ಸ್ಮಾರ್ಟ್ ಫೋನ್ ಗಳನ್ನು ಹಾಳಾಗುವವರೆಗೂ ಉಪಯೋಗಿಸಬಹುದಾ – ಎಷ್ಟು ವರ್ಷಕ್ಕೊಮ್ಮೆ ಮೊಬೈಲ್ ಗಳನ್ನ ಬದಲಿಸಬೇಕು?

ಸ್ಮಾರ್ಟ್ ಫೋನ್ ಗಳನ್ನು ಹಾಳಾಗುವವರೆಗೂ ಉಪಯೋಗಿಸಬಹುದಾ – ಎಷ್ಟು ವರ್ಷಕ್ಕೊಮ್ಮೆ ಮೊಬೈಲ್ ಗಳನ್ನ ಬದಲಿಸಬೇಕು?

ತಿನ್ನೋ ಊಟದಿಂದ ಹಿಡಿದು ಬಳಸೋ ವಸ್ತುಗಳವರೆಗೂ ಎಲ್ಲದಕ್ಕೂ ಒಂದು ವ್ಯಾಲಿಡಿಟಿ ಅಂತಾ ಇರುತ್ತೆ. ಹಾಗೇ ಸ್ಮಾರ್ಟ್ ಫೋನ್ ಗೂ ಕೂಡ ಆಯಸ್ಸು ಇದೆ. ಇಷ್ಟು ವರ್ಷಗಳ ಬಳಿಕ ಅದನ್ನೂ ಕೂಡ ಬದಲಿಸಬೇಕಾಗುತ್ತದೆ.

ಸ್ಮಾರ್ಟ್ ಫೋನ್ ಅನ್ನೋದು ಈಗಂತೂ ನಮ್ಮ ಜೀವನದ ಒಂದು ಭಾಗವೇ ಆಗೋಗಿದೆ. ಒಂದು ರೀತಿ ಅಡಿಕ್ಟ್ ಅಂತಾ ಹೇಳಿದ್ರೂ ತಪ್ಪಿಲ್ಲ ಬಿಡಿ. ಮಾರುಕಟ್ಟೆಗೂ ಕೂಡ ಡೈಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬರ್ತಾನೇ ಇರ್ತಾವೆ. ಕೆಲವರು ಆಗಿದ್ದಾಂಗ್ಗೆ ಫೋನ್ ಬದಲಾಯಿಸುತ್ತಿರುತ್ತಾರೆ. ಇನ್ನೂ ಕೆಲವ್ರು ಹಾಳಾಗುವವರೆಗೂ ಒಂದೇ ಫೋನ್​ ಬಳಸ್ತಾರೆ. ಹೆಚ್ಚಿನ ಕಂಪನಿಗಳು ಹೊಸ ಫೋನ್‌ನೊಂದಿಗೆ ಮೂರು ವರ್ಷಗಳವರೆಗೆ ಆಪರೇಟಿಂಗ್ ಸಿಸ್ಟಮ್ ಅಪ್‌ಗ್ರೇಡ್ ಮಾಡುವುದಾಗಿ ಭರವಸೆ ನೀಡುತ್ತವೆ. ಇನ್ನೂ ಕೆಲ ಕಂಪನಿಗಳು ಗ್ರಾಹಕರ ಸುರಕ್ಷತೆಗಾಗಿ 5 ವರ್ಷಗಳವರೆಗೆ ಸೆಕ್ಯೂರಿಟಿ ಅಪ್​ಡೇಟ್ ಕೂಡ ನೀಡುತ್ತವೆ. ಸ್ಮಾರ್ಟ್​ಫೋನ್​ಗಳಿಗೆ ವೈರಸ್ ಅಟ್ಯಾಕ್ ಆಗದಿರಲಿ ಮತ್ತು ಸುರಕ್ಷತೆಗಾಗಿ ಅಪ್​ಡೇಟ್ ನೀಡಲಾಗುತ್ತೆ. ಆದ್ರೆ ಅಪ್ಡೇಟ್ ನೀಡುವುದನ್ನು ಕಂಪನಿ ನಿಲ್ಲಿಸಿದಾಗ ಆ ಫೋನ್​ನ ಆಯಸ್ಸು ಮುಗಿದಿದೆ ಎಂದರ್ಥ. ಇದರಲ್ಲಿ ಕಡಿಮೆ ಬೆಲೆ ದುಬಾರಿ ಬೆಲೆಯ ಫೋನ್​ ಅನ್ನೋದು ಬರೋದಿಲ್ಲ. ಯಾವುದೇ ಫೋನ್​ ಆಗಿದ್ದರೂ ಅಪ್​ಡೇಟ್ ನಿಲ್ಲಿಸದರೆ ಫೋನ್ ಬದಲಿಸಬೇಕು.

ಇದನ್ನೂ ಓದಿ : ಅದು ನಾಯಿ ಮರಿ ಅಲ್ಲ ಕಣೋ.. ಕಾಳಿಂಗ ಸರ್ಪ.. – ವಿಷ ಸರ್ಪಕ್ಕೆ ಸ್ನಾನ ಮಾಡಿಸಿದ ಭೂಪ!

ಫೋನ್ ಬದಲಾಯಿಸುವಾಗ ಕಡಿಮೆ ಬೆಲೆಯ ಫೋನ್, ಹೆಚ್ಚಿನ ಬೆಲೆಯ ಫೋನ್ ಅನ್ನೋದು ಬರೋದಿಲ್ಲ.  ಯಾವುದೇ ಫೋನಾಗಿದ್ದರೂ ಸಾಫ್ಟ್‌ವೇರ್ ಅಪ್ಡೇಟ್ ನೀಡುವುದು ನಿಲ್ಲಿಸಿದರೆ ಅದರ ಆಯುಷ್ಯ ಮುಗಿಯಿತು ಎಂದರ್ಥ. 10,000 ರೂ. ಮೌಲ್ಯದ ಅಗ್ಗದ ಬಜೆಟ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನಾ ಕಂಪನಿಗಳು ಸಾಮಾನ್ಯವಾಗಿ ಹೆಚ್ಚು ಸಮಯ ಗ್ರಾಹಕರಿಗೆ ಓಎಸ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಒದಗಿಸುವ ಭರವಸೆ ನೀಡುವುದಿಲ್ಲ. ಆದರೆ ಮತ್ತೊಂದೆಡೆ, ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳೊಂದಿಗೆ ಬರುವ ದುಬಾರಿ ಮೊಬೈಲ್‌ಗಳ ಕಂಪನಿಗಳು ಗ್ರಾಹಕರಿಗೆ OS ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಹೆಚ್ಚು ಸಮಯ ನೀಡುತ್ತವೆ. ಇದರಿಂದಾಗಿ ಈ ಮಾದರಿಗಳು ಸುರಕ್ಷಿತವಾಗಿ ಉಳಿಯುತ್ತವೆ ಮತ್ತು ದೀರ್ಘಾವಧಿಯವರೆಗೆ ಉಪಯೋಗಿಸಬಹುದು.

Shantha Kumari