ಬ್ಯಾಚುಲರ್ಸ್ ಅಡುಗೆ ಮಾಡುವುದ್ದಕ್ಕೆ ಕಷ್ಟ ಪಡ್ತಾ ಇದ್ದೀರಾ? – ಈ ಸಿಂಪಲ್ ಸೌತೆಕಾಯಿ ಮಜ್ಜಿಗೆ ಹುಳಿ ಟ್ರೈ ಮಾಡಿ

ಸಾಕಷ್ಟು ಜನರಿಗೆ ಅಡುಗೆ ಮಾಡುವುದು ದೊಡ್ಡ ಯುದ್ಧ ಮಾಡಿದಂತೆ. ಅದರಲ್ಲೂ ಬ್ಯಾಚುಲರ್ಸ್ ಅಡುಗೆ ಮಾಡುವುದ್ದಕ್ಕೆ ಹರಸಾಹಸ ಪಡಬೇಕಾಗುತ್ತೆ. ಹೀಗೆ ಅಡುಗೆ ಮಾಡುವುದ್ದಕ್ಕೆ ಕಷ್ಟ ಪಡುವವರಿಗೆ ಒಂದು ಸಿಂಪಲ್ ರೆಸಿಪಿ ಇದೆ. ಈ ರೆಸಿಪಿಯನ್ನ ನೀವು ಫಾಟಫಟ್ ಅಂತ ಮಾಡಬಹುದು. ಅದುವೆ ಸೌತೆಕಾಯಿ ಮಜ್ಜಿಗೆ ಹುಳಿ. ಹಾಗಿದ್ರೆ ಸೌತೆಕಾಯಿ ಮಜ್ಜಿಗೆ ಹುಳಿ ಮಾಡುವುದು ಹೇಗೆ ಅನ್ನೋದ್ದನ್ನ ನೋಡೋಣ ಬನ್ನಿ..
ಬೇಕಾಗುವ ಪದಾರ್ಥಗಳು…
- ಸೌತೆಕಾಯಿ- 2
- ಮೊಸರು – 1 ಬಟ್ಟಲು
- ಎಣ್ಣೆ – ಸ್ವಲ್ಪ
- ಒಣ ಮೆಣಸಿನಕಾಯಿ- 2
- ಜೀರಿಗೆ- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ತೆಂಗಿನಕಾಯಿ ತುರಿ- 1/4 ಕಪ್
- ಬೆಳ್ಳುಳ್ಳಿ- ಸ್ವಲ್ಪ
- ಹಸಿರು ಮೆಣಸಿನಕಾಯಿ-2
- ಸಾಸಿವೆ – ಸ್ವಲ್ಪ
- ಈರುಳ್ಳಿ- 1 ಚಿಕ್ಕದ್ದು
- ಕರಿಬೇವು-ಸ್ವಲ್ಪ
- ಅರಿಶಿನ ಪುಡಿ-ಸ್ವಲ್ಪ
ಮಾಡುವ ವಿಧಾನ…
- ಮೊದಲು ಒಂದು ಮಿಕ್ಸಿ ಜಾರ್ಗೆ ತೆಂಗಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಹಸಿ ಮೆಣಸಿಕಾಯಿ, ಒಂದು ಚಿಕ್ಕ ಈರುಳ್ಳಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
- ಈಗ ಒಂದು ಬೌಲ್ಗೆ 2 ಕಪ್ ಮೊಸರು ಹಾಕಿ ಸ್ವಲ್ಪ ನೀರು ಸಹ ಹಾಕಿಕೊಂಡು ಅದನ್ನು ಸ್ವಲ್ಪ ತೆಳುವಾಗುವಂತೆ ಮಿಕ್ಸ್ ಮಾಡುತ್ತಾ ತೆಳು ಮಾಡಿ.
- ಈಗ ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ.
- ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಒಣಗಿದ ಮೆಣಸಿನಕಾಯಿ, ಈರುಳ್ಳಿ ಹಾಕಿಕೊಂಡು ಫ್ರೈ ಆಗಲು ಬಿಡಿ. 2 ನಿಮಿಷ ಬಿಟ್ಟ ಬಳಿಕ ಇದಕ್ಕೆ ಕರಿಬೇವು, ಅರಶಿಣ ಪುಡಿ, ಉಪ್ಪು ಸಹ ಹಾಕಿಕೊಂಡು ಫ್ರೈ ಮಾಡಿ.
- ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಸೌತೆಕಾಯಿಯನ್ನು ಇದಕ್ಕೆ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮೊದಲು ರುಬ್ಬಿಕೊಂಡಿದ್ದ ಮಸಾಲೆಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಅರ್ಧ ಕಪ್ ನೀರು ಹಾಕಿ ಮಿಕ್ಸ್ ಮಾಡಿ.
- 1 ನಿಮಿಷ ಹಾಗೆಯೆ ಬಿಟ್ಟು ಅನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಮತ್ತೆ ಉಳಿದ ಮೊಸರನ್ನು ಇದಕ್ಕೆ ಹಾಕಿಕೊಳ್ಳಿ. ಇದೀಗ ರುಚಿಕರವಾದ ಸೌತೆಕಾಯಿ ಮಜ್ಜಿಗೆ ಹುಳಿ ಸವಿಯಲು ಸಿದ್ಧ.

ನೋಡಿರಿ

