದಾರೆ. ಈ ನ್ಯಾಷನಲ್ ಟ್ರೆಷರ್ ಇಂಜುರಿ ಫ್ರೀ ಆಗಬೇಕು ಅಂದ್ರೆ ಪದೇ ಪದೇ ವಿಶ್ರಾಂತಿ ನೀಡೋದು ಅತ್ಯಗತ್ಯ.
ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಸಾಲು-ಸಾಲು ಟೆಸ್ಟ್ ಪಂದ್ಯಗಳನ್ನಾಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಕ್ವಾಲಿಫೈ ಆಗೋ ದೃಷ್ಟಿಯಿಂದ ಈ ಸರಣಿಗಳು ಮಹತ್ವದ್ದಾಗಿದೆ. ಆ ಬಳಿಕ ಪ್ರತಿಷ್ಟಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಈ ಮಹತ್ವದ ಟೂರ್ನಿಗಳಲ್ಲಿ ಬೂಮ್ರಾ ಅಗತ್ಯತೆ ತಂಡಕ್ಕೆ ಹೆಚ್ಚಿದೆ. ಹೀಗಾಗಿ ಬೂಮ್ರಾನ ಇಂಜುರಿ ಫ್ರೀಯಾಗಿರಿಸೋ ಸರ್ಕಸ್ ನಡೀತಿದೆ. ಸತತ ಪಂದ್ಯಗಳನ್ನಾಡಿದ್ರೆ ಬೂಮ್ರಾ ಇಂಜುರಿಗೆ ಒಳಗಾಗೋ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಸುದೀರ್ಘ ಕ್ರಿಕೆಟ್ ಆಡಿದ್ದ ಬೂಮ್ರಾ ಪದೇ ಪದೇ ಇಂಜುರಿಗೆ ತುತ್ತಾಗಿದ್ರು. 2018ರಲ್ಲಿ ಥಂಬ್ ಇಂಜುರಿಗೆ ತುತ್ತಾದ ಬೂಮ್ರಾ, 2019ರಲ್ಲಿ ಲೋವರ್ ಬ್ಯಾಕ್ ಸ್ಟ್ರೆಸ್ ಫ್ರಾಕ್ಟರ್, 2021ರಲ್ಲಿ ಅಬ್ಡೋಮಿನಲ್ ಸ್ಟ್ರೇನ್ಗೆ ಒಳಗಾಗಿದ್ರು. ಆ ಬಳಿಕ 2022ರಲ್ಲಿ ಲೋವರ್ ಬ್ಯಾಕ್ ಇಂಜುರಿಗೆ ಒಳಗಾಗಿದ್ದ ಬೂಮ್ರಾ, ಸುದೀರ್ಘ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ರು. ಹೀಗಾಗಿಯೇ ಮ್ಯಾನೇಜ್ಮೆಂಟ್ ಸುದೀರ್ಘ ವಿಶ್ರಾಂತಿಯನ್ನ ನೀಡ್ತಿದೆ.
ಬೂಮ್ರಾ ಟೀಮ್ ಇಂಡಿಯಾ ಪರ ಮಹತ್ವದ ಪಂದ್ಯಗಳನ್ನಾಡಿದ್ರೆ ಸಾಕು ಅಂತಿದ್ದಾರೆ ಬಿಸಿಸಿಐ ಮತ್ತು ಹೆಚ್ ಕೋಚ್ ಗಂಭೀರ್. ಹೀಗಾಗಿ ಬೂಮ್ರಾ ರೆಸ್ಟ್ ಲ್ಲಿ ಇದ್ದಷ್ಟು ಟೀಮ್ ಇಂಡಿಯಾ ಪರ ಬೆಸ್ಟ್ ಫರ್ಫಾಮೆನ್ಸ್ ಕೊಡಲು ಬೂಮ್ರಾಗೆ ಸಾಧ್ಯ. ಹೀಗಾಗಿ ಬೂಮ್ರಾ ವಿಚಾರದಲ್ಲಿ ಬಾಸ್‌ಗಳದ್ದು ಯಾವಾಗ್ಲೂ ಡಿಫರೆಂಟ್ ಡಿಸಿಶನ್.