ಒಂದೇ ವಾಕ್ಯದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಪತ್ರ – ಬಿಜೆಪಿ ಸೇರಿದ ಆಂಧ್ರ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ

ಒಂದೇ ವಾಕ್ಯದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಪತ್ರ – ಬಿಜೆಪಿ ಸೇರಿದ ಆಂಧ್ರ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ

ಕಾಂಗ್ರೆಸ್​​ಗೆ ಗುಡ್​​ಬೈ ಹೇಳಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್​ ರೆಡ್ಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. 2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗುವ ಮುನ್ನ ಕಿರಣ್ ಕುಮಾರ್​ ರೆಡ್ಡಿ ಆಂಧ್ರ ಸಿಎಂ ಆಗಿದ್ರು. ಆದ್ರೆ ಕಳೆದ ಮಾರ್ಚ್​​ನಲ್ಲಿ ರೆಡ್ಡಿ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದರು. ಮುಂದಿನ ವರ್ಷ ಆಂಧ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಕಿರಣ್ ಕುಮಾರ್​ ರೆಡ್ಡಿ ಕಮಲ ಪಾಳಯ ಸೇರಿದ್ದಾರೆ.

ಇದನ್ನೂ ಓದಿ: ಅಳಿಯನಿಗೆ ಟಿಕೆಟ್ ಮಿಸ್ – ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಶಾಸಕ 

ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಒಂದೇ ವಾಕ್ಯದ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಅವರಿಗೆ ಪಕ್ಷದ ಎಲ್ಲಾ ರೀತಿಯ ಸ್ಥಾನದಿಂದ ಹೊರನಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಬಿಜೆಪಿ ಸೇರ್ಪಡೆ ವೇಳೆ ಮಾತನಾಡಿರುವ ಕಿರಣ್ ಕುಮಾರ್ ರೆಡ್ಡಿ, ಕಾಂಗ್ರೆಸ್​ ನಾಯಕರು ಅವರು ಮಾತ್ರ ಸರಿ. ದೇಶದ ಉಳಿದೆಲ್ಲಾ ಜನರು ಮಾಡೋದೆಲ್ಲಾ ತಪ್ಪು ಎಂದುಕೊಂಡಿದ್ದಾರೆ. ಎಲ್ಲವೂ ಅವರ ಹಿಡಿತದಲ್ಲೇ ಇರಬೇಕು. ಅವರು ಹೇಳಿದಂತೆಯೇ ನಡೆಯಬೇಕು. ಆದ್ರೆ, ಜವಾಬ್ದಾರಿ ತೆಗೆದುಕೊಂಡು ಕಠಿಣ ಶ್ರಮ ಹಾಕಲು ಮಾತ್ರ ತಯಾರಿಲ್ಲ ಅಂತಾ ರೆಡ್ಡಿ ಕಾಂಗ್ರೆಸ್ ನಾಯಕತ್ವವನ್ನ ಗುರಿಯಾಗಿಸಿ ಟೀಕಾಪ್ರಹಾರ ಮಾಡಿದ್ದಾರೆ. ಮುಂಬರುವ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜಗನ್ಮೋಹನ್ ನೇತೃತ್ವದ ವೈಎಸ್​ಆರ್ ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ನಡುವೆ ನೇರಾನೇರ ಹಣಾಹಣಿ ಇದೆಯಾದ್ರೂ, ಬಿಜೆಪಿ ಕೂಡ ಆಂಧ್ರದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸೋಕೆ ಶತಪ್ರಯತ್ನ ಮಾಡ್ತಿದೆ.

 

suddiyaana