ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ದರ್ಶನ್ ರಿಟ್ ಅರ್ಜಿ – ಇಂದು ದಾಸನಿಗೆ ಸಿಗುತ್ತಾ ಸಿಹಿ ಸುದ್ದಿ

ವಿಚಾರಣೆಗೆ ಖುದ್ದು ಹಾಜರಿಗೆ ನಿರ್ದೇಶನ ಕೋರಿ ಹೈಕೋರ್ಟ್ಗೆ ದರ್ಶನ್ ಅರ್ಜಿ ಸಲ್ಲಿಸಿದ್ದು ಇಂದು ನ್ಯಾ. ವಿ. ಶ್ರೀಶಾನಂದ ಅವರಿರುವ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಖುದ್ದು ಹಾಜರಿಗೆ ಆದೇಶಿಸಲು 59 ನೇ ಸಿಸಿಹೆಚ್ ಕೋರ್ಟ್ ನಿರಾಕರಿಸಿತ್ತು.
ಇದನ್ನೂ ಓದಿ: ಗುರುವಾರದಂದು ಈ ಕೆಲಸ ಮಾಡಿದ್ರೆ ಬದಲಾಗುತ್ತೆ ಅದೃಷ್ಟ – ನಿಮಗೂ ಗೊತ್ತಿರದ ಗುರುವಾರದ ರಹಸ್ಯ!
ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ದರ್ಶನ್ ರಿಟ್ ಅರ್ಜಿ ಸಲ್ಲಿಸಿದ್ದರು. ಸಾಕ್ಷ್ಯ ವಿಚಾರಣೆ ವೇಳೆ ಖುದ್ದಾಗಿ ಹಾಜರುಪಡಿಸಲು ನಿರ್ದೇಶಿಸಬೇಕು. ಸಾಕ್ಷ್ಯ ವಿಚಾರಣೆ ಆಲಿಸುವುದು, ವೀಕ್ಷಿಸುವುದು ತಮ್ಮ ಹಕ್ಕು. ಆರೋಪಿಯ ಸಮಕ್ಷಮದಲ್ಲಿ ಸಾಕ್ಷಿ ತನ್ನ ಹೇಳಿಕೆಯನ್ನು ನೀಡಬೇಕು ಎಂದಿದ್ದರು.
ವಕೀಲರೊಂದಿಗೆ ಆರೋಪಿ ನೇರ ಸಂವಹನಕ್ಕೆ ಸೂಕ್ತ ವ್ಯವಸ್ಥೆಗಳಿಲ್ಲ. ಪರಪ್ಪನ ಅಗ್ರಹಾರ ಜೈಲು ಹಾಗೂ ಕೋರ್ಟ್ ನಲ್ಲಿ ಸೂಕ್ತ ಉಪಕರಣಗಳಿಲ್ಲ. ತಾಂತ್ರಿಕ ಉಪಕರಣಗಳನ್ನು ಇನ್ನೂ ಉನ್ನತೀಕರಿಸಲಾಗಿಲ್ಲ. ಕಾಲಕಾಲಕ್ಕೆ ತನ್ನ ವಕೀಲರಿಗೆ ಸೂಚನೆಗಳನ್ನು ನೀಡಲಾಗುತ್ತಿಲ್ಲ. ವಿಡಿಯೋ ಕಾನ್ಫ್‌ರೆನ್ಸ್ ನಲ್ಲಿ ತಾಂತ್ರಿಕ ಅಡಚಣೆಗಳಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಹೀಗಾಗಿ ಖುದ್ದು ಹಾಜರಿಗೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್ ಮನವಿಯಲ್ಲಿ ಕೋರಿದ್ದಾರೆ.

ನೋಡಿರಿ

