ರೀಲ್ಸ್‌ ಮಾಡಲು ಕುತ್ತಿಗೆಗೆ ಹಗ್ಗ ಕಟ್ಟಿಕೊಂಡ್ಲು! – ಅಯ್ಯೋ.. ಕುಣಿಕೆ ಬಿಗಿಯಾಗಿ ಮಹಿಳೆ ಸಾವು

ರೀಲ್ಸ್‌ ಮಾಡಲು ಕುತ್ತಿಗೆಗೆ ಹಗ್ಗ ಕಟ್ಟಿಕೊಂಡ್ಲು! – ಅಯ್ಯೋ.. ಕುಣಿಕೆ ಬಿಗಿಯಾಗಿ ಮಹಿಳೆ ಸಾವು

ಇತ್ತೀಚೆಗೆ ಯುವಕ, ಯುವತಿಯರಲ್ಲಿ ರೀಲ್ಸ್‌ ಗೀಳು ಹೆಚ್ಚಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ವೀವ್ಸ್‌, ಲೈಕ್ಸ್‌ ಬರ್ಬೇಕು ಅಂತ ಏನೇನೋ ಸಾಹಸ ಮಾಡ್ತಾರೆ. ಈ ರೀಲ್ಸ್​ ಗೀಳು ಅದೆಷ್ಟೋ ಜನರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಇದೀಗ ಇಲ್ಲೊಬ್ಬಳು ರೀಲ್ಸ್ ಮಾಡಲು ಹೋಗಿ ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ  ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ಬಿಗ್‌ಬಾಸ್‌ ಸೀಸನ್‌ 12ರ ಸ್ಪರ್ಧಿಗಳ ಸಮಾಗಮ! – ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಮಸ್ತ್‌ ಡ್ಯಾನ್ಸ್, ಗಿಲ್ಲಿ ಭರ್ಜರಿ ಕಾಮಿಡಿ!

ಈ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ನಡೆದಿದೆ.  ಮೋಹಿನಿ (27) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ಮೋಹಿನಿ ನೇಣು ಹಾಕಿಕೊಳ್ಳುವ ದೃಶ್ಯವೊಂದನ್ನು ರೀಲ್ಸ್ ಮಾಡುತ್ತಿದ್ದಳು. ಸ್ಟೂಲ್‌ನಲ್ಲಿ ನಿಂತು ಕುತ್ತಿಗೆಗೆ ನೇಣು ಹಾಕಿಕೊಂಡ ಸಂದರ್ಭ ಸ್ಟೂಲ್‌ನಿಂದ ಆಯತಪ್ಪಿ ಕುಣಿಕೆ ಬಿಗಿಯಾಗಿ ಮೋಹಿನಿ ಮೃತಪಟ್ಟಿದ್ದಾಳೆ. ಮೋಹಿನಿಯ ನಾಲ್ಕು ವರ್ಷದ ಮಗಳು ಕೋಣೆಗೆ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿದ್ದ ತಾಯಿಯನ್ನು ನೋಡಿ ಬಾಲಕಿ ಸಹಾಯಕ್ಕಾಗಿ ಕಿರುಚಿದ್ದಾಳೆ. ಈ ವೇಳೆ ಬಾಲಕಿಯ ಕೂಗು ಕೇಳಿ ನೆರೆಹೊರೆಯವರು ಒಳಗೆ ಧಾವಿಸಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕುಣಿಕೆಯಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ರೀಲ್ಸ್ ಮಾಡುವ ವೇಳೆ ಆಕಸ್ಮಿಕವಾಗಿ ಕುಣಿಕೆ ಬಿಗಿದು ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Shwetha M