ರೇವಣ್ಣಗೆ ಶುಕ್ರವಾರ ಮಧ್ಯಾಹ್ನದ ತನಕವಷ್ಟೇ ರಿಲೀಫ್.. – ಮತ್ತೆ ಜೈಲು ಪಾಲಾಗುತ್ತಾರಾ?   

ರೇವಣ್ಣಗೆ ಶುಕ್ರವಾರ ಮಧ್ಯಾಹ್ನದ ತನಕವಷ್ಟೇ ರಿಲೀಫ್.. – ಮತ್ತೆ ಜೈಲು ಪಾಲಾಗುತ್ತಾರಾ?   

ಕಿಡ್ನ್ಯಾಪ್‌ ಕೇಸ್‌ನಿಂದ ಜಾಮೀನು ಪಡೆದು ಹೊರ ಬಂದರೂ ಮಾಜಿ ಸಚಿವ ರೇವಣ್ಣಗೆ ರಿಲೀಫ್‌ ಸಿಕ್ಕಿಲ್ಲ. ಇದೀಗ ಮತ್ತೊಂದು ಕೇಸ್‌ನಲ್ಲಿ ಜೈಲು ಸೇರುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ಗೆ ಅರ್ಹತೆ ಪಡೆದ ಸನ್ ರೈಸರ್ಸ್ ಹೈದರಾಬಾದ್!

ಹೌದು, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರೋ ಲೈಂಗಿಕ ಕಿರುಕುಳ ಕೇಸ್‌ನಲ್ಲಿ ಎ1 ಆರೋಪಿಯಾಗಿದ್ದಾರೆ ರೇವಣ್ಣ. ಇದೀಗ ಈ ಕೇಸ್‌ನಲ್ಲಿ ಮತ್ತೆ ಜೈಲು ಸೇರುವ ಆತಂಕ ರೇವಣ್ಣಗೆ  ಶುರುವಾಗಿದೆ. ಗುರುವಾರ ಬೆಂಗಳೂರಿನ 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಈ ಪ್ರಕಣಕ್ಕೆ ಸಂಬಂಧಿಸಿದಂತೆ ರೇವಣ್ಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು. ಇತ್ತ ಎಸ್‌ಐಟಿ ಕೂಡ ಕಸ್ಟಡಿಗೆ ಪಡೆಯಲು ವಾದ ಮಂಡಿಸಿತ್ತು. ಇನ್ನೂ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಾಜಿ ಸಚಿವರಿಗೆ ಮಧ್ಯಂತರ ಜಾಮೀನು ನೀಡಿ ಸದ್ಯಕ್ಕೆ ಬಂಧನದಿಂದ ಮುಕ್ತಿ ನೀಡಿದೆ.

42 ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಮಧ್ಯಾಹ್ನದ ತನಕವಷ್ಟೇ ರೇವಣ್ಣರಿಗೆ ರಿಲೀಫ್ ಕೊಟ್ಟಿದೆ. ಶುಕ್ರವಾರ  ನ್ಯಾಯಾಲಯ ಎರಡು ಕಡೆ ವಾದ ಆಲಿಸಲಿದೆ. ಆ ವಾದದ ಬಳಿಕ ರೆಗ್ಯೂಲರ್ ಬೇಲ್ ತಿರ್ಮಾನವಾಗಲಿದೆ.  ಮಧ್ಯಾಹ್ನದ ಬಳಿಕ ರೇವಣ್ಣಗೆ ಜೈಲಾ ಅಥವಾ ಬೇಲಾ ಅಂತ ತೀರ್ಮಾನವಾಗಲಿದೆ.

Shwetha M