ವಿವಾದದ ಬೆನ್ನಲ್ಲೇ  ಎಚ್ಚೆತ್ತ ಅಧಿಕಾರಿಗಳು – ವಸತಿ ಶಾಲೆಯ ಘೋಷವಾಕ್ಯ ಮೊದಲಿನಂತೆಯೇ ಬದಲಾವಣೆ!

ವಿವಾದದ ಬೆನ್ನಲ್ಲೇ  ಎಚ್ಚೆತ್ತ ಅಧಿಕಾರಿಗಳು – ವಸತಿ ಶಾಲೆಯ ಘೋಷವಾಕ್ಯ ಮೊದಲಿನಂತೆಯೇ ಬದಲಾವಣೆ!

ವಸತಿ ಶಾಲೆಗಳ ಬಾಗಿಲು ಬಳಿ ಹಾಕಲಾಗಿರುವ ಕುವೆಂಪು ಅವರು ಬರೆದಿರುವ ಸಾಲುಗಳನ್ನು ರಾಜ್ಯ ಸರ್ಕಾರ ಬದಲಾವಣೆ ಮಾಡಿತ್ತು. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬೋರ್ಡ್‌ ಅನ್ನು ಬದಲಾವಣೆ ಮಾಡಲಾಗಿದೆ.

ವಿಜಯಪುರ ಜಿ. ಮುದ್ದೇಬಿಹಾಳ ತಾ. ಘಾಳಪೂಜೆ ಮೊರಾರ್ಜಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಗರ್ಲ್ ಫ್ರೆಂಡ್‌ ಇಲ್ಲ ಅಂತಾ ಬೇಸರ ಯಾಕೆ? – ಬಟ್ಟೆ ಅಂಗಡಿಯ ಗೊಂಬೆಯೇ ಓಕೆ!!

ಕೇವಲ ವಿಜಯಪುರ ಮಾತ್ರವಲ್ಲ, ರಾಯಚೂರು ಜಿಲ್ಲೆಯ 36 ವಸತಿ ಶಾಲೆಗ ಪೈಕಿ ಬಹುತೇಕ ಕಡೆಗಳಲ್ಲಿ ಕುವೆಂಪು ವಾಕ್ಯವನ್ನ ಬದಲಾಯಿಸಿ ಬರೆಯಲಾಗಿದೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ, ಮಸ್ಕಿ, ಲಿಂಗಸುಗೂರಿನ ಅಡವಿಬಾವಿ ಸೇರಿ ಜಿಲ್ಲೆಯ ಹಲವೆಡೆ ವಾಕ್ಯ ಬದಲಾವಣೆ ಮಾಡಲಾಗಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬರಹವನ್ನು ಮೊದಲಿನಂತೆಯೇ ಬದಲಾವಣೆ ಮಾಡಲಾಗಿದೆ.

Shwetha M