IPLಗೆ ಉಪೇಂದ್ರ ಎಂಟ್ರಿ.. ಬುದ್ದಿವಂತನಿಗೆ ಕ್ರಿಕೆಟರ್ಸ್‌ ಸಾಥ್‌! – ಉಪ್ಪಿದಾದ ರೋಲ್‌ ಏನು?

IPLಗೆ ಉಪೇಂದ್ರ ಎಂಟ್ರಿ.. ಬುದ್ದಿವಂತನಿಗೆ ಕ್ರಿಕೆಟರ್ಸ್‌ ಸಾಥ್‌! – ಉಪ್ಪಿದಾದ ರೋಲ್‌ ಏನು?

ಐಪಿಎಲ್‌ ಸೀಸನ್‌ 18 ಈಗ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಎಲ್ಲರ ಕಣ್ಣು ಈಗ ಟ್ರೋಫಿ ಮೇಲಿದೆ. ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಪ್ಲೇಆಪ್‌ಗೆ ಎಂಟ್ರಿಕೊಟ್ಟಿದೆ. ಹೀಗಾಗಿ ಈ ಸಲ ಕಪ್‌ ನಮ್ದೇ ಅಂತಾ ಆರ್‌ಸಿಬಿ ಫ್ಯಾನ್ಸ್‌ ಹೇಳ್ತಿದ್ದಾರೆ. ಇದೀಗ ಐಪಿಎಲ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ವೊಂದಿದೆ. ಇದೀಗ ಐಪಿಎಲ್‌ ಗೆ ಸಂಬಂಧಿಸಿದ ಕತೆಯೊಂದು ತೆರೆಮೇಲೆ ಬರಲು ಸಜ್ಜಾಗಿದೆ. ಅದೂ ಕೂಡ ಕನ್ನಡದಲ್ಲಿ ಅನ್ನೋದು ವಿಶೇಷ.. ಇದ್ರಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಕೆಲ ಕ್ರಿಕೆಟರ್ಸ್‌ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ: ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್‌? – ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಣಬೀರ್‌ ಜೋಡಿ?

ಐಪಿಎಲ್​​ ಟೂರ್ನಿಗಿರುವ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬಹುತೇಕ ದೇಶಗಳಲ್ಲಿ ಈ ಶ್ರೀಮಂತ ಲೀಗ್ ನೋಡುವ ಜನರಿದ್ದಾರೆ. ವರ್ಷದಿಂದ ವರ್ಷಕ್ಕೆ ಐಪಿಎಲ್ ನೋಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಗತ್ತಿನ ಅತೀ ದೊಡ್ಡ ಕ್ರಿಕೆಟ್‌ ಲೀಗ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಜಗತ್ತಿನ ಶ್ರೀಮಂತ ಲೀಗ್‌ ತೆರೆ ಮೇಲೆ ಬರಲು ಸಜ್ಜಾಗಿದೆ. ಇದ್ರಲ್ಲಿ ಸ್ಯಾಂಡಲ್‌ ವುಡ್‌ ನಟ, ರಿಯಲ್‌ ಸ್ಟಾರ್‌ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಆಕ್ಟ್‌ ಮಾಡಲಿದ್ದಾರೆ.

ಹೌದು, ರಿಯಲ್‌ ಸ್ಟಾರ್‌ ಉಪೇಂದ್ರ ಏನ್‌ ಮಾಡಿದ್ರು ಡಿಫ್ರೆಂಟ್‌ ಆಗೇ ಮಾಡ್ತಾರೆ.. ಇತ್ತೀಚೆಗೆ ಯುಐ ಸಿನಿಮಾ ಮೂಲಕ ತೆರೆಮೇಲೆ ಅಬ್ಬರಿಸಿದ್ರು. ಉಪೇಂದ್ರಗೆ ಸಿನಿಮಾ, ರಾಜಕೀಯ ಜೊತೆಗೆ ಕ್ರಿಕೆಟ್‌ ಜೊತೆಗೂ ನಂಟಿದೆ. ಉಪೇಂದ್ರ ಕ್ರಿಕೆಟ್‌ ದೊಡ್ಡ ಫ್ಯಾನ್‌. ಕೆಲ ವರ್ಷದ ಹಿಂದೆ ಆರ್‌ಸಿಬಿ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದು ಉಪ್ಪಿ. ಇದೀಗ ಕ್ರಿಕೆಟ್‌ ಗೆ ಸಂಬಂಧಿಸಿದ ಸಿನಿಮಾದಲ್ಲಿ ಉಪ್ಪಿ ಆಕ್ಟ್‌ ಮಾಡ್ತಿದ್ದಾರೆ. ಈ ಸಿನಿಮಾ ಕರ್ವ ಡೈರೆಕ್ಟರ್ ನವನೀತ್ ನಿರ್ದೇಶನದಲ್ಲಿ ಮೂಡಿ ಬರಲಿದೆ. ಅಂದ್ಹಾಗೆ ಈ ಚಿತ್ರ  ‘ಚಕ್‌ ದೇ ಇಂಡಿಯಾ’, ‘ಬಿಗಿಲ್‌’ನಂಥ ಸ್ಪೋರ್ಟ್ಸ್ ಡ್ರಾಮಾವಾದರೂ ನಿರ್ದೇಶಕ ನವನೀತ್‌ ಈ ಬಾರಿ ಕಾಮಿಡಿ ಪ್ರಯೋಗ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಶ್ರೀಮಂತ ಉದ್ಯಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಿನಿಮಾದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್‌ಗಳಿದ್ದು, ಇಲ್ಲಿ  ಶೂಟಿಂಗ್‌ ಸಾಧ್ಯವಾಗದಿದ್ರೆ, ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡುವ ಪ್ಲಾನ್‌ ಮಾಡಲಾಗಿದೆ. ಈ ಸಿನಿಮಾಗೆ ಅವರು ಬಹುತೇಕ ‘ಕರ್ವ’ ತಂತ್ರಜ್ಞರನ್ನೇ ಆಯ್ಕೆ ಮಾಡಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಉಪೇಂದ್ರ ಜತೆಗೆ ಇನ್ನೊಬ್ಬ ಚಿರಪರಿಚಿತ ಕ್ರಿಕೆಟರ್‌ ಕಮ್‌ ನಟ ಲೀಡ್‌ ರೋಲ್‌ನಲ್ಲಿ ಇರಲಿದ್ದಾರೆ. ಕೆಲವು ಕ್ರಿಕೆಟರ್‌ಗಳೂ ಕಾಣಿಸಿಕೊಳ್ಳಲಿದ್ದಾರೆ. ಜುಲೈ 15ರ ಬಳಿಕ ಸಿನಿಮಾ ತಂಡ ಶೂಟಿಂಗ್‌ ಶುರುಮಾಡಲಿದೆ.  ಅದಕ್ಕೂ ಮುನ್ನ ಉಪ್ಪಿ ಟೀಸರ್‌ನೊಂದಿಗೆ ಸಿನಿಮಾ ಮುಹೂರ್ತ ನಡೆಲಿದೆ. ಆದ್ರೆ ಈ ವರೆಗೂ ಸಿನಿಮಾ ಟೈಟಲ್‌ ಏನು? ಯಾವ್ಯಾವ ಕ್ರಿಕೆಟರ್ಸ್‌ ಸಿನಿಮಾದಲ್ಲಿ ಆಕ್ಟ್‌ ಮಾಡ್ತಾರೆ ಅನ್ನೋದನ್ನ ರಿವೀಲ್‌ ಮಾಡಿಲ್ಲ.. ಈ ವರ್ಷಾಂತ್ಯ ಅಥವಾ 2026ರ ಆರಂಭದಲ್ಲಿಈ ಸಿನಿಮಾ ತೆರೆಗೆ ಬರಲಿದೆ. ಸೆವೆನ್‌ ಸ್ಟಾರ್‌ ಎಂಟರ್ಟೇನ್ಮೆಂಟ್ಸ್‌ ಅಡಿಯಲ್ಲಿ ಮೂವರು ನಿರ್ಮಾಪಕರು ಬಂಡವಾಳ ಹಾಕಿದ್ದಾರೆ ಎಂದು ಸಿನಿಮಾ ಡೈರೆಕ್ಟರ್‌ ಹೇಳಿದ್ದಾರೆ. ಇದೀಗ ಸಿನಿಮಾ ಐಪಿಎಲ್‌ ಕಥೆಯಾಗಿರೋದ್ರಿಂದ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡೋದಂತೂ ಪಕ್ಕಾ.

Shwetha M

Leave a Reply

Your email address will not be published. Required fields are marked *