ಮಂಗಳಗೌರಿ ಮದುವೆ ಸೀರಿಯಲ್‌ ಖ್ಯಾತಿಯ ನಟ ಇನ್ನಿಲ್ಲ!

ಮಂಗಳಗೌರಿ ಮದುವೆ ಸೀರಿಯಲ್‌ ಖ್ಯಾತಿಯ ನಟ ಇನ್ನಿಲ್ಲ!

ಕನ್ನಡ ಕಿರುತೆರೆಯ ಖ್ಯಾತ ನಟ, ರಂಗಭೂಮಿ ಕಲಾವಿದ ವಿಜಯ್‌ ಕುಮಾರ್‌ ಜಿತೂರಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ್‌ ಅವರು ಸೋಮವಾರ ಸಂಜೆ ಹುಟ್ಟೂರಾದ ಗದಗದಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಡಿಕ್ಕಲ್ ಗೆ GOLDEN CHANCE – ನಂ.3 ಸ್ಲಾಟ್ ಪರ್ಮನೆಂಟ್ ಆಗುತ್ತಾ?

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ವಿಜಯ್‌ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಹೆಚ್ಚು ಅವಕಾಶಗಳು ಸಿಗುತ್ತಿರಲಿಲ್ಲ. ಹೀಗಾಗಿ ಮನೆ ಬಾಡಿಗೆ ಕಟ್ಟಲೂ ಸಾಧ್ಯವಾಗದೇ ಹುಟ್ಟೂರಿಗೆ ತೆರಳಿದ್ದರು. ಈಗ ಅವರು ಇಹಲೋಕ ತ್ಯಜಿಸಿದ್ದಾರೆ.

ಅಂದ್ಹಾಗೆ ವಿಜಯ್‌ ಅವರು ಮಂಟೆಸ್ವಾಮಿ ಕಥಾ ಪ್ರಸಂಗ ಹಾಗೂ ಸುಪ್ರಸಿದ್ಧ ರಂಗಗೀತೆಗಳ ಗಾಯನದಲ್ಲಿ ತೊಡಗಿಸಿಕೊಂಡಿದ್ದರು. ವಿಜಯ್ ಕುಮಾರ್ ಜಿತೂರಿ ಅವರು ಮಂಗಳಗೌರಿ ಸೀರಿಯಲ್​ನ ಗಗನ್ ಚಿನ್ನಪ್ಪ ಅವರ ಪೊಲೀಸ್ ಪಾತ್ರದ ಜೊತೆ ಕಾನ್ಸ್ಟೇಬಲ್ ಆಗಿ ನಟಿಸಿದ್ದರು. ಮಿಲನ ಹಾಗೂ ಮಂಗಳಗೌರಿ ಮದುವೆ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಇದೀಗ ಅನೇಕ ವೀಕ್ಷಕರು, ಕಲಾವಿದರು ಕಂಬನಿ ಮಿಡಿದಿದ್ದಾರೆ. ಮಂಟೆಸ್ವಾಮಿ ಕಥಾ ಪ್ರಸಂಗದ ಹಾಡುಗಾರಿಕೆ ನೋಡಿ ಶಂಕರ್ ನಾಗ್ ಸ್ವತಃ ಆಯ್ಕೆ ಮಾಡಿಕೊಂಡಿದ್ದ ಗಾಯಕ ವಿಜಯ್ ಕುಮಾರ್ ಜಿತೂರಿ.

ಗದಗಿನ ಬೆಟ್ಟಗೇರಿಯಿಂದ ಬೆಂಗಳೂರಿನ ಕಲಾಕ್ಷೇತ್ರದವರೆಗೆ, ಟೆಕ್ಸ್ಟೈಲ್ ಡಿಸೈನ್ ಮಾಡುತ್ತಲೇ ರಂಗಭೂಮಿ ಪ್ರೀತಿಗಾಗಿ ಹೋರಾಡಿದ ಪೋಷಕ ನಟ ವಿಜಯ್ ಕುಮಾರ್ ಜಿತೂರಿ . ಮಂಟೆಸ್ವಾಮಿ ಕಥಾ ಪ್ರಸಂಗದ 550ಕ್ಕೂ ಹೆಚ್ಚು ಪ್ರದರ್ಶನಗಳು ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *