ಯಜಮಾನನನ್ನು ಹುಡುಕಿಕೊಂಡು 64 ಕಿ.ಮೀ ದೂರದಿಂದ ಬಂದ ಶ್ವಾನ!

ಯಜಮಾನನನ್ನು ಹುಡುಕಿಕೊಂಡು 64 ಕಿ.ಮೀ ದೂರದಿಂದ ಬಂದ ಶ್ವಾನ!

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿಗೆ ಸ್ವಲ್ಪ ಪ್ರೀತಿ ತೋರಿಸಿ, ಹಸಿವು ನೀಗಿಸಲು ಕೊಂಚ ಅನ್ನ ಹಾಕಿದ್ರೆ ಸಾಕು. ಅವುಗಳು ಅದನ್ನು ಜೀವನ ಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುತ್ತವೆ. ಇದಕ್ಕೆ ನಿದರ್ಶನವೆಂಬಂತೆ  ಇಲ್ಲೊಂದು ನಾಯಿ ತನ್ನ ಯಜಮಾನನನ್ನು ಹುಡುಕಿಕೊಂಡು ಬರೋಬ್ಬರಿ 27 ದಿನ 64 ಕಿಲೋಮೀಟರ್ ದೂರ ಕ್ರಮಿಸಿದೆ.

ಹೌದು, ಉತ್ತರ ಐರ್ಲೆಂಡ್‌ನಲ್ಲಿ ನಡೆದ ಘಟನೆ ಇದು. ಕೂಪರ್ ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್ ಜಾತಿಯ ನಾಯಿಯೊಂದನ್ನು ಮಾಲೀಕ ಕೆಲ ಸಮಯದ ಹಿಂದೆ ಮಾರಾಟ ಮಾಡಿದ್ದರು. ಈ ನಾಯಿಯನ್ನು ಉತ್ತರ ಐರ್ಲೆಂಡ್‌ನ ಕೌಂಟಿ ಟೈರೋನ್‌ನಲ್ಲಿರುವ ವ್ಯಕ್ತಿ ತನ್ನ ಕಾರ್ ನಲ್ಲಿ ನಾಯಿಯನ್ನು ಕರೆದುಕೊಂಡು ಬರೋದಾಗಿ ಮಾಲೀಕನಿಗೆ ತಿಳಿಸಿದ್ದರು. ಮಾತಿನಂತೆ ಆ ವ್ಯಕ್ತಿ ನಾಯಿಯನ್ನು ತನ್ನ ಕಾರಿನಲ್ಲಿ ಕೂಪರ್‌ನನ್ನು ತನ್ನ ಮನೆಗೆ ಕೊಂಡೊಯ್ಯಲು ಅದರ ಮಾಲೀಕನ ಮನೆಗೆ ಹೋಗಿದ್ದಾರೆ. ಮಾತುಕತೆ ಎಲ್ಲ ಮುಗಿಸಿ ಕೂಪರ್‌ನನ್ನು ತನ್ನ ಕಾರ್‌ನಲ್ಲಿ ಕೂರಿಸಿ ಮನೆಗೆ ಹೊರಟಿದ್ದಾರೆ. ಇತ್ತ ತನ್ನ ನೆಚ್ಚಿನ ಶ್ವಾನವನ್ನು ಒಲ್ಲದ ಮನಸ್ಸಿನಿಂದ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: 8 ವರ್ಷ ಪೊಲೀಸ್ ಶ್ವಾನದಳದಲ್ಲಿ ಕರ್ತವ್ಯ – ನಿವೃತ್ತಿ ಹೊಂದಿದ ಏಂಜಲ್‌ಗೆ ಆತ್ಮೀಯ ಬೀಳ್ಕೊಡುಗೆ..!

ಸುಮಾರು 64 ಕಿಲೋ ಮೀಟರ್‌ ದೂರದಿಂದ ಕೂಪರ್‌ನನ್ನು ಕಾರಿನಲ್ಲಿ ಮನೆಗೆ ತೆಗೆದುಕೊಂಡು ಬಂದಿದ್ದರು. ಎರಡನೇ ಮಾಲೀಕ ಇನ್ನೇನು ಕಾರ್‌ನಿಂದ ಕೂಪರ್ ನನ್ನು ಇಳಿಸಬೇಕು ಅನ್ನೋವಷ್ಟರಲ್ಲಿ ಕಾರ್‌ನಿಂದ ಒಮ್ಮೆಲೇ ಜಿಗಿದಿದೆ. ಅಷ್ಟೇ ಅಲ್ಲದೇ ಕೂಪರ್ ರಭಸವಾಗಿ ಓಡಿ ಅಲ್ಲಿಂದ ಮಾಯವಾಗಿದೆ. ಕಂಗಾಲಾದ ಮಾಲೀಕ ನಾಯಿಯನ್ನು ಹುಡುಕಿಕೊಂಡು  ಕಾರ್‌ನಲ್ಲಿ ನಾಲ್ಕೈದು ಕಿಲೋಮೀಟರ್ ಬಂದಿದ್ದಾರೆ. ಆದರೆ ಕೂಪರ್ ಎಲ್ಲೂ ಕಾಣಿಸಿಲ್ಲ. ಇದರಿಂದ ಇನ್ನಷ್ಟು ಆತಂಕಗೊಂಡ ಎರಡನೇ ಮಾಲೀಕ ಸಾಕಿ ಬೆಳೆಸಿದ ಮಾಲೀಕನಿಗೆ ಕರೆಮಾಡಿ ಸುದ್ಧಿ ತಿಳಿಸಿದ್ದಾರೆ. ಇದರಿಂದ ಅವರರೂ ಗಾಬರಿಯಾಗಿದ್ದಾರೆ. ಒಂದುವೇಳೆ ನಾಯಿ ನಮ್ಮ ಮನೆಗೆ ಬಂದರೆ ತಿಳಿಸೋದಾಗಿ ಹೇಳಿದ್ದಾರೆ. ಎರಡೂ ಮನೆಯವರು ಕೂಡ ಕಾಡು, ರಸ್ತೆ, ಹೊಲ, ಕಾಲೋನಿ ಎಲ್ಲಾ ಕಡೆ ಕೂಪರ್ ಗಾಗಿ ಹುಡುಕಿದ್ದಾರೆ. 2 ವಾರ ಕಳೆದರೂ ಕೂಪರ್ ನ ಸುಳಿವು ಸಿಕ್ಕಿಲ್ಲ. ಹೀಗಾಗಿ ಕೂಪರ್ ಇನ್ನು ವಾಪಸ್ ಬರುವುದಿಲ್ಲ ಅಂತಾ ಅಂದುಕೊಂಡಿದ್ದರು. ಆದರೆ ಕೆಲವು ದಿನಗಳ ನಂತರ ಮೊದಲ ಮಾಲೀಕರಿಗೆ ಒಂದು ಅಚ್ಚರಿ ಕಾದಿತ್ತು.

ಕಣ್ಮರೆಯಾಗಿದ್ದ ಕೂಪರ್ ಮೊದಲನೇ ಮಾಲೀಕನ ಮುಂದೆ ಪ್ರತ್ಯಕ್ಷವಾಗಿದೆ. ಬರೋಬ್ಬರಿ 27 ದಿನದ ನಂತರ ಸುಮಾರು 64 ಕಿಲೋ ಮೀಟರ್ ದೂರ ಕ್ರಮಿಸಿ ಕೂಪರ್ ತನ್ನ ಯಜಮಾನನ್ನು ಹುಡುಕಿಕೊಂಡು ಬಂದಿದೆ. ಕೂಪರ್‌ನನ್ನು ಕಂಡು ಮನೆಯವರಿಗೆ ಅಚ್ಚರಿಯಾಗಿದ್ದು, ಮನೆಗೆ ಬರುತ್ತಿದ್ದಂತೆ ಮನೆಮಂದಿ ಅದನ್ನು ಮುದ್ದಾಡಿ ಭಾವುಕರಾಗಿದ್ದಾರೆ. ಸುಮಾರು 27 ದಿನಗಳ ಕಾಲ ನಿದ್ದೆ ಆಹಾರವಿಲ್ಲದೇ ಕೂಪರ್ ತುಂಬಾ ಆಯಾಸದಿಂದ ಬಳಲಿತ್ತು. ದೇಹದ ತೂಕವೂ ಕಡಿಮೆಯಾಗಿತ್ತು. ಸದ್ಯ ಈ ನಾಯಿಯನ್ನು ಮೊದಲ ಮಾಲೀಕನೇ ಆರೈಕೆ ಮಾಡುತ್ತಿದ್ದಾರೆ ಅಂತಾ ತಿಳಿದುಬಂದಿದೆ.

suddiyaana