ಹಾದಿ ಬೀದಿಯಲ್ಲಿ ರೇಷ್ಮಾ ರಂಪಾಟ – ರೀಲ್ಸ್ ಗೆಳೆಯನ ಜೊತೆ ಜಗಳ?
ರೀಲ್ಸ್ ಜೋಡಿ ಬಣ್ಣ ಬಯಲು!?

ಹಾಯ್ ಫ್ರೆಂಡ್ಸ್ ಏನ್ ಗೊತ್ತಾ.. ಈ ಡೈಲಾಗ್ ಕೇಳಿದಾಗ ನೆನಪಾಗೋದೇ ರೀಲ್ಸ್ ರಾಣಿ ರೇಷ್ಮಾ.. ಕೂತಿದ್ದು,, ನಿಂತಿದ್ದು.. ತಿಂದಿದ್ದನ್ನೇಲ್ಲಾ ರೀಲ್ಸ್ ಮಾಡಿ ಹಾಕ್ತಿದ್ದ ಈಕೆ ರೇಷ್ಮಾ ಆಂಟಿ ಅಂತಾನೇ ಫೇಮಸ್ ಆಗಿದ್ದಾರೆ.. ಇತ್ತೀಚೆಗಂತೂ ರೇಷ್ಮಾ ಈಗ ಫುಲ್ ಪಾಶ್ ಆಗಿದ್ದಾರೆ. ಟ್ರೆಂಡಿಂಗ್ ಸಾಂಗ್‌ಗೆ ಡ್ಯಾನ್ಸ್ ಮಾಡಿ ಸುದ್ದಿಯಲ್ಲಿದ್ದಾರೆ.. ಆದ್ರೀಗ ರೇಷ್ಮಾ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.. ನಡು ಬೀದಿಯಲ್ಲೇ ರಂಪಾಟ ಮಾಡಿದ್ದಾರೆ.. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.. ಅಷ್ಟಕ್ಕೂ ರೇಷ್ಮಾ ಆಂಟಿ ಬೀದಿಯಲ್ಲಿ ಕೂಗಾಡಿದ್ದು ಯಾಕೆ? ಯಾರ ಮೇಲೆ ಇಷ್ಟೊಂದು ಸಿಟ್ಟು ಮಾಡ್ಕೊಂಡಿದ್ದು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬುಮ್ರಾ ಬದಲಿಗೆ ಹರ್ಷಿತ್ ರಾಣಾ? – ಶಿಷ್ಯನ ಮೇಲೆ ಗಂಭೀರ್ ಹುಚ್ಚು ಪ್ರೀತಿ?
ಸುಮ್ಮನೆ ಬಾಯಿ ಬಂತಂತೆ ಮನಸ್ಸು ಬಿಚ್ಚಿ ಮಾತನಾಡಿ ರೀಲ್ಸ್ ಮಾಡುತ್ತಾ ಫೇಮಸ್ ಆಗಿರುವ ರೇಷ್ಮಾ, ಗಿಚ್ಚಿ ಗಿಲಿಗಿಲಿ ವೇದಿಕೆಗೂ ಬಂದಿದ್ರು.. ಅದಾದ್ಮೇಲೆ ಒಂದಷ್ಟು ಕ್ರಿಯೇಟಿವ್ ವಿಡೀಯೋ ಮೂಲಕ ಸದ್ದು ಮಾಡ್ತಿದ್ದಾರೆ. ಅಡುಗೆ ವಿಡೀಯೋ, ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾ ಬಳಕೆದಾರರನ್ನ ರಂಜಿಸುತ್ತಿದ್ದಾರೆ. ಇತ್ತೀಚೆಗಂತು ರೇಷ್ಮಾ ಆಂಟಿ ಫುಲ್ ಮಾಡ್ರನ್ ಆಗಿ ಬಿಟ್ಟಿದ್ದಾರೆ. ಯುವತಿಯರು ನಾಚುವಂತ ಬಟ್ಟೆಗಳನ್ನ ಹಾಕಿಕೊಂಡು ರೀಲ್ಸ್ ಮಾಡ್ತಿದ್ದಾರೆ.. ಡ್ಯಾನ್ಸ್ ಬರಲಿ, ಬರದೆ ಇರಲಿ.. ಹಾಕ್ರೋ ನಾಲ್ಕು ಸ್ಟೆಪ್ಸ್ ಅಂತಾ ಡ್ಯಾನ್ಸ್ ಮಾಡ್ತಿದ್ದಾರೆ.. ಇದೀಗ ರೇಷ್ಮಾ ಆಂಟಿ ಅಂತಾನೇ ಫೇಮಸ್. ಅವರಿಗೆ ನವೀನ್ ಎಂಬ ಯುವಕ ಬೇರೆ ಜೊತೆಯಾಗಿದ್ದಾರೆ. ಇಬ್ಬರು ಸೇರಿ ದಿನಕ್ಕೆ ಹಲವು ರೀಲ್ಸ್ ಶೇರ್ ಮಾಡ್ತಾ ಇರ್ತಾರೆ. ಕೆಲವರು ನೋಡಿ ಎಂಜಾಯ್ ಮಾಡಿದ್ರೆ, ಇನ್ನು ಕೆಲವರು ಏನ್ರೋ ಇವರ ಕಥೆ ಅಂದ್ಕೊಂಡು ಮುಂದಕ್ಕೆ ಹೋಗ್ತಾ ಇದಾರೆ. ರೀಲ್ಸ್‌ನಲ್ಲಿ ಕಿಚ್ಚು ಹೆಚ್ಚಿಸಿದ್ದ ರೇಷ್ಮಾ ಆಂಟಿ ಇದೀಗ ಬೀದಿಲಿ ನಿಂತು ಜಗಳ ಆಡಿದ್ದಾರೆ.. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೇಷ್ಮಾಆಂಟಿ ಆ ವಿಡಿಯೋದಲ್ಲಿ, ಮೊದ್ಲು ನ್ಯಾಯವಾಗಿ ಮಾತಾಡಬೇಕು. ಅವಳು ಬೇಕು ಅಂದ್ರೆ ಬೇಕು ಬೇಕು ಅಂತಾ ರೋಪ್ ಹಾಕೋ ವಿಡಿಯೋ ವೈರಲ್ ಆಗಿದೆ. ರೇಷ್ಮಾ ಈ ರೀತಿ ಜಗಳ ಆಡುವಾಗ ಅದೇ ಜಾಗದಲ್ಲಿ ನವೀನ್ ಕೂಡ ಇದ್ದಾರೆ. ರೇಷ್ಮಾ ಜಗಳ ಆಡುವುದಕ್ಕೆ ಹೋದಾಗ ತಡೆಯುವ ಪ್ರಯತ್ನ ಮಾಡಿದ್ದಾರೆ ನವೀನ್. ಆಗ ವಿಡಿಯೋ ವಿಚಾರಕ್ಕೆ ಜಗಳ ಆಗಿರ್ಬೋದು ಅಂತಾ ನೆಟ್ಟಿಗರು ಅಂದ್ಕೊಂಡಿದ್ರು.. ಆದ್ರೆ ಅಲ್ಲಿ ಆಗಿರೋದೇ ಬೇರೆ.. ರೇಷ್ಮಾ, ನವೀನ್ ಹೋಗ್ತಿರೋ ಕಾರ್ ಗೆ ಆಕ್ಸಿಡೆಂಟ್ ಆಗಿದೆ.
ಹೌದು, ಈ ಬಗ್ಗೆ ರೀಲ್ಸ್ ರೇಷ್ಮಾ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾತಾಡಿದ ರೀಲ್ಸ್ ರೇಷ್ಮಾ, ಇಲ್ಲಿ ಆ್ಯಕ್ಸಿಡೆಂಟ್ ಆಗಿದೆ. ನಮ್ಮ ಕಾರಿಗೆ ಡಿಕ್ಕಿ ಹೊಡೆದು ಓಡಿ ಹೋಗಿದ್ದಾರೆ. ಮದುವೆಯಿಂದ ಬಂದಿದ್ದೀವಿ, ಏನ್ಮಾಡ್ತೀರಿ ಎಂದಿದ್ದಾರೆ. ಯಾರಿಗೂ ಏನೂ ಆಗಿಲ್ವಲ್ಲ, ಚಿಕ್ಕ ಮಕ್ಕಳು ಇದ್ದಾರೆ. ನಮ್ಮ ಕಾರು ಡ್ಯಾಮೇಜ್ ಆಗಿದೆ. ಗ್ಲಾಸ್ ಎಲ್ಲಾ ಒಡೆದೋಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದಾದ ಬಳಿಕ ಪೋಲಿಸ್ ಠಾಣೆಗೆ ಹೋಗಿರುವುದಾಗಿ ಹೇಳಿದ್ದಾರೆ.. ಬಳಿಕ ರೀಲ್ಸ್ ಪಾರ್ಟನ್ ನವೀನ್ ಗೆ ಸಮಧಾನ ಪಡಿಸಿದ್ದಾರೆ. ನೀವು ನಂಬೋ ವೆಂಕಟೇಶ್ವರ ಒಳ್ಳೆದು ಮಾಡ್ತಾರೆ. ನವೀನ್ ನೀವು ಟೆನ್ಶನ್ ಮಾಡ್ಬೇಡಿ. ಗಾಡಿಗೆ 50 ಸಾವಿರ ಆಗುತ್ತಂತೆ. ಅವರು ಕೊಡೋದು ಕೊಟ್ಬಿಟ್ರೆ ಸಾಕು. ಕಂಪ್ಲೇಂಟ್ ಏನೂ ಕೊಡಲ್ಲ. ಗಾಡಿ ರಿಪೇರಿ ಆದ್ರೆ ಸಾಕು ಎಂದಿದ್ದಾರೆ ರೇಷ್ಮಾ.
ಆದ್ರೀಗ ಇದೇ ವಿಚಾರವಾಗಿ ಅನೇಕರು ರೇಷ್ಮಾ ವಿರುದ್ಧ ಕಿಡಿಕಾರಿದ್ದಾರೆ. ನೀನೇನ್ ರಿಪೋರ್ಟರಾ? ತಾಯಿ ಮೊದಲು ಆಸ್ಪತ್ರೆಗೆ ಸೇರಿಸು. ಅದು ನಿನ್ನ ದೊಡ್ಡತನ. ಅದು ಬಿಟ್ಟು ಬಿಟ್ಟಿ ಡೈಲಾಗ್ ಹೇಳ್ಕೋತ ನಿಂತಿಯಲ್ಲಾ? ನಿನ್ ನಾಚಿಕೆ ಆಗ್ಬೇಕು. ಹೋಗು ಗಡ್ದಪ್ಪ ಜೊತೆಗೆ ಕುಣಿತ ಕಾಲ ಕಳಿ. ಇನ್ನೂ ಏನೇನ್ ನೋಡ್ಬೇಕೋ ಏನೋ ಎಂದು ಕಮೆಂಟ್ ಮಾಡಿದ್ದಾರೆ.