ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಗವಹಿಸಿದ ‘ಕೈಲಾಸ’ದ ಪ್ರತಿನಿಧಿ – ನಿತ್ಯಾನಂದನಿಗೆ ರಕ್ಷಣೆ ಕೋರಿದ ಶಿಷ್ಯೆ..!

ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಗವಹಿಸಿದ ‘ಕೈಲಾಸ’ದ ಪ್ರತಿನಿಧಿ – ನಿತ್ಯಾನಂದನಿಗೆ ರಕ್ಷಣೆ ಕೋರಿದ ಶಿಷ್ಯೆ..!

ಜಿನಿವಾದಲ್ಲಿ ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆಯಲ್ಲಿ ಸ್ವಯಂಘೋಷಿತ ದೇವಮಾನವ ಹಾಗೂ ಕೈಲಾಸ ದೇಶದ ಸಂಸ್ಥಾಪಕ ಸ್ವಾಮಿ ನಿತ್ಯಾನಂದನ ಶಿಷ್ಯೆ ಭಾಗವಹಿಸಿದ್ದಾರೆ. ವಿಶ್ವಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಮಹಾಸಭೆಯಲ್ಲಿ ಅಮೆರಿಕ, ಯುಕೆ, ಸ್ಲೊವೇನಿಯಾ, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಲ್ಲಿ ಸಾಮಾಜಿಕ, ಆರ್ಥಿಕ ವಿಚಾರಗಳನ್ನು ಚರ್ಚಿಸಲಾಯಿತು ಎಂದು ಕೈಲಾಸ ಎಸ್‌ಪಿಹೆಚ್ ನಿತ್ಯಾನಂದ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಸಹ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:  ಮನುಷ್ಯರಿಗಿಂತ ತಂತ್ರಜ್ಞಾನಕ್ಕೆ ಜೈ ಎಂದ ಉದ್ಯಮಿಗಳು – 50 ಪರ್ಸೆಂಟ್ ನೌಕರರ ಕೆಲಸಕ್ಕೆ ಕತ್ತರಿ..!

ಇದೇ ಸಭೆಯಲ್ಲಿ ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಹೇಳಿರುವ ವಿಜಯಪ್ರಿಯಾ ನಿತ್ಯಾನಂದ ಸಹ ಭಾಗವಹಿಸಿದ್ದರು. ಅಲ್ಲಿ ನಿತ್ಯಾನಂದ ತನ್ನ ಜನ್ಮಸ್ಥಳವಾದ ಭಾರತ ದೇಶದಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಕೈಲಾಸ ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ. ಅದನ್ನು ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ ನಿತ್ಯಾನಂದ ಪರಮಶಿವಂ ಸ್ಥಾಪಿಸಿದ್ದಾರೆ. ಅವರು ಪ್ರಬುದ್ಧ ಹಿಂದೂ ನಾಗರಿಕತೆ ಮತ್ತು ಆದಿಶೈವ, ಸ್ಥಳೀಯ ಬುಡಕಟ್ಟು ಸೇರಿ ಹಿಂದೂ ಧರ್ಮದ 10 ಸಾವಿರ ಸಂಪ್ರದಾಯಗಳನ್ನ ಪುನರುಜ್ಜೀವನಗೊಳಿಸಿದ್ದಾರೆ. ಕೈಲಾಸ ಸುಸ್ಥಿರ ಅಭಿವೃದ್ಧಿಯೊಂದಿಗೆ ಯಶಸ್ವಿಯಾಗಿದೆ ಎಂದು ಪ್ರತಿಪಾದಿಸಿದರು.

ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ 2010ರಲ್ಲಿ ಕರ್ನಾಟಕ ಸೆಷನ್ಸ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಗುಜರಾತ್ ಆಶ್ರಮದಲ್ಲಿಯೂ ಚಿತ್ರಹಿಂಸೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿತು. ಈ ಕುರಿತು ತನಿಖೆ ನಡೆಸಿದ ಗುಜರಾತ್ ಪೊಲೀಸರು, ನಿತ್ಯಾನಂದ ದೇಶದಿಂದಲೇ ತಲೆ ಮರೆಸಿಕೊಂಡಿರುವುದಾಗಿ ವರದಿ ಮಾಡಿದ್ದರು.

 

suddiyaana