ಈ ಮಹಿಳೆ ನಿದ್ರೆ ಮಾಡಿದ್ರೆ 4 ದಿನವಾದ್ರೂ ಎಚ್ಚರವಾಗಲ್ಲ – ‘ಸ್ಲೀಪಿಂಗ್‌ ಬ್ಯೂಟಿʼಯ  ಸೀಕ್ರೆಟ್ ಏನು?

ಈ ಮಹಿಳೆ ನಿದ್ರೆ ಮಾಡಿದ್ರೆ 4 ದಿನವಾದ್ರೂ ಎಚ್ಚರವಾಗಲ್ಲ – ‘ಸ್ಲೀಪಿಂಗ್‌ ಬ್ಯೂಟಿʼಯ  ಸೀಕ್ರೆಟ್ ಏನು?

ನಾವು ಆರೋಗ್ಯವಾಗಿರಬೇಕೆಂದರೆ ದಿನಕ್ಕೆ 8 ಗಂಟೆ ನಿದ್ರೆ ಮಾಡಬೇಕು ಅಂತಾ ವೈದ್ಯರು ಸಲಹೆ ನೀಡುತ್ತಾರೆ. ಆದರೆ‌ ಇಂದಿನ ದಿನಗಳಲ್ಲಿ ಅನೇಕರು ನಿದ್ದೆ ಬರೋದಿಲ್ಲ ಅಂತಾ ಆಗಾಗ ಗೊಣಗುತ್ತಿರುತ್ತಾರೆ. ಕೆಲವರು ಸರಿಯಾಗಿ ನಿದ್ದೆ ಮಾಡದೇ ಅನಾರೋಗ್ಯಕ್ಕೆ ತುತ್ತಾದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಆದರೆ ಕೆಲವರು ಮಾತ್ರ ಏನೇ ಆಗಿದ್ರೂ ಕೂಡ ಚಿಂತೆಯಿಲ್ಲದೆ ನಿದ್ರೆ ಮಾಡುತ್ತಾರೆ. ಇನ್ನೂ ಕೆಲವರು ಸೋಂಬೇರಿಗಳಂತೆ ಹೆಚ್ಚಿನ ಸಮಯ ನಿದ್ರೆ ಮಾಡುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ನಿದ್ರೆ ಮಾಡುವ ಸಮಯ ಕೇಳಿದ್ರೆ ನೀವೂ ಶಾಕ್ ಆಗ್ತಿರಾ!

ಇದನ್ನೂ ಓದಿ: ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ! -‘ಮೆಸ್ಸಿ ನಿನಗಾಗಿ ಕಾಯುತ್ತಿದ್ದೇವೆ’ ಎಂದು ಜೀವ ಬೆದರಿಕೆ

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನದಲ್ಲಿ ಹೆಚ್ಚೆಂದರೆ 8 ರಿಂದ 10 ಗಂಟೆಗಳವರೆಗೆ  ನಿದ್ರೆ ಮಾಡಬಹದು. ಆದರೆ ಇಂಗ್ಲೆಂಡ್‌ನಲ್ಲಿ 38 ವಯಸ್ಸಿನ ಮಹಿಳೆಯೊಬ್ಬರು ದಿನದ 24 ಗಂಟೆಯಲ್ಲಿ 22 ಗಂಟೆಗಳ ಕಾಲ ನಿದ್ರೆ ಮಾಡುತ್ತಾಳೆ. ಇಷ್ಟು ಸಮಯ ನಿದ್ರೆ ಮಾಡುವ ಅಸಮಾನ್ಯ ಸಾಮರ್ಥ್ಯ ಹೊಂದಿರುವ ಈ ಮಹಿಳೆ ʼಸ್ಲೀಪಿಂಗ್‌ ಬ್ಯೂಟಿʼ  ಅಂತಾನೇ ಫೇಮಸ್ ಆಗಿದ್ದಾಳೆ.

ಇಂಗ್ಲೆಂಡ್‌ನ ವೆಸ್ಟ್ ಕ್ಯಾಸಲ್‌ಫೋರ್ಡ್‌ನ ನಿವಾಸಿಯಾಗಿರೋ ಈ ಮಹಿಳೆಯ ಹೆಸರು ಜೊವಾನ್ನಾ ಕಾಕ್ಸ್. ಈ ಮಹಿಳೆ ದಿನದ 22 ಗಂಟೆ ನಿದ್ದೆ ಮಾಡುತ್ತಾಳೆ. ಕೆಲವೊಂದು ಬಾರಿ ಆಕೆ ನಿರಂತರವಾಗಿ ನಾಲ್ಕು ದಿನಗಳ ಕಾಲ ನಿದ್ದೆ ಮಾಡುತ್ತಾಳಂತೆ. ಆಕೆಗಿರುವ ವಿಚಿತ್ರ ಕಾಯಿಲೆಯೇ ನಿತ್ಯ ಹೀಗೆ  ನಿದ್ರೆ ಮಾಡುವುದಕ್ಕೆ ಪ್ರಮುಖ ಕಾರಣವಂತೆ.

ಜೊವಾನ್ನಾ ʼಇಡಿಯೋಪಥಿಕ್ ಹೈಪರ್ಸೋಮ್ನಿಯಾ’ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದಾಳೆ. 2021 ರಲ್ಲಿ ಆಕೆಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಹಗಲಿನಲ್ಲೂ ನಿದ್ರೆಯ ತೀವ್ರತೆ ಹೆಚ್ಚಾಗಿರುತ್ತದೆ. ಆಗಾಗ್ಗೆ ಎಚ್ಚರಗೊಳ್ಳಲು ಹೆಣಗಾಡುತ್ತಾರಂತೆ.

“ಒಮ್ಮೆ ಮಲಗಿದ ಮೇಲೆ ನನ್ನನ್ನು ಎಬ್ಬಿಸಲು ಸಾಧ್ಯವಿಲ್ಲ. ನಾನು ಎಚ್ಚರಗೊಂಡಾಗ ಎಷ್ಟು ಸಮಯ ನಿದ್ರೆ ಮಾಡಿದೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಾನು ಎಚ್ಚರಗೊಳ್ಳದೇ ಸತತ ನಾಲ್ಕು ದಿನ ನಿದ್ರೆ ಮಾಡಿದ್ದೇನೆ. ಇದು ನನ್ನ ಜೀವನವನ್ನೇ ಹಾಳು ಮಾಡುತ್ತಿದೆ” ಎಂದು ಜೊವಾನ್ನಾ ತನಗಿರುವ ಕಾಯಿಲೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾಳೆ.

ಈಕೆ ಪ್ರೊಟೀನ್ ಮತ್ತು ಪೋಷಕಾಂಶಯುಕ್ತ ಆಹಾರ ಸೇವಿಸಿರುವುದರಿಂದಾಗಿ ಇಷ್ಟು ದಿನಗಳ ಕಾಲ ಬದುಕುಳಿದಿದ್ದಾರೆ. ಏಕೆಂದರೆ ಹೆಚ್ಚಿನ ಸಮಯ ನಿದ್ರೆಯಲ್ಲೇ ಇದ್ದಾಗ ದೇಹಕ್ಕೆ ಅಗತ್ಯ ಪೋಷಕಾಂಶದ ಕೊರತೆ ಹೆಚ್ಚು ಬಾಧಿಸಬಹುದು ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

suddiyaana