ಗಂಟೆಗೆ 50,000 ಟಿಕೆಟ್ ಸೇಲ್ – ಕಾಂತಾರ ಚಾಪ್ಪರ್ 1 ರೆಕಾರ್ಡ್ ಬ್ರೇಕ್

ಗಂಟೆಗೆ 50,000 ಟಿಕೆಟ್ ಸೇಲ್ – ಕಾಂತಾರ ಚಾಪ್ಪರ್ 1 ರೆಕಾರ್ಡ್ ಬ್ರೇಕ್

ಕಾಂತಾರ.. ಕಾಂತಾರ.. ಕಾಂತಾರ. ಎಲ್ಲೆಲ್ಲೂ ಕಾಂತಾರ ಫೀವರ್ ಶುರುವಾಗಿದೆ. ಪ್ ಎಲ್ಲಾ ಕಡೆ ಚಿತ್ರದ ಕಲೆಕ್ಷನ್ ಜೋರಾಗಿದೆ. ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರ, ತೆಲಂಗಾಂಣದಲ್ಲಿ ಕೂಡ ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.ಮೌತ್ ಟಾಕ್‌ ಮೂಲಕ ‘ಕಾಂತಾರ’-1 ಕ್ರೇಜ್ ಹೆಚ್ಚುತ್ತಲೇ ಇದೆ. ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ. ಕಲೆಕ್ಷನ್ ಗ್ಯಾರಂಟಿ ಎನ್ನುವ ಚರ್ಚೆ ಶುರುವಾಗಿದೆ. ನೋಡಿದವರೆಲ್ಲಾ ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದು ಹೇಳುತ್ತಿದ್ದಾರೆ. ಟ್ರೈಲರ್‌ನಲ್ಲಿ ಹೆಚ್ಚಿನ ವಿಷಯಗಳನ್ನು ಬಿಟ್ಟುಕೊಡದ ರಿಷಬ್ ಶೆಟ್ಟಿ ಎಲ್ಲವನ್ನು ತೆರೆಮೇಲೆ ತಂದು ಸರ್‌ಪ್ರೈಸ್ ಮಾಡಿದ್ದಾರೆ. ಕೊನೆ ಅರ್ಧ ಗಂಟೆ ಪ್ರೇಕ್ಷಕರನ್ನು ಭಕ್ತಿಪರವಶರನ್ನಾಗಿ ಮಾಡಿ ಕಮಾಲ್ ಮಾಡಿದ್ದಾರೆ. ಮಕ್ಕಳಿಗೆ ಹಾಗೂ ಮಹಿಳಾ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಹಾಗಾಗಿ ದಸರಾ ಹಬ್ಬದ ರಜೆ ಚಿತ್ರದ ಗಳಿಕೆಗೆ ವರವಾಗಲಿದೆ.

ಪ್ರೀಮಿಯರ್ ಶೋಗಳು ಹಿಟ್ ಆಗುತ್ತಿದ್ದಂತೆ ಒಮ್ಮೆಲೆ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಮುಂದಾಗಿದ್ದಾರೆ. ಪರಿಣಾಮ ಗಂಟೆಗೆ 50 ,00ಟಿಕೆಟ್ ಬುಕ್ ಆಗಿ ದಾಖಲೆ ಬರೆದಿದೆ. ಕನ್ನಡ ಚಿತ್ರವೊಂದಕ್ಕೆ ಇಂತಹ ರೆಸ್ಪಾನ್ಸ್’ ಇದೇ ಮೊದಲು. ಯಶ್ ನಟನೆಯ ‘ಕೆಜಿಎಫ್’- 2 ಚಿತ್ರದ ದಾಖಲೆಯನ್ನು ಕೆಲವು ಕಡೆ ‘ಕಾಂತಾರ- 1’ ಹಿಂದಿಕ್ಕಿದೆ. ಬೆಂಗಳೂರಿನಲ್ಲಿ ರೆಸ್ಪಾನ್ಸ್ ಅಬ್ಬಬ್ಬಾ ಎನ್ನುವಂತಿದೆ. ಪ್ರೀಮಿಯರ್ ಶೋಗಳ ಬಳಿಕ ಕೂಡ ಬೆಂಗಳೂರಿನಲ್ಲಿ ಸಾವಿರಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿದೆ. ಬೆಳಗ್ಗೆ 9 ಗಂಟೆಗೆ ಮುನ್ನ  ಬೆಂಗಳೂರಿನಲ್ಲಿ 232 ಶೋಗಳಲ್ಲಿ ‘ಕಾಂತಾರ- 1’ ಸಿನಿಮಾ ಪ್ರದರ್ಶನ ಕಂಡಿದೆ. ಇದಕ್ಕೂ ಮುನ್ನ ‘ಕೆಜಿಎಫ್- 2’ ಸಿನಿಮಾ 202 ಶೋಗಳಲ್ಲಿ ಪ್ರದರ್ಶನ ಕಂಡಿದ್ದು ದಾಖಲೆ ಆಗಿತ್ತು.

Kishor KV