ಡಬಲ್ ಮೀನಿಂಗ್ ಇದ್ರೆ ಜೋಕಾ? – ಕಾಮಿಡಿ ಹೆಸರಲ್ಲಿ ** ಡೈಲಾಗ್!
ರಿಯಾಲಿಟಿ ಶೋ‌ ಇರೋ‍ದು ಇದಕ್ಕಾ?

ಡಬಲ್ ಮೀನಿಂಗ್ ಇದ್ರೆ ಜೋಕಾ? – ಕಾಮಿಡಿ ಹೆಸರಲ್ಲಿ ** ಡೈಲಾಗ್!ರಿಯಾಲಿಟಿ ಶೋ‌ ಇರೋ‍ದು ಇದಕ್ಕಾ?

ಇತ್ತೀಚೆಗೆ ಕಿರುತೆರೆ ವಾಹಿನಿಗಳಲ್ಲಿ ಹೊಸ ಹೊಸ ಬಗೆಯ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ಶನಿವಾರ, ಭಾನುವಾರ ಬಂದರೆ ಸಾಕು ಪ್ರೇಕ್ಷಕರು ರಿಯಾಲಿಟಿ ಶೋ ನೋಡಿ ವಾರದ ಟೆನ್ಷನ್ ಕಡಿಮೆ ಮಾಡಿಕೊಳ್ಳುತ್ತಾರೆ. ಆದ್ರೀಗ ವೀಕ್ಷಕರು ರಿಯಾಲಿಟಿ ಶೋಗಳ ವಿರುದ್ಧ ಅಸಮಧಾನ ಹೊರ ಹಾಕ್ತಿದ್ದಾರೆ..  ರಿಯಾಲಿಟಿ ಶೋ ಗಳಲ್ಲಿ ಕಾಮಿಡಿ ಹೆಸರಲ್ಲಿ, ಡಬಲ್‌ ಮೀನಿಂಗ್‌ ಡೈಲಾಗ್ಸ್‌.. ಅಹಸ್ಯಕರವಾದ ಸನ್ನಿವೇಶ ಕ್ರಿಯೇಟ್‌ ಮಾಡೋದೇ ಮನರಂಜನೆಯಾ ಅಂತಾ ಕೇಳ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಯಾವ ಶೋ ವಿರುದ್ಧ ವೀಕ್ಷಕರು ಅಸಮಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: RCB ರೆಕಾರ್ಡ್ ಬ್ರೇಕ್ ಚೇಸಿಂಗ್ – ಟಗರು ಪುಟ್ಟಿ ಟೂರ್ನಿಯಿಂದಲೇ ಔಟ್?

ಕಲರ್ಸ್‌ ಕನ್ನಡ ವಾಹಿನಿ ಯಾವಾಗ್ಲೂ ವೀಕ್ಷಕರಿಗೆ ಮನರಂಜನೆ ಕೊಡೋದ್ರಲ್ಲಿ ಎಕ್ಸಪರ್ಟ್..‌ ಸದಾ ಹೊಸ ಹೊಸ ಸೀರಿಯಲ್‌, ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನ ರಂಜಿಸ್ತಿದೆ. ಇತ್ತೀಚೆಗೆ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಹಾಗೂ ಮಜಾ ಟಾಕೀಸ್‌ ಆರಂಭಗೊಂಡಿದೆ. ಇವೆರಡು ಶೋಗಳು ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು.. ಇನ್ನುಮುಂದೆ ಮಜಾ ಫಿಕ್ಸ್‌ ಅಂತಾ ಹೇಳ್ತಿದ್ರು.. ಆದ್ರೀಗ ವೀಕ್ಷಕರ ನಿರೀಕ್ಷೆ ಹುಸಿಯಾಗಿದೆ. ಇದೀಗ ಈ ಶೋನಲ್ಲಿ ಮನರಂಜನೆಗಿಂತ ಬರೀ ಡಬಲ್‌ ಮೀನಿಂಗ್‌ ಅಸಹ್ಯ ಅನ್ನಿಸೋ ಸನ್ನಿವೇಗಳೇ ಇವೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.

ಹೌದು, ಮಜಾಭಾರತದ ಕಳೆದ ಸಂಚಿಕೆಯಲ್ಲಿ ಕುರಿ ಪ್ರತಾಪ್‌ ಹಾಗೂ ತುಕಾಲಿ ಸಂತುವನ್ನ ಮಿಮಿಕ್ರಿ ಆರ್ಟಿಸ್ಟ್‌ ಅಂತಾ ಪರಿಚಯ ಮಾಡಿಕೊಳ್ಳೋ ವೇಳೆ ಸನ್ನೆ ಮೂಲಕ ಪರಿಚಯ ಮಾಡಿಸಿದ್ರು.. ಅದಾದ್ಮೇಲೆ ಮದುವೆ ಆದ್ರೆ ಮಾತ್ರ ಆಸ್ತಿ ಅನ್ನೋ ಸನ್ನಿವೇಶವೊಂದನ್ನ ಕ್ರಿಯೇಟ್‌ ಮಾಡಲಾಗಿತ್ತು. ಆಗ ಕುರಿ ಶ್ರೀ ಆರ್‌ ಯೂ ಫ್ರೀ.. ಪಿಂಕಿ ಇವತ್ತು ಒಂದಿನ ನನ್ನ ಜೊತೆ ಬರ್ತಿಯಾ, ಬೇಕಾದ್ರೆ ನಿನ್ಗೆ ದುಡ್ಡು ಕೊಡ್ತೀಯಾ ಅಂತಾ ಕೇಳಿದ್ರು.. ಅದಲ್ಲದೇ ಈ ವಾರದ ಸಂಚಿಕೆಯಲ್ಲೂ ಕುರಿ ಪ್ರತಾಪ್‌ ಚಿತ್ರ ವಿಚಿತ್ರ ಸೌಂಡ್‌ ಮಾಡಿದ್ದಾರೆ. ಇದು ವೀಕ್ಷಕರಲ್ಲಿ ಅಸಮಧಾನ ಮೂಡಿಸಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ನಾನಾ ಕಾಮೆಂಟ್‌ ಮಾಡಿದ್ದಾರೆ.  ಇವುಗಳು ಸುಮ್ನೆ ನಾಲ್ಕಾಣೆ ದುಡ್ಡು ಮಾಡ್ಕೊಳ್ಳೋಕೆ ನಾಟ್ಕ ಮಾಡ್ತವೆ ಅಷ್ಟೇ! ಪ್ರಯೋಜನ ಏನೂ ಇಲ್ಲ! ಮಜಾ ಇಲ್ಲದ ಮಜಾ ಟಾಕೀಸ್.. ಇದ್ರಲ್ಲಿ ಓವರ್ ಆಕ್ಟಿಂಗ್, ಡಬಲ್ ಮೀನಿಂಗ್ ಸಂಭಾಷಣೆ & ಅಶ್ಲೀಲ ಮಾತುಗಳು ಇದೆ. ಮಜಾ ಟಾಕೀಸ್ ಮಜಾ ಇಲ್ಲದಿರೋ ಟಾಕೀಸ್.. ಮೊದಲು ಡಬಲ್ ಮೀನಿಂಗ್ ಮಾತಾನಾಡುವರನ್ನು ತೆಗೆದುಹಾಕಿ.. ಆಗ ನಿಮ್ಮ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತೆ.. ಗಿಚ್ಚಿ ಗಿಲಿಗಿಲಿ ಯಲ್ಲಿ ಇವರನ್ನೆಲ್ಲಾ ನೋಡಿ ಸಾಕಾಗಿದೆ..  ಇನ್ಮೇಲಾದ್ರು ದಯವಿಟ್ಟು ಕುಟುಂಬ ಸಮೇತ ನೋಡುವಂತೆ ನಡೆಸಿಕೊಡಿ ಕಾರ್ಯಕ್ರಮವನ್ನ ನಡೆಸಿಕೊಡಿ ಅಂತಾ  ವೀಕ್ಷಕರು ಕಾಮೆಂಟ್‌ ಮಾಡಿದ್ದಾರೆ.

ಇನ್ನು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗೋ ಮತ್ತೊಂದು ಕಾರ್ಯಕ್ರಮ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋ.. ಇದು ಕೂಡ ವೀಕ್ಷಕರಿಗೆ ಅಸಮಧಾನ ತರಿಸಿದೆ.. ಹೆಸರಿಗೆ ತಕ್ಕಂತೆ ಈ ಕಾರ್ಯಕ್ರಮ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುತ್ತೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಇಲ್ಲೂ ಕೂಡ ಅದೇ ಹಾಡು.. ಅದೇ ರಾಗ ಅನ್ನೋತರ ಆಗಿದೆ. ಈ ಶೋ ನಲ್ಲಿ ನಿವೇದಿತಾ ಗೌಡ ಉಗುರು ಭಾರಿ ಹೈಲೈಟ್‌ ಆಗಿತ್ತು.. ನಿವೇದಿತಾ ಗೌಡ ಎರಡ್ಮೂರು ಇಂಚಿನ ಉಗುರು ಹಾಕಿಕೊಂಡು ಶೋಅಪ್‌ ಮಾಡಿದ್ರು.. ಅದ್ರಲ್ಲೇ ಮುದ್ದೆ ತಿಂತಿನೀ, ಫ್ರೂಟ್ಸ್‌ ಕಟ್‌ ಮಾಡ್ತೀನಿ ಅಂದಿದ್ರು.. ಅದಾದ್ಮೇ ಉಗುರಿನಲ್ಲಿ ಬಾಳೆಹಣ್ಣು ಕಟ್‌ ಮಾಡಿ ಮಂಜು ಹಾಗೂ ಪ್ರಶಾಂತ್‌ ಗೆ ತಿನ್ನಿಸಿದ್ರು.. ಬಳಿಕ ತನ್ನಂತೆ ಉಗುರು ಅಂಟಿಸಿಕೊಂಡು ಇಡೀ ದಿನ ಇರ್ಬೇಕು ಅಂತಾ ಬಾಯ್ಸ್‌ ಗೆ ಸವಾಲ್‌ ಕೂಡ ಹಾಕಿದ್ರು ನಿವೇದಿತಾ..  ಬಳಿಕ ಕಳೆದ ಸಂಚಿಕೆಯಲ್ಲಿ ಬಾಯ್ಸ್‌ ಸವಾಲ್‌ ಸ್ವೀಕರಿಸಿ ನಿವೇದಿತಾಗೆ ಗುಲಾಬ್‌ ಜಾಮೂನ್‌ ತಿನ್ನಿಸಿದ್ರು.. ಈ ಸೀನ್‌ ಅಲ್ಲಿದ್ದವರಿಗೆ ಮಾತ್ರ ಅಲ್ಲ ವೀಕ್ಷಕರಿಗೂ ವಾಕರಿಕೆ ತರಿಸಿತ್ತು.

ಇದೀಗ ವೀಕ್ಷಕರು ಈ ಶೋ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ಈ ವಾಹಿನಿಗೆ ಸದಭಿರುಚಿಯ ಕಾರ್ಯಕ್ರಮಗಳೇ ಇಲ್ಲವಾ? ಹೆಣ್ಮಕ್ಳು ಎಷ್ಟೊಂದ್ ಸಾಧನೆ ಮಾಡಿದ್ದಾರೆ. ಈ ಶೋ ಇಂದ ಹೆಣ್ಮಕ್ಳ ಮಾನ ಮರ್ಯಾದೆ ಹೋಗುತ್ತಿದೆ. ತುಂಬಾ ಚೀಪಾಗಿ ತೋರಿಸ್ತಿದ್ದಾರೆ. ಮೈಮಟಾ ತೋರ್ಸೋದು. ಅಪ್ಡೇಟ್ ಆಗಿದ್ದೀವಿ ಅಂತಾ ಶೋಕಿ ಮಾಡೋದನ್ನೇ ತೋರಿಸಿತ್ತಾರೆ.. ಈ ಶೋಯಿಂದ ಮುಂದೆ ಬರುವ ಹೆಣ್ಣು ಮಕ್ಕಳ ಜನರೇಶನ್, ಹಾಳಾಗುತ್ತದೆ ಅಂತಾ ಕಾಮೆಂಟ್‌ ಮಾಡಿದ್ದಾರೆ. ಮತ್ತೆ ಕೆಲವರು, ಇದೊಂದು ಆಟ ಅಂತ ಅನ್ಕೊಬೇಕು. ಚೆಡ್ಡಿ ಉದ್ಘಾಟನೆ ಅದರ ಬಗ್ಗೆಯೇ ಸುಧೀರ್ಘ ಚರ್ಚೆ. ನಾಲಿಗೆ ಮೇಲೆ ಹಿಡಿತವೇ ಇಲ್ಲದ ಮಾತುಗಳು. ಯಾಕೆ ಬೇಕು ಅಂತಾ ಪ್ರಶ್ನೆ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *