ಅಭಿ & ಸಂಜು BEST ಓಪನರ್ಸ್ – ಗಿಲ್ ನಂಬಿ ಕಾಂಬಿನೇಷನ್ ಫೇಲ್
SA ವಿರುದ್ಧ ಸೂರ್ಯಗೆ DO Or DIE

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟಿ20ಐ ಸರಣಿಯ ಮೊದಲ ಪಂದ್ಯ ಇವತ್ತು ಕಟಕ್ನಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಟಿ-20ಐ ಫಾರ್ಮೆಟ್ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡ್ತಿದ್ದು ಈ ಸರಣಿಯನ್ನೂ ಗೆಲ್ಲೋ ಫೇವರೆಟ್ ಟೀಂ ಆಗಿದೆ. ಆದ್ರೆ ಈ ಪಂದ್ಯಕ್ಕೆ ಭಾರತದ ಪರ ಇನ್ನಿಂಗ್ಸ್ ಆರಂಭಿಸೋದು ಯಾರು ಅನ್ನೋದೇ ಈಗ ಇರುವಂತ ಮಿಲಿಯನ್ ಡಾಲರ್ ಪ್ರಶ್ನೆ. ಅಭಿಷೇಕ್ ಶರ್ಮಾ ಜತೆ ಓಪನರ್ ಆಗೋದು ಶುಭ್ಮನ್ ಗಿಲ್ಲಾ ಅಥವಾ ಸಂಜು ಸ್ಯಾಮ್ಸನ್ನಾ ಅನ್ನೋ ಚರ್ಚೆ ನಡೀತಿದೆ.
ಇದನ್ನೂ ಓದಿ : ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶಮಿ ಅಬ್ಬರ – ಆಯ್ಕೆ ಸಮತಿಗೆ ಮತ್ತೊಂದು ಬಿಗ್ ಮೆಸೇಜ್ ಕೊಟ್ಟ ವೇಗಿ
2024ರ ಟಿ-20 ವಿಶ್ವಕಪ್ ಆದ್ಮೇಲೆ ಭಾರತದ ಪರ ಟಿ-20ಐ ಫಾರ್ಮೆಟ್ನಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸ್ತಿದ್ರು. ಆದ್ರೆ 2025ರ ಏಷ್ಯಾಕಪ್ನಲ್ಲಿ ಶುಭ್ಮನ್ ಗಿಲ್ ಟಿ-20ಐ ತಂಡಕ್ಕೆ ವೈಸ್ ಕ್ಯಾಪ್ಟನ್ ಆಗಿ ಕಂ ಬ್ಯಾಕ್ ಮಾಡಿದ್ರು. ಅಲ್ಲಿಂದ ಈಚೆಗೆ ಅಭಿಷೇಕ್ ಜೊತೆ ಗಿಲ್ ಓಪನರ್ ಆಗಿದ್ದಾರೆ. ಸಂಜು ಸ್ಯಾಮ್ಸನ್ ಮಿಡಲ್ ಆರ್ಡರ್ ನಲ್ಲಿ ಆಡ್ತಿದ್ದಾರೆ. ಬಟ್ ಇಬ್ರೂ ಕಡೆಯಿಂದಗೂ ಬಿಗ್ ಇನ್ನಿಂಗ್ಸ್ ಬಂದಿಲ್ಲ. ಆದ್ರೆ ಕಳೆದ ವರ್ಷ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಓಪನರ್ ಆಗಿ ಎರಡು ಶತಕ ಬಾರಿಸಿದ್ರು. ಹೀಗಾಗಿ ಈ ಸಲ ಅಭಿಷೇಕ್ ಜೊತೆ ಸಂಜುನೇ ಇನ್ನಿಂಗ್ಸ್ ಆರಂಬಿಸಲಿ ಅನ್ನೋ ಒತ್ತಾಯ ಕೇಳಿ ಬರ್ತಿದೆ.
ಕಳೆದ ವರ್ಷ ಸೌತ್ ಆಫ್ರಿಕಾ ವಿರುದ್ಧ ಸಂಜು ಸುನಾಮಿ!
ಭಾರತದ ಪರ ಓಪನರ್ ಅದ್ಭುತ ಪ್ರದರ್ಶನ ನೀಡಿರೋ ಸಂಜು 2024ರ ನವೆಂಬರ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ 2 ಶತಕ ಬಾರಿಸಿದ್ರು. 4 ಇನಿಂಗ್ಸ್ಗಳಲ್ಲಿ 2 ಭರ್ಜರಿ ಶತಕಗಳೊಂದಿಗೆ 216 ರನ್ ಕಲೆಹಾಕಿದ್ರು. ಹೀಗಾಗಿ ಸಂಜು ಸ್ಯಾಮ್ಸನ್ ಅವರನ್ನು ಈ ಸಲವೂ ಓಪನರ್ ಆಗಿ ಆಡ್ಸಿ ಅನ್ನೋ ಮಾತುಗಳು ಕೇಳಿ ಬರ್ತಿವೆ. ಆದ್ರೆ ಶುಭ್ಮನ್ ಗಿಲ್ ಭಾರತ ತಂಡದ ಉಪನಾಯಕ. ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಲು ಸಾಧ್ಯವಿಲ್ಲ. ಹೀಗಾಗಿ ಶುಭ್ಮನ್ ಹಾಗೂ ಅಭಿಷೇಕ್ ಶರ್ಮಾ ಅವರನ್ನು ಓಪನರ್ಗಳಾಗಿ ಮುಂದುವರೆಸುವ ಸಾಧ್ಯತೆ ಇದೆ. ಹೀಗಾಗಿ ಸಂಜು ಅವ್ರನ್ನ ತ್ ಆಫ್ರಿಕಾ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಅಂದರೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಯಾಮ್ಸನ್ಗೆ ಈ ಬಾರಿ ಮತ್ತೊಮ್ಮೆ ಚಾನ್ಸ್ ನೀಡಬಹುದು.
ಟಿ-20ಐನಲ್ಲಿ ಸದ್ದು ಮಾಡದ ಗಿಲ್!
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಅಂತಾನೇ ಕರೆಸಿಕೊಳ್ಳೋ ಶುಭ್ಮನ್ ಗಿಲ್ ಟಿ20ಐ ಫಾರ್ಮೆಟ್ನಲ್ಲಿ ಯಾಕೋ ಡಲ್ ಆಗಿದ್ದಾರೆ. ಏಷ್ಯಾಕಪ್ನಲ್ಲಿ 7 ಇನ್ನಿಂಗ್ಸ್ಗಳಿಂದ ಒಂದೂ ಅರ್ಧಶತಕ ಬಂದಿರಲಿಲ್ಲ. 147 ರನ್ಸ್ ಕಲೆ ಹಾಕಿದ್ರು. ಇನ್ನು ಆಸೀಸ್ ಸಿರೀಸ್ನಲ್ಲೂ ಅದೇ ಕಥೆಯಾಗಿತ್ತು. ಹೀಗಿದ್ರೂ ಅಭಿಷೇಕ್ ಜೊತೆ ಓಪನರ್ ಆಗಿ ಆಡಿಸ್ತಿರೋದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸೂರ್ಯನಿಗೂ ಬಿಡಬೇಕಿದೆ ಗ್ರಹಣ!
ಇನ್ನು ಕ್ಯಾಪ್ಟನ್ ಆದ್ಮೇಲೆ ಸೂರ್ಯಕುಮಾರ್ ಯಾದವ್ ಬ್ಯಾಟ್ ಕೂಡ ಮಂಕಾಗಿದೆ. ಈ ಸರಣಿಯಲ್ಲಿ ಸೂರ್ಯಗ್ರಹಣ ಬಿಡದೇ ಇದ್ರೆ ಕ್ಯಾಪ್ಟನ್ಸಿ ಕಳ್ಕೊಳ್ಳೋದು ಗ್ಯಾರಂಟಿ. ಮೊದ್ಲೆಲ್ಲಾ ಟಿ-20ಐ ಸ್ಪೆಷಲಿಸ್ಟ್ ಬ್ಯಾಟರ್ ಅಂತಾನೇ ಕರೆಸಿಕೊಳ್ತಿದ್ದ ಸೂರ್ಯ ಈಗ ಬಂದಪುಟ್ಟ ಹೋದ ಪುಟ್ಟ ಅನ್ನೋ ಹಾಗೇ ಪರ್ಫಾಮ್ ಮಾಡ್ತಿದ್ದಾರೆ. ಕಳೆದ ಆಸ್ಟ್ರೇಲಿಯಾ ಸಿರೀಸ್ನಲ್ಲೂ ಬಿಗ್ ಇನ್ನಿಂಗ್ಸ್ ಬಂದಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 19.71ರ ಸರಾಸರಿಯಲ್ಲಿ 84 ರನ್ಗಳಿಸಿದ್ರು. 5 ಪಂದ್ಯಗಳಲ್ಲಿ ಸಿಡಿಸಿದ್ದು ಕೇವಲ 4 ಬೌಂಡರಿ, 6 ಸಿಕ್ಸರ್ ಮಾತ್ರ. ಇನ್ನು ಈ ವರ್ಷ ಅಂದ್ರೆ 2025ರಲ್ಲಿ ಸೂರ್ಯಕುಮಾರ್ ಭಾರತದ ಪರ 15 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಆದ್ರೆ ಕಲೆ ಹಾಕಿರೋದು ಮಾತ್ರ 184 ರನ್ ಮಾತ್ರ. 15.33ರ ಹೀನಾಯ ಸರಾಸರಿಯನ್ನ ಹೊಂದಿರೋ ಸೂರ್ಯ ಬ್ಯಾಟಿಂಗ್ನೇ ಮರೆತಂತಿದ್ದಾರೆ. ಟೀಮ್ ಇಂಡಿಯಾದ ನಾಯಕನ ಪಟ್ಟವೇರಿದ ಬಳಿಕ ಸೂರ್ಯಕುಮಾರ್ 24 ಟಿ 20 ಪಂದ್ಯಗಳನ್ನ ಆಡಿದ್ದಾರೆ. ಈ ಪಂದ್ಯಗಳಲ್ಲಿ 19.71ರ ಸರಾಸರಿಯಲ್ಲಿ 414 ರನ್ಗಳಿಸಿದ್ದಾರೆ. ಈ ಪೈಕಿ 2 ಸಲ ಮಾತ್ರವೇ ಅರ್ಧಶತಕದ ಗಡಿ ದಾಟಿದ್ದಾರೆ. ಹೀಗಾಗಿ 2026ರ ಟಿ-20 ವಿಶ್ವಕಪ್ ಬಳಿಕವೂ ಸೂರ್ಯ ಕಂಟಿನ್ಯೂ ಆಗ್ಬೇಕು ಅಂದ್ರೆ ಈ ಸಿರೀಸ್ನಲ್ಲಿ ಬಿಗ್ ಸ್ಕೋರ್ ಬರಲೇಬೇಕಿದೆ.

ನೋಡಿರಿ

