ರೆಬಲ್ ಸ್ಟಾರ್ ಅಂಬಿಗೂ ಕರ್ನಾಟಕ ರತ್ನ ನೀಡುವಂತೆ ಆಗ್ರಹ – ಡಿಸಿಎಂ ಡಿಕೆಶಿ ಬಳಿ ಮನವಿ ಮಾಡಿದ ನಟಿ ತಾರಾ

ಇತ್ತಿಚೆಗೆ ಕರ್ನಾಟಕ ಸರ್ಕಾರ ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಸರೋಜಾ ದೇವಿಗೆ ಮರಣೋತ್ತರ ಕರ್ನಾಟಕ ರತ್ನ ಗೌರವ ಘೋಷಣೆ ಮಾಡಿದೆ. ಬೆನ್ನಲ್ಲೇ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ನೀಡುವಂತೆ ಕೂಗು ಕೇಳಿ ಬಂದಿದೆ. ಇದೀಗ ನಟ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ಪುರಸ್ಕಾರ ನೀಡುವಂತೆ ಅಭಿಮಾನಿಗಳು ಹಾಗೂ ಹಿರಿಯ ನಟಿ ತಾರಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ನಟ ದರ್ಶನ್‌ಗೆ ನಕರ ದರ್ಶನ – ಕೋರ್ಟ್ ಆದೇಶಿಸಿದ್ರೂ ದಾಸನಿಗೆ ಸಿಗ್ತಿಲ್ಲ ಮೂಲ ಸೌರ್ಕಯ!
ನಟ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ಹಾಗೂ ರಾಜಕೀಯದಲ್ಲಿ ಅಜಾತಶತ್ರುವಾಗಿ ಬೆಳೆದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಂಬರೀಶ್ ಅವರ ಸಿನಿಮಾಗಳನ್ನ ಈಗಲೂ ಸಿನಿ ಪ್ರೇಮಿಗಳು ಇಷ್ಟಪಟ್ಟು ನೋಡುತ್ತಾರೆ. ಇದೀಗ ಅವರಿಗೂ ಕರ್ನಾಟಕ ರತ್ನ ಪುರಸ್ಕಾರ ನೀಡುವಂತೆ ಅಭಿಮಾನಿಗಳು ಹಾಗೂ ಹಿರಿಯ ನಟಿ ತಾರಾ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ತಾರಾ ಅನುರಾಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾಗಿ ಮನವಿ ಪತ್ರ ಕೊಟ್ಟಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದಲ್ಲದೇ ಕಲಿಯುಗದ ಕರ್ಣ ಎಂದು ಕರೆಸಿಕೊಳ್ಳುವ ಜನಮೆಚ್ಚಿದ ಕಲಾವಿದ ಅಂಬರೀಶ್. ಚಿತ್ರರಂಗಕ್ಕೆ ಹಿರಿಯಣ್ಣನಂತಿದ್ದರು, ರಾಜಕೀಯದಲ್ಲಿದ್ದರೂ ಪಕ್ಷಗಳ ಬೇದಭಾವವಿಲ್ಲದೆ ಸರ್ವರಿಗೂ ಇಷ್ಟವಾಗುವ ಸಜ್ಜನ ರಾಜಕಾರಣಿಯಾಗಿದ್ದರು. ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿರುವ ಈ ಕಲಾವಿದನಿಗೆ ತಕ್ಕ ಗೌರವ ಕೊಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೇಳಿಕೊಂಡಿದ್ದರು. ಇತ್ತೀಚೆಗೆ ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾದೇವಿಯವರಿಗೆ ಸರ್ಕಾರ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಅಭಿಮಾನಿಗಳು ಹಾಗೂ ಚಿತ್ರರಂಗದ ಪರವಾಗಿ ಹಿರಿಯ ನಟಿ ತಾರಾ ಅನುರಾಧ ಕರ್ನಾಟಕ ರತ್ನ ನೀಡುವಂತೆ, ಡಿಸಿಎಂ ಬಳಿ ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಯಾವ ನಿರ್ಧಾರಕ್ಕೆ ಬರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ನೋಡಿರಿ

