ಮಾತ್ರೆಯಿಂದಲೇ ಕ್ಯಾನ್ಸರ್‌ ಗುಣಮುಖ! – ಸಂಶೋಧಕರಿಗೆ ಸಿಕ್ತು ಅತಿದೊಡ್ಡ ಯಶಸ್ಸು

ಮಾತ್ರೆಯಿಂದಲೇ ಕ್ಯಾನ್ಸರ್‌ ಗುಣಮುಖ! – ಸಂಶೋಧಕರಿಗೆ ಸಿಕ್ತು ಅತಿದೊಡ್ಡ ಯಶಸ್ಸು

ಕ್ಯಾನ್ಸರ್.. ಮನುಷ್ಯರನ್ನು ಅಣು ಅಣುವಾಗಿ ಕೊಲ್ಲುವ ಮಾರಣಾಂತಿಕ ಕಾಯಿಲೆ. ಈ ಕಾಯಿಲೆಗೆ ತುತ್ತಾದವರು ಕೀಮೋಥೆರಫಿ ಮುಂತಾದ ಚಿಕಿತ್ಸೆಗಳನ್ನು ಪಡೆಯಬೇಕಾಗುತ್ತದೆ. ಆದರೆ ಮುಂದಿನ ಈ ಚಿಕಿತ್ಸೆಗೆ ಒಳಗಾಗುವ ಅಗತ್ಯವಿಲ್ಲ! ಏಕೆಂದರೆ ಅಮೆರಿಕದ ಸಂಶೋಧಕರ ತಂಡ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾತ್ರೆ ಕಂಡುಹಿಡಿದಿದ್ದಾರೆ.

US ನಲ್ಲಿನ ಅತಿದೊಡ್ಡ ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸಾ ಸಂಸ್ಥೆಗಳಲ್ಲಿ ಒಂದಾದ ಸಿಟಿ ಆಫ್ ಹೋಪ್‌ನ ಸಂಶೋಧಕರು ಈ ಮಾತ್ರೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕೀಮೋಥೆರಪಿ ಸಮಯದಲ್ಲಿ ಘನ ಗೆಡ್ಡೆಯನ್ನು ತೆಗೆದುಹಾಕುವಲ್ಲಿ ಈ ಟ್ಯಾಬ್ಲೆಟ್ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ 10 ಕೆಜಿ ಅನ್ನಭಾಗ್ಯ ಅಕ್ಕಿ ವಿತರಣೆ – ಮನೆಯಲ್ಲಿ ಕಾರು ಇದ್ದರೆ ಬಿಪಿಎಲ್‌ ಕಾರ್ಡ್‌ ರದ್ದು!

ಕಳೆದ 20 ವರ್ಷಗಳಿಂದ ಮಾತ್ರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗ ಈ ಟ್ಯಾಬ್ಲೆಟ್ ಗೆ AOH1996 ಎಂದು ಹೆಸರಿಡಲಾಗಿದೆ.. ಇದರ ಹೆಸರಿನ ಹಿಂದೆ ಒಂದು ಕುತೂಹಲಕಾರಿ ಕಥೆಯೂ ಇದೆ. AOH1996 ಗೆ 1996 ರಲ್ಲಿ ಜನಿಸಿದ ಅನಾ ಒಲಿವಿಯಾ ಹೀಲಿ ಎಂಬ ಹುಡುಗಿಯ ಹೆಸರನ್ನು ಇಡಲಾಗಿದೆ. ಈ ಬಾಲಕಿ 9 ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನಳಾಗಿದ್ದಳು. ಈ ಮಾತ್ರೆ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

suddiyaana