ಪತ್ನಿಯನ್ನು ಕಳ್ಳಿ, ಕಳ್ಳಿ ಎಂದು ಸಂಬಂಧಿಕರ ಟೀಕೆ – ಸಿಟ್ಟಿನಿಂದ  ಹೆಂಡತಿಯನ್ನೇ ಮುಗಿಸಿದ ಪಾಪಿ!

ಪತ್ನಿಯನ್ನು ಕಳ್ಳಿ, ಕಳ್ಳಿ ಎಂದು ಸಂಬಂಧಿಕರ ಟೀಕೆ – ಸಿಟ್ಟಿನಿಂದ  ಹೆಂಡತಿಯನ್ನೇ ಮುಗಿಸಿದ ಪಾಪಿ!

ಬೆಂಗಳೂರು: ಪತ್ನಿಯನ್ನು ಕಳ್ಳಿ, ಕಳ್ಳಿ ಎಂದು ಸಂಬಂಧಿಕರು, ನೆರೆಮನೆಯವರು ವ್ಯಂಗ್ಯ ಮಾಡುತ್ತಿದ್ದಕ್ಕೆ ವ್ಯಕ್ತಿಯೊಬ್ಬ ಬೇಸತ್ತಿದ್ದಾನೆ. ನಿರಂತರವಾಗಿ ವ್ಯಂಗ್ಯ ಮಾಡುತ್ತಿದ್ದಕ್ಕೆ ಪತಿ ಮಹಾಶಯನೊಬ್ಬ ತನ್ನ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಈ ಘಟನೆ ನಡೆದಿರುವುದು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ. ಸರಿತಾ ಮತ್ತು ತಾರಾನಾಥ್ ದಂಪತಿ ಮಂಗಳೂರಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪತ್ನಿ ಸರಿತಾ ಮೇಲೆ ಕಳ್ಳತನ ಆರೋಪ ಕೇಳಿಬಂದಿತ್ತು. ಕಳ್ಳತನ ಆರೋಪ ಬಂದಿರುವ ಹಿನ್ನೆಲೆ ಈ ದಂಪತಿ ಬೆಂಗಳೂರಿನ ವೈಟ್ ಫೀಲ್ಡ್ ಗೆ ಶಿಫ್ಟ್ ಆಗಿದ್ದರು.

ಇದನ್ನೂ ಓದಿ: ವ್ಯಕ್ತಿ ಮೃತಪಟ್ಟಿದ್ದಾರೆ ಎಂದ ವೈದ್ಯರು – ಮನೆಗೆ ಕರೆತರುತ್ತಿದ್ದಂತೆ ಎದ್ದು ಕುಳಿತ ಬಿಜೆಪಿ ನಾಯಕ!

ಆದರೆ, ಬೆಂಗಳೂರಿಗೆ ಬಂದು ನೆಲೆಸಿದ ಬಳಿಕ ಕೂಡ ಸಂಬಂಧಿಕರು, ಪರಿಚಿತರು ಸರಿತಾಳನ್ನು ಕಳ್ಳಿ ಕಳ್ಳಿ ಅಂತಾ ಟೀಕೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಪತಿ ತರಾನಾಥ್ ಪತ್ನಿಯನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿ ವಿಫಲವಾಗಿ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

suddiyaana