ರಾಜಭವನಕ್ಕೆ ತೆರಳುವಾಗ ಹೈಡ್ರಾಮಾ – ರಾಜೀನಾಮೆ ಪತ್ರ ಹರಿದುಹಾಕಿದ ಮಣಿಪುರ ಸಿಎಂ ಬಿರೇನ್ ಸಿಂಗ್

ರಾಜಭವನಕ್ಕೆ ತೆರಳುವಾಗ ಹೈಡ್ರಾಮಾ – ರಾಜೀನಾಮೆ ಪತ್ರ ಹರಿದುಹಾಕಿದ ಮಣಿಪುರ ಸಿಎಂ ಬಿರೇನ್ ಸಿಂಗ್

ಮಣಿಪುರದಲ್ಲಿ ಹಿಂಸಾಚಾರ ಮುಂದುವರಿಯುತ್ತಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಬಿರೇನ್ ಸಿಂಗ್ ರಾಜೀನಾಮೆ ಇನ್ನೇನು ಕೊಡಬೇಕಿತ್ತು. ಆಗ ತಮ್ಮ ನಿವಾಸದ ಹೊರಗೆ ನಡೆದ ಹೈಡ್ರಾಮಾದ ನಂತರ, ಮಣಿಪುರ ಸಿಎಂ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಕುಬೇರ ತಹಶೀಲ್ದಾರ್ ಅಜಿತ್ ರೈಗೆ ಮತ್ತೆ ಸಂಕಷ್ಟ – 7 ದಿನ ಲೋಕಾಯುಕ್ತ ಕಸ್ಟಡಿಗೆ..!

ಶುಕ್ರವಾರ ಮಧ್ಯಾಹ್ನ 2ರಿಂದ 3 ಗಂಟೆಯ ನಡುವೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಮತ್ತು ಗವರ್ನರ್ ಅನುಸೂಯಾ ಉಯ್ಕೆ ನಡುವೆ ಸಭೆ ನಡೆಯಬೇಕಿತ್ತು. ಹಾಗಾಗಿ ಸಿಂಗ್ ತಮ್ಮ ಮನೆಯಿಂದ ಹೊರಡುವವರಿದ್ದರು. ಆದರೆ, ರಾಜಭವನಕ್ಕೆ ತೆರಳುವ ಮಾರ್ಗದಲ್ಲಿ ಬಿರೇನ್ ಸಿಂಗ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಿಎಂ ಬಿರೇನ್ ಸಿಂಗ್ ಅವರ ನಿವಾಸದ ಹೊರಗೆ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ರಾಜೀನಾಮೆ ನೀಡಬೇಡಿ ಎಂದು ಒತ್ತಾಯಿಸಿದ್ದರು. ಮಹಿಳೆಯರ ಗುಂಪು ರಾಜ್ಯಪಾಲರ ನಿವಾಸಕ್ಕೆ ಹೋಗುವ ರಸ್ತೆಯನ್ನು ತಡೆದು ರಾಜೀನಾಮೆ ನೀಡದಂತೆ ಒತ್ತಡ ಹೇರಿದರು. ಇದರಿಂದಾಗಿ ಅವರು ರಾಜ್ಯಪಾಲರ ಭವನವನ್ನು ತಲುಪುವ ಮೊದಲು ಜನರ ಮುಂದೆ ತಮ್ಮ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜಭವನಕ್ಕೆ ತೆರಳುವ ಮಾರ್ಗದಲ್ಲಿ ಜನರ ಭಾವನೆಗಳನ್ನು ಗೌರವಿಸಿ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ ಎಂದು ಹಿರಿಯ ಸಚಿವ ಗೋವಿಂದಸ್ ಕೊಂತೌಜಮ್ ಹೇಳಿದ್ದಾರೆ. ಬಿರೇನ್ ಸಿಂಗ್ ಅವರು ಗವರ್ನರ್ ಅನುಸೂಯಾ ಉಯ್ಕೆಯವರಿಗೆ ಸಲ್ಲಿಸಲು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದರು. ಇದಕ್ಕೂ ಮೊದಲು, ಸಿಂಗ್ ಅವರು ತಮ್ಮ ನಿವಾಸದಲ್ಲಿ ಬೆಳಿಗ್ಗೆ 8 ಗಂಟೆಗೆ ಸಂಪುಟ ಸಚಿವರ ಸಭೆಯನ್ನು ಕರೆದಿದ್ದು ಅದರಲ್ಲಿ ಅವರು ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು. ಜೂನ್ 29 ರಂದು ಇಂಫಾಲ್‌ನಲ್ಲಿ ಶವಗಳನ್ನು ಹಿಡಿದುಕೊಂಡು ಮಹಿಳೆಯರು ನಡೆಸಿದ ಪ್ರತಿಭಟನೆಯಿಂದ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ, ಬಿರೇನ್ ಸಿಂಗ್ ಅವರಿಗೆ ರಾಜೀನಾಮೆ ನೀಡುವ ಆಯ್ಕೆಯನ್ನು ನೀಡಲಾಗಿತ್ತು. ಇಲ್ಲದಿದ್ದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದಾಗಿ ಹೇಳಿತ್ತು.

suddiyaana