65 ಎಕರೆಯಲ್ಲಿ ಜಟಾಯುವಿನ ಬೃಹತ್ ವಿಗ್ರಹ – ಕೇರಳದಲ್ಲಿದೆ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಪಕ್ಷಿ ಪ್ರತಿಮೆ

65 ಎಕರೆಯಲ್ಲಿ ಜಟಾಯುವಿನ ಬೃಹತ್ ವಿಗ್ರಹ – ಕೇರಳದಲ್ಲಿದೆ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಪಕ್ಷಿ ಪ್ರತಿಮೆ

ರಾಜಕೀಯ ನಾಯಕರ ಪ್ರತಿಮೆ ಕಂಡಿದ್ದೇವೆ. ಇತಿಹಾಸ ಪ್ರಸಿದ್ಧ ಪುರುಷದ ಪುತ್ಥಳಿಗಳನ್ನ ನೋಡಿದ್ದೇವೆ. ಅಷ್ಟೇ ಯಾಕೆ ಸಿನಿಮಾ ನಟರ ವಿಗ್ರಹಗಳನ್ನೂ ಕೇಳಿದ್ದೇವೆ. ಆದರೆ ಕೇರಳದಲ್ಲಿರುವ ಈ ಪ್ರತಿಮೆ ಎಲ್ಲಕ್ಕಿಂತ ವಿಭಿನ್ನ ಮತ್ತು ವಿಶಿಷ್ಠ. ಯಾಕಂದ್ರೆ ಇಲ್ಲಿರುವುದು ಜಟಾಯು ಪಕ್ಷಿವಿನ ಬೃಹತ್ ಪ್ರತಿಮೆ.

ಕೇರಳದಲ್ಲಿರುವ ಜಟಾಯು ಅರ್ಥ್ ಕೇಂದ್ರದಲ್ಲಿ ಜಟಾಯುವಿನ ಬೃಹತ್ ವಿಗ್ರಹವಿದೆ. ಈ ಪ್ರತಿಮೆಯು ವಿಶ್ವದ ಯಾವುದೇ ಪಕ್ಷಿ ಪ್ರತಿಮೆಗಿಂತಲೂ ದೊಡ್ಡದಾಗಿದೆ. ಇದನ್ನು ನೋಡಲು ದೇಶ ಮತ್ತು ಪ್ರಪಂಚದ ಬೇರೆ ಬೇರೆ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಜಟಾಯುವಿನ ಈ ಶಿಲ್ಪ ಕೇರಳದ ಕೊಲ್ಲಂನಲ್ಲಿದೆ. ರಾಮಾಯಣದ ಜಟಾಯು ಪಕ್ಷಿಯ ಪರಿಕಲ್ಪನೆಯ ಮೇಲೆ ಈ ಕೇಂದ್ರವನ್ನು ನಿರ್ಮಿಸಲಾಗಿದೆ. ಈ ಬೃಹತ್ ವಿಗ್ರಹವು ಚಡಯಮಂಗಲದಲ್ಲಿದೆ. ವಿಗ್ರಹವು ನಾಲ್ಕು ಬೆಟ್ಟಗಳಲ್ಲಿ ಹರಡಿದ್ದು, ಇದನ್ನು ಜಟಾಯು ಭೂಮಿಯ ಕೇಂದ್ರ ಎಂದು ಕರೆಯಲಾಗುತ್ತದೆ. ಇದನ್ನು ಜಟಾಯು ರಾಕ್ ಅಥವಾ ಜಟಾಯು ನೇಚರ್ ಪಾರ್ಕ್ ಎಂದೂ ಕರೆಯುತ್ತಾರೆ.

ಇದನ್ನೂ ಓದಿ : ಎಮ್ಮೆ ಮೇಲೆ ಬಂದ ಶ್ವಾನ ಮಹಾರಾಜರಿಗೆ ದಾರಿ ಬಿಡಿ..! – ಎಮ್ಮೆಗೊಂದು ಕಾಲ.. ನಾಯಿಗೊಂದು ಕಾಲ ಬಂದೇ ಬಿಡ್ತು..!

200 ಅಡಿ ಉದ್ದ ಮತ್ತು 150 ಅಡಿ ಅಗಲದ 65 ಎಕರೆ ಪ್ರದೇಶದಲ್ಲಿ ವಿಗ್ರಹವಿದೆ. ಜಟಾಯು ಅರ್ಥ್ ಸೆಂಟರ್ ವಿಶ್ವದಲ್ಲೇ ಅತಿ ದೊಡ್ಡ ಪಕ್ಷಿ ಶಿಲ್ಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೇಂದ್ರವು 65 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಜಟಾಯುವಿನ ವಿಗ್ರಹವನ್ನು ನಾಲ್ಕು ಬೆಟ್ಟಗಳಲ್ಲಿ ಮಾಡಲಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 350 ಮೀಟರ್ ಎತ್ತರದಲ್ಲಿದೆ. ಹಾಗೇ ಜಟಾಯುವಿನ ವಿಗ್ರಹವು 200 ಅಡಿ ಉದ್ದ, 150 ಅಡಿ ಅಗಲ ಮತ್ತು 70 ಅಡಿ ಎತ್ತರವಿದೆ. ಈ ಸ್ಥಳವನ್ನು ನೋಡಲು ಪ್ರವಾಸಿಗರು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜಟಾಯು ರಾವಣನೊಂದಿಗೆ ಹೋರಾಡಿದನು ಮತ್ತು ಅವನ ರೆಕ್ಕೆಗಳನ್ನು ಕತ್ತರಿಸಲಾಯಿತು. ಜಟಾಯುವಿನ ರೆಕ್ಕೆಗಳು ಬಿದ್ದ ಸ್ಥಳವನ್ನು ಜಟಾಯುಪರ್ ಎಂದು ಕರೆಯಲಾಗುತ್ತದೆ. ಈ ಸ್ಥಳವು ಸಾಹಸ ಪ್ರಿಯರಿಗೆ ಅತ್ಯುತ್ತಮವಾಗಿದೆ.

ನೀವು ಸಾಹಸ ಪ್ರಿಯರಾಗಿದ್ದರೆ ಖಂಡಿತ ಒಮ್ಮೆ ಇಲ್ಲಿಗೆ ಹೋಗಿ. ಶಿಲ್ಪದ ಒಳಗೆ ವಸ್ತುಸಂಗ್ರಹಾಲಯ ಮತ್ತು 6D ರಂಗಮಂದಿರವಿದೆ. ಅಲ್ಲಿ ನೀವು ಜಟಾಯುವಿಗೆ ಸಂಬಂಧಿಸಿದ ಚಿತ್ರಗಳನ್ನು ವೀಕ್ಷಿಸಬಹುದು. ನೀವು ಇಲ್ಲಿಂದ ಹೆಲಿ-ಟ್ಯಾಕ್ಸಿ ಅನುಭವವನ್ನೂ ಪಡೆಯಬಹುದು. ಇಲ್ಲಿ ಪ್ರವಾಸಿಗರು ಬರ್ಮಾ ಸೇತುವೆ, ಕಮಾಂಡೋ ನೆಟ್, ಲಾಗ್ ವಾಕ್, ವರ್ಟಿಕಲ್ ಲ್ಯಾಡರ್ ಮತ್ತು ಚಿಮಣಿ ಕ್ಲೈಂಬಿಂಗ್ ಚಟುವಟಿಕೆಯನ್ನು ಆನಂದಿಸಬಹುದು. ಹಾಗೇ  ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್ ಆನಂದಿಸಬಹುದು. ಈ ಕೇಂದ್ರವು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

ಜಟಾಯು ಮಹಿಳೆಯ ಗೌರವವನ್ನು ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟ ಮೊದಲ ಪೌರಾಣಿಕ ಪಕ್ಷಿ. ಇದೇ ಕಾರಣಕ್ಕೆ ಜಟಾಯು ಅರ್ಥ್ ಕೇಂದ್ರದ ಭದ್ರತಾ ಸಿಬ್ಬಂದಿಯಲ್ಲಿ ಮಹಿಳೆಯರನ್ನು ಮಾತ್ರ ಇರಿಸಲಾಗಿದೆ. ಈ ಕೇಂದ್ರವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಲ್ಪಟ್ಟಿದೆ. ಇಲ್ಲಿ ಪ್ರವಾಸಿಗರು ಕೇಬಲ್ ಕಾರ್ ಮೂಲಕ ಬೆಟ್ಟದ ತುದಿಯನ್ನು ತಲುಪಬಹುದು. ಇದನ್ನು ಜಟಾಯು ಬಂಡೆ ಎಂದೂ ಕರೆಯುತ್ತಾರೆ. ಪ್ರವಾಸಿಗರು ಈ ಕೇಂದ್ರದಿಂದ ಪ್ರಕೃತಿಯ ವಿಹಂಗಮ ನೋಟಗಳನ್ನು ನೋಡಬಹುದು.

suddiyaana