ಟೀಕೆಗಳನ್ನೇ ಮೆಟ್ಟಿ ಬೆಳೆದ KL – ಅವಮಾನಿಸಿದವರಿಂದಲೇ ಈಗ ಸನ್ಮಾನ
ರಾಹುಲ್ ಕಲ್ಲು ಮುಳ್ಳಿನ ಹಾದಿ ಹೇಗಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೇ ಫೀಲ್ಡಿಂಗ್ ಯಾವುದ್ರಲ್ಲೂ ಹೇಳಿಕೊಳ್ಳುವಂತ ಪ್ರದರ್ಶನ ಇರ್ಲಿಲ್ಲ. ಆದ್ರೆ ಪಂದ್ಯ ಸೋತ್ರೂ ಕನ್ನಡಿಗ ಕೆಎಲ್ ರಾಹುಲ್ ಅವ್ರ ಬ್ಯಾಟಿಂಗ್ ಬಗ್ಗೆ ಅಪ್ರಿಶಿಯೇಟ್ ಮಾಡ್ಲೇಬೇಕು. ಫುಟ್ಬಾಲ್ನಂತೆ ಅತ್ತಿಂದಿತ್ತ ಇತ್ತಿಂದತ್ತ ಅಂತಾ ಬ್ಯಾಟಿಂಗ್ ಆರ್ಡರ್ ಚೇಂಜ್ ಮಾಡಿದ್ರೂ ತಾನು ಎಲ್ಲಿದ್ರೂ ಗೇಮ್ ಚೇಂಜರೇ ಅನ್ನೋದನ್ನ ತೋರಿಸಿಕೊಟ್ರು.
ಇದನ್ನೂ ಓದಿ : ಗೆದ್ದಾಯ್ತು ಪಳಾರ್ ಗಿಲ್ಲಿ – NEXT LEVEL ಫ್ಯಾನ್ಸ್ ಕ್ರೇಜ್
ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಅಪ್ಪಟ ಚಿನ್ನ. ಆದ್ರೆ ಅವ್ರಷ್ಟು ಟ್ರೋಲ್, ಟೀಕೆ, ಎಕ್ಸ್ಪೆರಿಮೆಂಟ್ಸ್ ಯಾರೂ ಫೇಸ್ ಮಾಡಿಲ್ಲ. ಕೊನೆಗೆ ಎಲ್ಲವನ್ನೂ ತುಂಬಾ ತಾಳ್ಮೆಯಿಂದಲೇ ಎದುರಿಸಿದ ರಾಹುಲ್ ಈಗ ಭಾರತ ತಂಡದ ಆಪತ್ಬಾಂಧವನಾಗಿ ನಿಂತಿದ್ದಾರೆ. ಬುಧವಾರದ ಮ್ಯಾಚಲ್ಲಿ ಭಾರತದ ಪರ ಬ್ಯಾಟಿಂಗ್ನಲ್ಲಿ ಹೀರೋ ಆಗಿ ಕಂಡಿದ್ದು ಕೆಎಲ್ ರಾಹುಲ್. ಅಜೇಯ 112 ರನ್ ಗಳಿಸಿ ಭಾರತದ ಬ್ಯಾಟಿಂಗ್ನಲ್ಲಿ ಶಕ್ತಿಯಾಗಿ ಕಂಡ್ರು. ರಾಹುಲ್ರ ಈ ಪ್ರದರ್ಶನಕ್ಕೆ ಎಲ್ಲರೂ ಶಹಬ್ಬಾಸ್ ಅಂತಿದ್ದಾರೆ.
ಪ್ಲೇಯಿಂಗ್ 11ನಲ್ಲಿ ಇದ್ರೆ ಸಾಕು ಎಂದಿದ್ದ ರಾಹುಲ್!
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಆದ್ಮೇಲೆ ರಾಹುಲ್ ಒಂದು ಮಾತು ಹೇಳಿದ್ರು. ನಾನು ಪ್ಲೇಯಿಂಗ್ XIನಲ್ಲಿ ಇದ್ದರೆ ಸಾಕು. ಅದಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ ಅಂತಾ. ಅಂದ್ರೆ ಅವ್ರ ಮಾತಿನ ಅರ್ಥ ಈಗ್ಲೂ ಕೂಡ ತಂಡದಲ್ಲಿ ಅವ್ರ ಸ್ಥಾನ ತೂಗುಯ್ಯಾಲೆಯಲ್ಲಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಆವತ್ತಿನ ಮ್ಯಾಚಲ್ಲೂ ತುಂಬಾನೇ ಕೂಲ್ ಆಗಿ ಇನ್ನಿಂಗ್ಸ್ ಮುಗಿಸಿದ್ದ ರಾಹುಲ್ ಸಿಕ್ಸ್ ಬಾರಿಸಿ ಮ್ಯಾಚ್ ವಿನ್ ಮಾಡ್ಸಿದ್ರು. ಈಗ ಎರಡನೇ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ್ರು. ಅದೂ ಕೂಡ ರಾಜ್ಕೋಟ್ನಲ್ಲಿ ಏಕದಿನ ಮಾದರಿಯಲ್ಲಿ ದಾಖಲಾದ ಎರಡನೇ ಶತಕ ಇದು. ತಮ್ಮ ವೃತ್ತಿಜೀವನದಲ್ಲಿ ಏಕದಿನ ಮಾದರಿಯಲ್ಲಿ 8ನೇ ಶತಕ ಇದು. ಹಾಗೇ ರಾಜ್ಕೋಟ್ ಮೈದಾನದಲ್ಲಿ ಅತ್ಯಧಿಕ ವೈಯಕ್ತಿಕ ಏಕದಿನ ಸ್ಕೋರ್ ಕೂಡ. ಏಕದಿನ ಮಾದರಿಯಲ್ಲಿ 794 ದಿನಗಳ ಬಳಿಕ ರಾಹುಲ್ ಬ್ಯಾಟಿಂದ ಶತಕ ಬಂದಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ಕೆಎಲ್ ರಾಹುಲ್ ನೆದರ್ಲ್ಯಾಂಡ್ ಮೇಲೆ ಶತಕ ಬಾರಿಸಿದ್ದರು.
ಹೆಜ್ಜೆ ಹೆಜ್ಜೆಗೂ ಟೀಕೆ, ಅವಮಾನಕ್ಕೊಳಗಾಗಿರುವ ರಾಹುಲ್!
ಭಾರತ ತಂಡದಲ್ಲಿ ರಾಹುಲ್ರಷ್ಟು ಅವಮಾನಕ್ಕೆ ಒಳಗಾದವ್ರು ಬಹುಶಃ ಯಾರೂ ಇಲ್ಲ ಅನ್ಸುತ್ತೆ. ಸಾಮಾಜಿಕ ಮಾಧ್ಯಮಗಳು ಅವರ ಬಗ್ಗೆ ಆಗಾಗ್ಗೆ ಟ್ರೋಲ್ಗಳನ್ನ ಮಾಡ್ತಾರೆ. ವೆಂಕಟೇಶ್ ಪ್ರಸಾದ್ರಂತಹ ತಜ್ಞರು ಸಹ ಟೀಕೆ ಮಾಡಿದ್ದಾರೆ. ಬಹುಶಃ ಬೇರೆ ಯಾರೇ ಅವ್ರ ಸ್ಥಾನದಲ್ಲಿದ್ರೂ ಕುಗ್ಗಿ ಹೋಗ್ತಿದ್ರೋ ಏನೋ. ಆದ್ರೆ ಯಾವುದಕ್ಕೂ ರಿಯಾಕ್ಟ್ ಮಾಡದೇ ಬ್ಯಾಟ್ನಲ್ಲೇ ಉತ್ತರ ಕೊಟ್ಟಿದ್ದಾರೆ. ನಿನ್ನೆ ಮ್ಯಾಚ್ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಸುನಿಲ್ ಗವಾಸ್ಕರ್ ಅವರು, ರಾಹುಲ್ ಅವರ ಆಟವನ್ನು ಕೊಂಡಾಡಿದ್ದಾರೆ. ರಾಹುಲ್ ದ್ರಾವಿಡ್ ಯಾವ ರೀತಿ ಸಂಕಷ್ಟದಲ್ಲಿ ತಂಡಕ್ಕೆ ನೆರವಾಗುತ್ತಿದ್ದರೋ ಅದೇ ರೀತಿ ರಾಹುಲ್ ಸಹ ತಂಡಕ್ಕೆ ಆಧಾರವಾಗಿದ್ದಾರೆ. ಕೆಎಲ್ ರಾಹುಲ್ ಅವರ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅವರ ಬ್ಯಾಟಿಂಗ್ನಲ್ಲಿ ಟೆಕ್ನಿಕ್, ಟೆಂಪರಮೆಂಟ್, ಯಾವ ಚೆಂಡಿಗೆ ಹೇಗೆ ದಂಡಿಸಬೇಕು ಎನ್ನುವುದು ರಾಹುಲ್ ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಹಾಡಿ ಹೊಗಳಿದ್ದಾರೆ.
ರಾಹುಲ್ ಕ್ಯಾಪ್ಟನ್ಸಿಯನ್ನೇ ಕಸಿದ ಟ್ರೋಲ್!
ಌಕ್ಚುಲಿ ಟೀಂ ಇಂಡಿಯಾ ಲೀಡ್ ಮಾಡೋಕೆ ಎಲ್ಲಾ ಕ್ವಾಲಿಟಿಸ್ ರಾಹುಲ್ರಲ್ಲಿದೆ. ಆದ್ರೆ 2022 ರ ಟಿ 20 ವಿಶ್ವಕಪ್, 2023 ರ ಏಕದಿನ ವಿಶ್ವಕಪ್ ಅದ್ಮೇಲೆ ಅಭಿಮಾನಿಗಳ ಪಾಲಿಗೆ ರಾಹುಲ್ ವಿಲನ್ ಆಗಿ ಕಂಡಿದ್ರು. ಇದ್ದಕ್ಕಿದ್ದಂತೆ ಅವ್ರನ್ನ ಟಿ20 ತಂಡದಿಂದ ಕೈಬಿಡಲಾಯಿತು. ಟೆಸ್ಟ್ ತಂಡದಲ್ಲಿಯೂ ಅವರು ಸ್ಥಾನ ಕಳೆದುಕೊಂಡರು. 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಅವರು ನಿಧಾನವಾಗಿ ಆಡಿದರೆಂದು ಅಭಿಮಾನಿಗಳಿಂದ ಟೀಕೆಗಳನ್ನು ಎದುರಿಸಿದರು. 2023 ರ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5ನೇ ಕ್ರಮಾಂಕದಲ್ಲಿ 97 ರನ್ಗಳು ಬಂದಿದ್ವು. ಭಾರತ ಪಂದ್ಯ ಗೆದ್ದಿತ್ತು. ಹಾಗೆಯೇ ವಿಶ್ವಕಪ್ ಫೈನಲ್ನಲ್ಲಿ 66 ರನ್ ಸಿಡಿಸಿದ್ರೂ ಭಾರತ ಸೋಲಿಗೆ ಕಾರಣ ಅನ್ನೋ ಟೀಕೆಗಳು ಬಂದ್ವು. ಌಕ್ಚುಲಿ ಆ ಎರಡೂ ಇನ್ನಿಂಗ್ಸ್ಗಳು ಆ ಪಂದ್ಯಗಳಲ್ಲಿ ತಂಡಕ್ಕೆ ಅತ್ಯಧಿಕ ಸ್ಕೋರ್ಗಳಾಗಿದ್ವು. ಇಷ್ಟೇ ಅಲ್ಲ ಐಪಿಎಲ್ನಲ್ಲಿಯೂ ಅವರನ್ನು ಮೈದಾನದಲ್ಲಿ ಅಪಮಾನಿಸಲಾಯಿತು. ಆದರೆ ಅದೆಲ್ಲವನ್ನ ಮೆಟ್ಟಿನಿಂತು ಅವರು ಕಮ್ಬ್ಯಾಕ್ ಮಾಡಿದ ರೀತಿ ಅದ್ಭುತವಾಗಿದೆ.
2025ರಲ್ಲಿ ಟೀಂ ಇಂಡಿಯಾ ಆಪತ್ಪಾಂಧವನಾದ ರಾಹುಲ್!
2025ರ ವರ್ಷ ರಾಹುಲ್ ಪಾಲಿಗೆ ಲಕ್ಕಿ ಅಂತಾನೇ ಹೇಳ್ಬೋದು. ರೋಹಿತ್ ದಿಢೀರ್ ನಿವೃತ್ತಿಯಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ಪಡೆದರು. ಅಲ್ಲಿಂ ತಂಡಕ್ಕೂ ಆಪದ್ಬಾಂಧವನಾಗಿದ್ದಾರೆ. ಕ್ರೈಸಿಸ್ ಮ್ಯಾನ್ ಅಂತಾನೇ ಕರೆಸಿಕೊಳ್ತಿದ್ದಾರೆ. ಏಕದಿನ ಮಾದರಿಯಲ್ಲಿ ಅವರು ಬ್ಯಾಟಿಂಗ್ ಮಾಡಿದಲ್ಲೆಲ್ಲಾ ODIಗಳಲ್ಲಿ ಭಾರತದ ಬ್ಯಾಟಿಂಗ್ ಅನ್ನು ಸ್ಟ್ರಾಂಗ್ ಮಾಡಿದ್ದಾರೆ. 2025 ರಿಂದ ಅವರು 52.42 ಸರಾಸರಿಯನ್ನು ಹೊಂದಿದ್ದಾರೆ. 11 ಇನ್ನಿಂಗ್ಸ್ಗಳಲ್ಲಿ 107 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ 367 ರನ್ ಗಳಿಸಿದ್ದಾರೆ. ಹಾಗೇ ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ 2 ಅರ್ಧಶತಕ ಮತ್ತು ಒಂದು ಶತಕವೂ ಸೇರಿದೆ.

ನೋಡಿರಿ

