ಕರ್ನಾಟಕಕ್ಕೆ ದೇವದತ್ತ ಪಡಿಕ್ಕಲ್ – 721 ರನ್ಸ್.. ಸತತ 4ನೇ ಸಲ ಸೆಮೀಸ್
ವಿಜಯ್ ಹಜಾರೆಯಲ್ಲೂ ಕಪ್ ನಮ್ದೇ?

ಕರ್ನಾಟಕಕ್ಕೆ ದೇವದತ್ತ ಪಡಿಕ್ಕಲ್ – 721 ರನ್ಸ್.. ಸತತ 4ನೇ ಸಲ ಸೆಮೀಸ್ವಿಜಯ್ ಹಜಾರೆಯಲ್ಲೂ ಕಪ್ ನಮ್ದೇ?

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ವಿಜಯಯಾತ್ರೆ ಮುಂದುವರೆದಿದೆ. ಮೊದಲ ಕ್ವಾರ್ಟರ್ ಫೈನಲ್ ಫೈಟ್​ನಲ್ಲಿ ಮುಂಬೈ ವಿರುದ್ಧ ಗೆದ್ದು ಸೆಮೀಸ್​​ಗೆ ಲಗ್ಗೆ ಇಟ್ಟಿದೆ. ಕರ್ನಾಟಕ ಪರ ದೇವದತ್ ಪಡಿಕ್ಕಲ್ ಪವರ್ ಶೋ ಅಂತೂ ನೆಕ್ಸ್​ಟ್ ಲೆವೆಲ್​ನಲ್ಲಿದೆ. 2025-26 ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡದ ಪ್ರದರ್ಶನ ಅತ್ಯದ್ಭುತವಾಗಿದೆ. ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ದಾಖಲೆಯ 413 ರನ್​ಗಳನ್ನ ಚೇಸ್ ಮಾಡಿದ್ದ ಕರ್ನಾಟಕ ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಮಧ್ಯಪ್ರದೇಶ ವಿರುದ್ಧದ ಒಂದು ಪಂದ್ಯದಲ್ಲಿ ಸೋಲು ಕಂಡಿದ್ದು ಬಿಟ್ರೆ ಉಳಿದೆಲ್ಲಾ ಪಂದ್ಯಗಳಲ್ಲೂ ಗೆದ್ದು ಮುನ್ನುಗ್ತಿದೆ. ಈಗ ಮುಂಬೈ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಸಾಲಿಡ್ ಪ್ರದರ್ಶನ ನೀಡಿದ ಕರ್ನಾಟಕದ ಸೆಮೀಸ್​ಗೆ ಲಗ್ಗೆ ಇಟ್ಟಿದೆ.

ಇದನ್ನೂ ಓದಿ : ಸಿಂಹಿಣಿಯರ ಗರ್ಜನೆಗೆ ಶರಣಾದ UP – ಡಾಟ್ ಬಾಲ್ ನಲ್ಲೇ ಬೇಟೆಯಾಡಿದ ಬೆಲ್

ಸತತ 4ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ!

ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಸೋಮವಾರ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಪಂದ್ಯ ನಡೀತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಮುಂಬೈಗೆ ಕನ್ನಡದ ಬೌಲರ್ಸ್ ಸರಿಯಾಗೇ ಹೊಡೆತ ಕೊಟ್ರು. ಮಿಡಲ್ ಆರ್ಡರ್​ನಲ್ಲಿ ಶ್ಯಾಮ್ಸ್ ಮುಲಾನಿ 86 ರನ್ ಗಳಿಸಿದ್ದು ಬಿಟ್ರೆ ಉಳಿದವರ್ಯಾರು ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಅಂತಿಮವಾಗಿ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 254 ರನ್​ಗಳನ್ನ ಕಲೆ ಹಾಕಿದ್ರು.  ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ 3 ವಿಕೆಟ್, ವಿಧ್ವತ್ ಕಾವೇರಪ್ಪ ಮತ್ತು ಅಭಿಲಾಶ್ ಶೆಟ್ಟಿ ತಲಾ2 ವಿಕೆಟ್ ಪಡೆದ್ರು. ಇನ್ನು 255 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ 12 ರನ್ ಗಳಿಸಿ ಔಟಾದ್ರು. ಆ ನಣತ್ರ  ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಶತಕದ ಜೊತೆಯಾಟವಾಡಿದ್ರು. ದೇವದತ್ ಪಡಿಕ್ಕಲ್ 95 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿದರೆ, ಕರುಣ್ ನಾಯರ್ 80 ಎಸೆತಗಳಲ್ಲಿ 74 ರನ್ ಗಳಿಸಿ ಔಟಾಗದೆ ಉಳಿದರು. ಆದ್ರೆ 33ನೇ ಓವರ್ ಬ್ಯಾಟಿಂಗ್ ವೇಳೆ ಮಂದ ಬೆಳಕಿನ ಕಾರಣಕ್ಕೆ ಪಂದ್ಯವನ್ನ ಸ್ಥಗಿತಗೊಳಿಸಲಾಯ್ತು. ಅಷ್ಟ್ರಲ್ಲಾಗ್ಲೇ 187 ರನ್ ಗಳಿಸಿಯಾಗಿತ್ತು. ವಿಜೆಡಿ ನಿಯಮದ ಪ್ರಕಾರ ಆ ಹೊತ್ತಿಗೆ 133 ರನ್ ಗಳಿಸಿದ್ದರೂ ಸಾಕಿತ್ತು. ಹೀಗಾಗಿ ಮಾಯಾಂಕ್ ಅಗರ್ವಾಲ್ ಪಡೆಯನ್ನು 55 ರನ್‌ಗಳಿಂದ ವಿಜಯಿ ಎಂದು ಘೋಷಿಸಲಾಯಿತು. ಇನ್ನು ಕರ್ನಾಟಕ ತಂಡ ಜನವರಿ 15ರಂದು ನಡೆಯುವ ಮೊದದ ಸೆಮಿಫೈನಲ್ ನಲ್ಲಿ ಆಡಬೇಕಿದೆ. ಈ ಮೂಲಕ ಸತತ ನಾಲ್ಕು ಬಾರಿಗೆ ಕರ್ನಾಟಕ ತಂಡ ಸೆಮೀಸ್​ಗೆ ಲಗ್ಗೆ ಇಟ್ಟಂತಾಗಿದೆ. ಅದ್ರಲ್ಲೂ ಕರ್ನಾಟಕದ ಈ ವಿಕ್ಟರಿಯಲ್ಲಿ ದೇವದತ್ ಪಡಿಕ್ಕಲ್ ಪಾತ್ರ ತುಂಬಾನೇ ದೊಡ್ಡದಿದೆ.

ಪ್ರಸ್ತುತ ಟೂರ್ನಿಯಲ್ಲಿ 700+ ರನ್ಸ್ ಕಲೆ ಹಾಕಿದ ಪಡಿಕ್ಕಲ್!

ವಿಜಯ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ದೇವದತ್ತನಂತಿರೋ ಪಡಿಕ್ಕಲ್ 700+ ರನ್​ಗಳನ್ನ ಕಲೆ ಹಾಕಿದ್ದಾರೆ. ಇದಕ್ಕೂ ಮುನ್ನ ಐವರು ಬ್ಯಾಟರ್​ಗಳು ಮಾತ್ರವೇ ವಿಜಯ್ ಹಜಾರೆ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ  700 ರನ್‌ಗಳ ಗಡಿ ದಾಟಿದ್ದರು. ಅವರಲ್ಲಿ ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ನಾರಾಯಣ್ ಜಗದೀಶನ್ ಮತ್ತು ಕರುಣ್ ನಾಯರ್ ಸೇರಿದ್ದಾರೆ. ದೇವದತ್ ಪಡಿಕ್ಕಲ್ ಮಾತ್ರ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ಒಟ್ಟು ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ರಾಜಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಸ್ವಲ್ಪದರಲ್ಲೇ ಶತಕ ವಂಚಿತರಾಗಿದ್ದರು. ಸೋಮವಾರ ಮುಂಬೈ ವಿರುದ್ಧವೂ ಶತಕದ ಹಾದಿಯಲ್ಲಿ ಇದ್ದರು. ಆದ್ರೆ ಅಷ್ಟರಲ್ಲೇ ಮಂದ ಬೆಳಕಿನ ಕಾರಣಕ್ಕೆ ಪಂದ್ಯವನ್ನ ಸ್ಥಗಿತಗೊಳಿಸಲಾಗಿತ್ತು. ಇನ್ನು ಪ್ರಸಕ್ತ ಟೂರ್ನಿಯಲ್ಲಿ 8 ಇನ್ನಿಂಗ್ಸ್ ಗಳಿಂದ 103ರ ಆವರೇಜ್​ನಲ್ಲಿ 721 ರನ್​ಗಳನ್ನ ಕಲೆ ಹಾಕಿದ್ದಾರೆ. 2021-22ರ ಸೀಸನ್‌ನಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 737 ರನ್ ಗಳಿಸಿದ್ದರು, ಇದು ಆ ಸೀಸನ್​ ವೇಳೆಗೆ ಗರಿಷ್ಠ ಸ್ಕೋರ್ ದಾಖಲೆಯಾಗಿತ್ತು. ಈಗ 2025-26ರ ಸೀಸನ್‌ನಲ್ಲಿ ಮತ್ತೆ 721 ರನ್ ಗಳಿಸಿ ಎರಡು ಸೀಸನ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರನಾದರು. ಭಾರತದ ಯಾವುದೇ ಆಟಗಾರ ಈ ಸಾಧನೆ ಮಾಡಿಲ್ಲ.  ಹಾಗೇ ವಿಜಯ ಹಜಾರೆ ಟ್ರೋಫಿಯಲ್ಲಿ ಮೂರು ಸೀಸನ್‌ಗಳಲ್ಲಿ 600ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಸಾಧನೆಯನ್ನೂ ಬೇರೆ ಯಾವುದೇ ಬ್ಯಾಟರ್ ಮಾಡಿಲ್ಲ. 25 ವರ್ಷದ ದೇವದತ್ ಪಡಿಕ್ಕಲ್ ಲಿಸ್ಟ್​ ಕ್ರಿಕೆಟ್​​ನಲ್ಲಿ 41 ಪಂದ್ಯಗಳನ್ನ ಆಡಿದ್ದಾರೆ. ಹಾಗೇ 84ರ ಸರಾಸರಿಯಲ್ಲಿ 2792 ರನ್​ಗಳಿಸಿದ್ದಾರೆ. 13 ಶತಕ, 14 ಅರ್ಧಶತಕ ಸಿಡಿಸಿದ್ದಾರೆ. ಹೀಗಿದ್ರೂ ಇದುವರೆಗೂ ಟೀಂ ಇಂಡಿಯಾಗೆ ಏಕದಿನ ಮಾದರಿಗೆ ಸೆಲೆಕ್ಟ್ ಆಗಿಲ್ಲ ಅನ್ನೋದೇ ವಿಪರ್ಯಾಸ.

ಇನ್ನು ಈ ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕ 5 ಬಾರಿ ಚಾಂಪಿಯನ್ ಆಗಿದೆ. ತಮಿಳುನಾಡು ಕೂಡ 5 ಸಲ ಚಾಂಪಿಯನ್ಸ್ ಆಗಿದ್ದು ಮೋಸ್ಟ್ ಸಕ್ಸಸ್​​ಫುಲ್ ತಂಡಗಳಾಗಿವೆ. 2024-25ನೇ ಸಾಲಿನಲ್ಲಿ ಕರ್ನಾಟಕ ತಂಡ ವಿದರ್ಭ ತಂಡವನ್ನ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಸೋ ವಿಜಯ್ ಹಜಾರೆಯಲ್ಲಿ ಹಾಲಿ ಚಾಂಪಿಯನ್ಸ್ ಆಗಿರೋ ಕರ್ನಾಟಕ ಈ ಸಲವೂ ಕಪ್ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಹಾಗೇ 6 ಸಲ ಕಪ್ ಗೆದ್ದು ಇತಿಹಾಸ ಸೃಷ್ಟಿಸಲಿದೆ.

Shantha Kumari