ರೇಣುಕಾಸ್ವಾಮಿ ಚಿತ್ರಹಿಂಸೆಗೆ ಬಿಗ್ ಟ್ವಿಸ್ಟ್ – ಅಂಗಲಾಚುವ ದೃಶ್ಯ ‘AI’ ಫೋಟೋನಾ?
FSL ರಿಪೋರ್ಟ್‌ನಲ್ಲಿ ದರ್ಶನ್ ಭವಿಷ್ಯ?

ರೇಣುಕಾಸ್ವಾಮಿ ಚಿತ್ರಹಿಂಸೆಗೆ ಬಿಗ್ ಟ್ವಿಸ್ಟ್ – ಅಂಗಲಾಚುವ ದೃಶ್ಯ ‘AI’ ಫೋಟೋನಾ?FSL ರಿಪೋರ್ಟ್‌ನಲ್ಲಿ ದರ್ಶನ್ ಭವಿಷ್ಯ?

ರೇಣುಕಾಸ್ವಾಮಿ ಮರ್ಡರ್‌ ಕೇಸ್ ಇಡೀ ರಾಜ್ಯವನ್ನ ಬೆಚ್ಚಿ ಬೀಳಿಸಿತ್ತು. ದಿನ ನಿತ್ಯ ರಾಜ್ಯದಲ್ಲಿ ಮರ್ಡರ್‌ಗಳು ನಡೆಯುತ್ತಲೇ ಇದ್ರೂ, ರೇಣುಕಾಸ್ವಾಮಿ ಕೇಸ್‌ ಮಾತ್ರ ಸಖತ್ ಸೌಂಡ್ ಮಾಡಿತ್ತು. ಯಾಕಂದ್ರೆ ಇದ್ರ ಹಿಂದೆ ಇದ್ದವನು ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ದರ್ಶನ್ ಅಂಡ್ ಗ್ಯಾಂಗ್ ಅನ್ನೋ ಕಾರಣಕ್ಕೆ. ಅದ್ರಲ್ಲೂ ರೇಣುಕಾಸ್ವಾಮಿಗೆ ಚಿತ್ರ ಹಿಂಸೆಕೊಟ್ಟು ಸಾಯಿಸಿದ್ರು. ನನ್ನ ಬಿಟ್ಟು ಬಿಡಿ ಅಂತ ಅಂಗಲಾಚಿ ಬೇಡಿಕೊಳ್ಳುವ ಫೋಟೋ ನೋಡಿದವರಿಗೆ ಕಣ್ಣೀರು ಬರುತಿತ್ತು. ಆದ್ರೆ ಈ ಫೋಟೋದ ಅಸಲಿಯತ್ತು ಇನ್ನೂ ಬಯಲಾಗಿಲ್ಲ.. ಲ್ಯಾಬ್‌ಗೆ ಕಳುಹಿಸಿರೋ ಈ ಫೋಟೋದ ರಿಪೋರ್ಟ್‌ನಲ್ಲಿ ಏನಿದೆ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಬುಮ್ರಾ ಕ್ಯಾಪ್ಟನ್.. KL ಓಪನರ್ – AUS ಸರಣಿಗೆ BCCI ಬಿಗ್ ಟ್ವಿಸ್ಟ್

ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ನಟ ದರ್ಶನ್ ವಿರುದ್ಧ ಸಾವಿರಾರು ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಎ2 ಆಗಿರೋ ದಾಸ ಸದ್ಯ ಬೆನ್ನು ನೋವಿನ ಸಮಸ್ಯೆಯಿಂದ ನರಳುತ್ತಿದ್ದು, ಮಧ್ಯಂತರ ಜಾಮೀನಿನ ಮೇಲೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ಆದ ವೇಳೆ ರೇಣುಕಾ ಸ್ವಾಮಿಯ ಎರಡು ಫೋಟೋಗಳು ವೈರಲ್ ಆಗಿತ್ತು. . ನಟ ದರ್ಶನ್ ಗ್ಯಾಂಗ್ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ರೇಣುಕಾಸ್ವಾಮಿ ಪ್ರಾಣಭಿಕ್ಷೆ ನೀಡುವಂತೆ ಕಣ್ಣೀರಿಟ್ಟು ಅಂಗಲಾಚಿದ್ದ ಸಂದರ್ಭದಲ್ಲಿ ತೆಗೆದಿತ್ತು ಎನ್ನಲಾದ ಫೋಟೊ ಎಲ್ಲೆಡೆ ವೈರಲ್ ಆಗಿತ್ತು. ಇದನ್ನ ನೋಡಿದವರಿಗೆ ದರ್ಶನ್ ಅಂಡ್ ಗ್ಯಾಂಗ್ನ ಕ್ರೌರ್ಯ ಎಷ್ಟರ ಮಟ್ಟಿಗೆ ಇತ್ತು ಅನ್ನೋದು ಗೊತ್ತಾಗಿತ್ತು.. ಈ ಫೋಟೋ ನೋಡಿದವರ ಕರುಳು ಚುರಕ್ ಎಂದಿದೆ. ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ಅಂಗಲಾಚುವ ದೃಶ್ಯ ‘AI’ ಫೋಟೋನಾ?

ಈ ಫೋಟೋ ಸ್ಟೋನಿ ಬ್ರೂಕ್ಸ್ ಪಬ್ ಮಾಲೀಕ ವಿನಯ್ ಮೊಬೈಲ್ನಲ್ಲಿ ಪತ್ತೆಯಾಗಿತ್ತು. ಆದ್ರೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊನೆ ಕ್ಷಣಗಳ ಫೋಟೊಗಳು ಕೃತಕ ಬುದ್ಧಿಮತ್ತೆ ಅಂದ್ರೆ ‘ಎಐ’ನದ್ದು ಎನ್ನುವ ಆರೋಪವಿದೆ. ಇದು ಎಐ ಫೋಟೊ ಎಂದು ಆರೋಪಿಗಳು ಹೇಳುತ್ತಿದ್ದಾರೆ. ಈ ಫೋಟೋ ‘ಎಐ’ದು ಎನ್ನುವ ಆರೋಪ ಹಿನ್ನೆಲೆಯಲ್ಲಿ ಆರೋಪಿ ವಿನಯ್ ಮೊಬೈಲ್ ಮತ್ತು ಆ ಫೋಟೋವನ್ನ ಮತ್ತೆ ಎಫ್ಎಸ್ಎಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ಆದ್ರೆ ಪರೀಕ್ಷೆಗೆ ನೀಡಿ ಎರಡು ತಿಂಗಳಾದ್ರೂ ಇನ್ನೂ ವರದಿ ಬಂದಿಲ್ಲ. ಹೀಗಾಗಿ ಈ ವಿಚಾರವನ್ನ ಮುಂದಿಟ್ಟುಕೊಂಡು ದರ್ಶನ್ ಪರ ವಕೀಲರು ವಾದ ಮಂಡಿಸಲಿದ್ದಾರೆ. ಈಗಾಗಲೇ ಕೋರ್ಟ್ಗೆ ಅದು AI ಫೋಟೋ ಅಂತಾ ದರ್ಶನ್ ಪರ ವಕೀಲರು ಕೋರ್ಟ್ಗೆ ತಿಳಿಸಿದ್ರು. ಈಗ ರಿಪೋರ್ಟ್ ಬಾರದ ಹಿನ್ನಲೆ ಮತ್ತೆ ಇದೇ ವಿಚಾರ ಮುಂದಿಟ್ಟುಕೊಂಡು ವಾದ ಮುಂಡಿಸೋಕೆ ಒಳ್ಳೆಯ ಅಸ್ತ್ರ ಸಿಕ್ಕಂತಾಗಿದೆ.

ಫೋಟೋ ಅಸಲಿನಾ..? ನಕಲಿನಾ?

ರೇಣುಕಾಸ್ವಾಮಿ ಪ್ರಾಣಬಿಕ್ಷೆ ಕೇಳುವ ಫೋಟೋ ಅಸಲಿನಾ ನಕಲಿನಾ ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತೆ.. ಆರೋಪಿಗಳು ಇದು AI ಫೋಟೋ ಅಂತಾ ಹೇಳಿದ್ದಾರೆ. ಆದ್ರೆ ಇದ್ರ ಅಸಲಿಯತ್ತೇನು ಅನ್ನೋದು ಕಂಡು ಹಿಡಿಯೋಕೆ ಎಫೆಎಸ್ಎಲ್ ಟೀಂಗೆ ಕೂಡ ಕಷ್ಟವಾಗುತಿದೆಯಂತೆ.. ಎರಡು ತಿಂಗಳು ಕಳೆದ್ರೂ ಅದ್ರ ರಿಪೋರ್ಟ್ ನೀಡಿಲ್ಲ. ಒಂದು ವೇಳೆ ರಿಪೋರ್ಟ್ನಲ್ಲಿ AI ಪೋಟೋ ಅಂತಾ ಬಂದ್ರೆ ಡಿ ಗ್ಯಾಂಗ್ಗೆ ಪ್ಲೆಸ್ ಆಗುತ್ತೆ?. ಇದೇ ವಿಚಾರ ಇಟ್ಕೊಂಡು ವಾದ ಮಾಡಬಹುದು.. ಒಂದು ವೇಳೆ ಒರಿಜನಲ್ ಫೋಟೋ ಅನ್ನೋದು ಸಾಭೀತಾದ್ರೆ ಡಿ ಗ್ಯಾಂಗ್ಗೆ ಜೈಲೇ ಫಿಕ್ಸ್ ಆಗೋ ಚಾನ್ಸ್ ತುಂಬಾ ಇದೆ.. ಹೀಗಾಗಿ ಈ ರಿಪೋರ್ಟ್ ಮೇಲೆ ಕೂಡ ದರ್ಶನ್ & ಗ್ಯಾಂಗ್ ಭವಿಷ್ಯ ನಿಂತಿದೆ.

Shwetha M