ಇಬ್ಬರು ಮಕ್ಕಳಿದ್ರೂ ಅನಾಥೆ ಎಂದು ಯುವಕನ ಮದುವೆಯಾದ್ಲು! – ಒಂದೇ ವಾರದಲ್ಲಿ ಕಳಚಿತು ಆಂಟಿ ರಹಸ್ಯ!

ಇಬ್ಬರು ಮಕ್ಕಳಿದ್ರೂ ಅನಾಥೆ ಎಂದು ಯುವಕನ ಮದುವೆಯಾದ್ಲು! – ಒಂದೇ ವಾರದಲ್ಲಿ ಕಳಚಿತು ಆಂಟಿ ರಹಸ್ಯ!

ಈಗಿನ ಕಾಲದಲ್ಲಿ ಯಾರನ್ನ ಕೂಡ ನಂಬುವಂತಿಲ್ಲ. ದುಡ್ಡಿನ ಆಸೆಗೆ ಏನು ಬೇಕಾದ್ರೂ ಮಾಡೋದಿಕ್ಕೆ ರೆಡಿ ಇರ್ತಾರೆ. ಇಲ್ಲೊಬ್ಬಳು ಹಣಕ್ಕಾಗಿ ಯುವಕನ್ನು ಮದುವೆಯಾಗಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯ ಬಣ್ಣ ಬಯಲಾಗಿದೆ. ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ:  ಇನ್ನುಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ಕಡ್ಡಾಯ! – ಕೇಂದ್ರದಿಂದ ಹೊಸ ಮಾರ್ಗಸೂಚಿ

ಏನಿದು ಘಟನೆ?  

ಹಾವೇರಿಯ ರಾಣೆಬೆನ್ನೂರು ತಾಲೂಕಿನ ತುಮ್ಕಿನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೇಖಾ ಎಂಬಾಕೆ ಇಬ್ಬರು ಮಕ್ಕಳ ತಾಯಿ. ಆದ್ರೂ ಹಣದ ಆಸೆಗಾಗಿ ಆಕೆ ಬೇರೊಬ್ಬರ ಜೊತೆ ಮದುವೆಯಾಗಿದ್ದಾಳೆ. ಸ ಬರೋಬ್ಬರಿ 2.5 ಲಕ್ಷ ರೂಪಾಯಿ ವಧುದಕ್ಷಿಣೆ ಪಡೆದು ರೇಖಾ, ರವಿಚಂದ್ರ ಎಂಬಾತನ ಮದುವೆಯಾಗಿದ್ದಾಳೆ. ಮದುವೆಯಾದ ವಾರದಲ್ಲೇ ಆಕೆಯ ಮಕ್ಕಳು ಫೋನ್ ರವಿಚಂದ್ರನಿಗೆ ಶಾಕ್‌ ಕೊಟ್ಟಿದ್ದಾರೆ. ಇದೀಗ ಆಕೆ ಪೊಲೀಸರ ಅಥಿತಿಯಾಗಿದ್ದಾರೆ.

ರೇಖಾ ತುಮಕೂರಿನ ಪಾವಗಡ ಮೂಲದ ನಿವಾಸಿಯಾಗಿದ್ದು, ತಾನು ಅನಾಥೆ. ತನಗೆ ಯಾರು ಇಲ್ಲ ಎಂದು ಕತೆ ಕಟ್ಟಿದ್ದಳು. ಅಷ್ಟೇ ಯುವಕನಿಂದ ವಧುದಕ್ಷಿಣೆಯಾಗಿ 2.5 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಹಿರೇಕೇರೂರು ದುರ್ಗಾ ದೇವಿ ದೇವಸ್ಥಾನದಲ್ಲಿ ರೇಖಾ ಮತ್ತು ರವಿಚಂದ್ರ ಮದುವೆಯಾಗಿತ್ತು. ಮದುವೆಯಾದ ಒಂದೇ ವಾರದಲ್ಲಿ ರೇಖಾಳ ಕಳ್ಳಾಟ ಬಯಲಾಗಿದೆ. ರೇಖಾಳಿಗೆ ಆಕೆಯ ಮಕ್ಕಳು ಫೋನ್ ಮಾಡಿದ್ದಾರೆ. ಈ ವೇಳೆ ರವಿಚಂದ್ರ ಪೋಷಕರು ರೇಖಾಗೆ ಬಂದ ಕಾಲ್ ರಿಸೀವ್ ಮಾಡಿದ್ದಾರೆ. ಪೋಷಕರು ಯಾರು ಅಂತ ಕೇಳಿದಾಗ ನಾವು ರೇಖಾ ಮಕ್ಕಳು ಎಂಬ ವಿಷಯವನ್ನು ಹೇಳಿದ್ದಾರೆ. ರೇಖಾಳ ಮದುವೆ ವಿಷಯ ತಿಳಿಯುತ್ತಿದ್ದಂತೆ ರವಿಚಂದ್ರ ಮತ್ತು ಕುಟುಂಬಸ್ಥರು ಶಾಕ್ ಆಗಿದ್ದಾರೆ.

ತನ್ನ ಬಂಡವಾಳ ಬಯಲಾಗ್ತಿದ್ದಂತೆ ರೇಖಾ ತಮ್ಮಿನಕಟ್ಟಿ ಗ್ರಾಮದಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಳು. ಓಡಿ ಹೋಗ್ತಿದ್ದ ರೇಖಾಳನ್ನು ಹಿಡಿದ ರವಿಚಂದ್ರ ಕುಟುಂಬ ಮತ್ತು ಗ್ರಾಮಸ್ಥರು ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shwetha M