ಸಾಧನೆಗಳ ಸರದಾರ.. ದಾಖಲೆಗಳ ವೀರ ವಿರಾಟ್ – ಕ್ರಿಕೆಟ್ ದೇವರ ರೆಕಾರ್ಡ್ ಮುರಿದ ಕಿಂಗ್ ಕೊಹ್ಲಿ ಈಗ ಏಕಾಂಗಿ!

ಸಾಧನೆಗಳ ಸರದಾರ.. ದಾಖಲೆಗಳ ವೀರ ವಿರಾಟ್ – ಕ್ರಿಕೆಟ್ ದೇವರ ರೆಕಾರ್ಡ್ ಮುರಿದ ಕಿಂಗ್ ಕೊಹ್ಲಿ ಈಗ ಏಕಾಂಗಿ!

ಸಾಧನೆಗಳ ಸರದಾರ. ದಾಖಲೆಗಳ ವೀರ. ಅನುಷ್ಕಾ ಶರ್ಮಾಳ ಮುದ್ದಿನ ಪತಿ ವಿರಾಟ್‌ ಕೊಹ್ಲಿ ಈಗ ಏಕಾಂಗಿ. ಅವರ ಸಾಧನೆಗಳು ಅವರ ದಾಖಲೆಗಳು ಈಗ ಕಿಂಗ್‌ ಕೊಹ್ಲಿಯನ್ನು ಏಕಾಂಗಿಯಾಗಿಸಿವೆ. ಅಷ್ಟೇ ಅಲ್ಲದೆ ಟೀಂ ಇಂಡಿಯಾ 2023ರ ವಿಶ್ವಕಪ್‌ ಗೆದ್ದರೆ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ : ಈ ಸಲ ಕಪ್ ನಮ್ದೆ ಎಂದ ಸೂಪರ್ ಸ್ಟಾರ್ – ಫೈನಲ್ ನೋಡಲು ಬರ್ತಾರಂತೆ ಮೋದಿ – ಚಮತ್ಕಾರ ತೋರಿಸಲು ಸೂರ್ಯಕಿರಣ್ ಟೀಮ್ ರೆಡಿ

ಈಗ ಕ್ರಿಕೆಟ್ ಜಗತ್ತಿನ ಚಿತ್ತ ವಿಶ್ವಕಪ್ ಫೈನಲ್ ಪಂದ್ಯದ ಮೇಲೆ ನೆಟ್ಟಿದೆ. ರನ್ ಮಷಿನ್ ಕಿಂಗ್ ಕೊಹ್ಲಿಯಂತೂ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಕ್ರಿಕೆಟ್ ಜಗತ್ತಿನ ಹೀರೋ ಆಗಿ ಮೆರೆಯುತ್ತಿದ್ದಾರೆ. ಆದ್ರೆ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ನಿಜಕ್ಕೂ ಈಗ ಏಕಾಂಗಿಯಾಗಿಬಿಟ್ಟಿದ್ದಾರೆ.. 2023ರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ವಿರಾಟ್ ಹಲವು ದಾಖಲೆಗಳನ್ನ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚ್ ನಲ್ಲಿ ಶತಕ ಬಾರಿಸುವ ಮೂಲಕ ಸಚಿನ್ ಹೆಸ್ರಲ್ಲಿದ್ದ ರೆಕಾರ್ಡ್ ಬ್ರೇಕ್ ಮಾಡಿದ್ದಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕ ಭಾರಿಸಿದ್ರು. ಇದಾದ ಮೇಲೆಯೇ ವಿರಾಟ್‌ ಏಕಾಂಗಿಯಾಗಿರುವುದು. ಸಾಧನೆಯ ಹಿಮಾಲಯ ಶಿಖರ ಏರಿದ ಮೇಲೆ ಇನ್ನೂ ಮೇಲೆ ಮೇಲೆ ಹೆಜ್ಜೆ ಹಾಕೋದಿಕ್ಕೆ ಜಾಗವೇ ಇಲ್ಲದಾಗಿದೆ. ಇನ್ನೇನಿದ್ದರೂ ಕೊಹ್ಲಿ ತಮ್ಮ ದಾಖಲೆಯನ್ನು ತಾವೇ ಮುರಿಯಬೇಕು. ತಮ್ಮ ಹೆಸರಿನಲ್ಲಿರುವ ದಾಖಲೆಯನ್ನು ಅಳಿಸಿ ತಾವೇ ಹೊಸ ದಾಖಲೆ ಬರೆಯಬೇಕು. ಏಕದಿನ ಕ್ರಿಕೆಟ್‌ನಲ್ಲಿ ಇನ್ನು ಮುಂದೆ ಕೊಹ್ಲಿ ಸಿಡಿಸುವ ಪ್ರತಿಯೊಂದು ಶತಕವೂ ಹೊಸ ದಾಖಲೆಯಾಗಲಿದೆ. 49 ಶತಕ ಬಾರಿಸಿದ್ದ ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ನಂತರದ ಸ್ಥಾನದಲ್ಲಿರುವ ರೋಹಿತ್‌ ಶರ್ಮಾ 31 ಸೆಂಚುರಿ ಬಾರಿಸಿದ್ದು ಕೊಹ್ಲಿಯಿಂದ ಬಹಳ ದೂರದಲ್ಲಿದ್ದಾರೆ. ಹೀಗಾಗಿಯೇ ಹೇಳಿದ್ದು ಕೊಹ್ಲಿ ಈಗ ದಾಖಲೆಯ ವಿಚಾರದಲ್ಲಿ ಏಕಾಂಗಿ. ಅಷ್ಟೇ ಅಲ್ಲ ಸದ್ಯದ ಭವಿಷ್ಯದಲ್ಲಿ ಯಾರೂ ಅಳಿಸಲು ಸಾಧ್ಯವಾಗದಷ್ಟು ಎತ್ತರಕ್ಕೆ ಕೊಹ್ಲಿ ಏರಿ ನಿಲ್ಲಲಿದ್ದಾರೆ. ನಿಜಕ್ಕೂ ಹಿಮಾಲಯ ಶಿಖರದ ತುತ್ತ ತುದಿಯನ್ನು ತಲುಪಿರುವ ಕೊಹ್ಲಿಯ ವಿರಾಟ್‌ ರೂಪ ಏಕದಿನ ಕ್ರಿಕೆಟ್‌ನಲ್ಲಿ ದರ್ಶನವಾಗಿದೆ.. ಅಷ್ಟೇ ಅಲ್ಲ ಟೀಂ ಇಂಡಿಯಾ ಈ ಬಾರಿ ವಿಶ್ವಕಪ್‌ ಗೆದ್ದರೆ, ಎರಡು ವಿಶ್ವಕಪ್‌ಗಳನ್ನು ಗೆದ್ದ ಪ್ಲೇಯಿಂಗ್‌ 11ನಲ್ಲಿದ್ದ ಏಕೈಕ ಭಾರತೀಯ ಆಟಗಾರ ಎಂಬ ದಾಖಲೆ ಕೂಡ ವಿರಾಟ್‌ ಪಾಲಾಗಲಿದೆ. ಬಹುತೇಕ ತಮ್ಮ ಕಡೆಯ ವಿಶ್ವಕಪ್‌ ಆಡುತ್ತಿರುವ ವಿರಾಟ್‌ ನಿಜಕ್ಕೂ ಮುರಿಯಲಾಗದ ದಾಖಲೆಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಕ್ರಿಕೆಟ್‌ ದಂತಕಥೆ ವಿವಿಯನ್‌ ರಿಚರ್ಡ್ಸ್‌, ಕೊಹ್ಲಿ ನಿಜಕ್ಕೂ ಅನ್ಯಗ್ರಹದಿಂದ ಬಂದಿರುವ ಆಟಗಾರನಂತೆ ಕಾಣ್ತಿದ್ದಾರೆ ಎಂದು ಹೊಗಳಿರೋದು ಅತಿಶಯೋಕ್ತಿಯಲ್ಲ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ದೇವರ ಮಗನಾಗಿರುವ ವಿರಾಟ್ ಕೊಹ್ಲಿ ಫೈನಲ್ ಮ್ಯಾಚ್ ನಲ್ಲೂ ಮತ್ತೊಂದು ಶತಕ ಬಾರಿಸಿ ಭಾರತದ ಮುಡಿಗೆ ಮತ್ತೊಂದು ವಿಶ್ವಕಪ್‌ ಗೆದ್ದ ಕಿರೀಟ ತೊಡಿಸಲಿ ಎಂದು ಇಡೀ ಭಾರತವೇ ಪ್ರಾರ್ಥಿಸುತ್ತಿದೆ.

Shantha Kumari