ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಬಂಧನಕ್ಕೆ ಕೋರ್ಟ್‌ ಆದೇಶ – ತಮಿಳುನಾಡಿನಲ್ಲಿ ಅರೆಸ್ಟ್‌ ಆಗ್ತಾರಾ ನಟ ದರ್ಶನ್?‌  

ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಬಂಧನಕ್ಕೆ ಕೋರ್ಟ್‌ ಆದೇಶ – ತಮಿಳುನಾಡಿನಲ್ಲಿ ಅರೆಸ್ಟ್‌ ಆಗ್ತಾರಾ ನಟ ದರ್ಶನ್?‌  

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕೊಲೆ ಕೇಸ್‌ನ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿ 7 ಜನ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದೀಗ ಪೊಲೀಸ್‌ ಇಲಾಖೆ ಆರೋಪಿಗಳನ್ನ ಬಂಧಿಸಿಲು ಸಿದ್ದತೆ ನಡೆಸುದ್ದು, ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಇದೀಗ ದರ್ಶನ್‌, ತಮಿಳುನಾಡಿನಲ್ಲಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಜಾಮೀನು ರದ್ದು – ಡಿ ಗ್ಯಾಂಗ್‌ಗೆ ಜೈಲೇ ಗತಿ!

ಸುಪ್ರೀಂ ಕೋರ್ಟ್ ತಕ್ಷಣವೇ ದರ್ಶನ್ ಮತ್ತು ಪವಿತ್ರಾ ಗೌಡ ನನ್ನು ಬಂಧಿಸಲು ಆದೇಶಿಸಿದೆ.  ಈ ಬೆನ್ನಲ್ಲೇ ತಮಿಳುನಾಡಿನಲ್ಲಿರುವ ದರ್ಶನ್ ಜಾಗವನ್ನು ಪೊಲೀಸರು ಪತ್ತೆ ಮಾಡಿದ್ದಾರಂತೆ. ಆಗಸ್ಟ್ 13ರಂದು ರಾತ್ರಿ ತಮ್ಮ ಮೈಸೂರಿನ ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿಯಲ್ಲಿರುವ ಫಾರಂ ಹೌಸ್‌ ಗೆ ಬಂದಿದ್ದ ನಟ ದರ್ಶನ್ ಬಳಿಕ ರಾತ್ರೋ ರಾತ್ರಿ ತಮಿಳುನಾಡು ಕಡೆ ಪಯಣ ಬೆಳೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ದೇವಾಲಯವೊಂದರ ದರ್ಶನಕ್ಕೆ  ನಟ ತೆರಳಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಸ್ಥಳೀಯ ಪೊಲೀಸರ ನೆರವು ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಜಾಮೀನು ಸಿಗುವ ಸಮಯದಲ್ಲಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದ ಕಾರಣ ಮತ್ತೆ ಬಳ್ಳಾರಿ ಜೈಲಿಗೆ ಹೋಗಬೇಕಾಗಿದೆ.

ಇನ್ನು ಪವಿತ್ರಾ ಗೌಡ ಕೂಡ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ದೇಗುಲದಲ್ಲಿರುವಾಗಲೇ ಪವಿತ್ರಾಗೆ ಬೇಲ್‌  ರದ್ದಾದ ಸುದ್ದಿ ಬಂದಿದ್ದು, ಪೋನ್ ಮೂಲಕ ವಕೀಲರಿಂದ ಮಾಹಿತಿ ಪಡೆದುಕೊಂಡರು.

Shwetha M