ಪಿಯುಸಿಯಲ್ಲಿ 90% ಅಂಕ ಬಂದಿದ್ರೆ ಮಾತ್ರ ಮನೆ ಬಾಡಿಗೆ! – ಏನಿದು ಹೊಸ ರೂಲ್ಸ್?

ಪಿಯುಸಿಯಲ್ಲಿ 90% ಅಂಕ ಬಂದಿದ್ರೆ ಮಾತ್ರ ಮನೆ ಬಾಡಿಗೆ! – ಏನಿದು ಹೊಸ ರೂಲ್ಸ್?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆಯಲ್ಲಿ ಬಾಡಿಗೆ ದರ ಹೆಚ್ಚಾದರೆ, ಇನ್ನೂ ಕೆಲವು ಕಡೆ ಬಾಚುಲರ್ಸ್ ಗಳಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ ಅಂತಾ ಮನೆ ಮಾಲೀಕರು ಇರಾದೆ ತೆಗೆಯುತ್ತಾರೆ. ಆದರೆ ಇಲ್ಲೊಬ್ಬನಿಗೆ ಪಿಯುಸಿಯಲ್ಲಿ ಶೇಕಡಾ 90 ರಷ್ಟು ಅಂಕ ಬಂದಿಲ್ಲ ಅಂತಾ ಮಾಲೀಕ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಶಾಕ್! – ನೋಟ್ ಬುಕ್ಸ್ ಗೆ ಶೇ. 30 ರಿಂದ 40 ರಷ್ಟು ಬೆಲೆ ಏರಿಕೆ

ಸಾಮಾನ್ಯವಾಗಿ ಮನೆ ಬಾಡಿಗೆ ಪಡೆಯುವ ಮುನ್ನ ಆಹಾರ ಪದ್ಧತಿ, ಜಾತಿ, ವಿವಾಹಿತರು ಹೌದೋ, ಅಲ್ಲವೋ ಎಂದು ಕೇಳುವುದು ಸಾಮಾನ್ಯ. ಆದರೆ, ಬೆಂಗಳೂರಿನಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಲು ಪಿಯುಸಿ ಮಾರ್ಕ್ಸ್ ಮಾನದಂಡ ವಾಗಿಸಿಕೊಂಡಿದ್ದು, ಶೇ.90 ಅಂಕ ಪಡೆಯದ ಹಿನ್ನೆಲೆ ಮನೆ ಬಾಡಿಗೆ ನೀಡದೇ ಇರುವ ಘಟನೆ ವರದಿಯಾಗಿದೆ. ಮನೆ ಮಾಲೀಕ ಹಾಗೂ ಬಾಡಿಗೆ ಕೇಳಿದ ವ್ಯಕ್ತಿಯ ವಾಟ್ಸ್ ಆ್ಯಪ್ ಚಾಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಶುಭ್‌ ಎನ್ನುವವರು ತಮ್ಮ ಸಂಬಂಧಿಕರೊಬ್ಬರು ಬೆಂಗಳೂರಿನಲ್ಲಿ ಮನೆ ಹುಡುಕಲು ನಡೆಸಿದ ಪರದಾಟದ ಮೆಸೇಜ್‌ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಡಿಗೆದಾರರು ಮಧ್ಯವರ್ತಿಯೊಬ್ಬರಿಗೆ ಮನೆ ಹುಡುಕಲು ತಿಳಿಸಿದ್ದು, ಮಧ್ಯವರ್ತಿ ಬಾಡಿಗೆದಾರರ ಲಿಂಕ್ಡ್ ಇನ್ ಖಾತೆಯ ಮಾಹಿತಿ ಹಾಗೂ ಪಿಯುಸಿ ಅಂಕಪಟ್ಟಿಯನ್ನು ಹಂಚಿಕೊಳ್ಳಲು ಕೇಳಿದ್ದಾರೆ. ಬಳಿಕ ಮನೆಯ ಮಾಲೀಕರಿಗೆ ನೀವು ಪಿಯುಸಿಯಲ್ಲಿ ಪಡೆದ ಅಂಕ ತೃಪ್ತಿ ತಂದಿಲ್ಲವಂತೆ, ಕನಿಷ್ಠ ಶೇ.90 ಅಂಕ ಪಡೆದಿರಬೇಕಿತ್ತು ಎಂದು ತಿಳಿಸಿ ಮನೆ ಬಾಡಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಮಧ್ಯವರ್ತಿ ತಿಳಿಸಿದ್ದಾರೆ. ಈ ವಾಟ್ಸ್ ಆ್ಯಪ್ ಚಾಟ್ ಇದೀಗ ವೈರಲ್‌ ಆಗಿದ್ದು, ಬಾಡಿಗೆ ಮನೆಗೂ ಅಂಕಪಟ್ಟಿ ಬೇಕೆ ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ!

suddiyaana