ಸಾವಿನ ಜೊತೆ ಜಗತ್ತು ಗೆದ್ದ ಗ್ರೀನ್ – REAL ಲೈಫ್ ಫೈಟರ್ ಕ್ಯಾಮರೂನ್
IPL ಕಂ ಬ್ಯಾಕ್.. ಡೇಂಜರಸ್ ಆಗ್ತಾರಾ?

ನಿನ್ನೆಯಿಂದ ಕ್ಯಾಮೆರಾನ್ ಗ್ರೀನ್ದೇ ಸದ್ದು, ಸುದ್ದಿ ಎಲ್ಲವೂ.. ಐಪಿಎಲ್ ಮಿನಿ ಆಕ್ಷನ್ನಲ್ಲಿ ಬರೋಬ್ಬರಿ 25.20 ಕೋಟಿ ರೂಪಾಯಿಗೆ ಕೆಕೆಆರ್ ತಂಡ ಬಿಡ್ ಮಾಡಿದೆ. ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ಅಮೌಂಟ್ಗೆ ಬಿಡ್ ಆದ ಫಾರಿನ್ ಪ್ಲೇಯರ್ ಅನ್ನೋ ಇತಿಹಾಸ ಸೃಷ್ಟಿಸಿದ್ದಾರೆ. 2026ರ ಐಪಿಎಲ್ ಮಿನಿ ಆಕ್ಷನ್ನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಬಿಡ್ಡಿಂಗ್ ಆಗಿದೆ. ಮೆಗಾ ಆಕ್ಷನ್ಗೇ ಸೆಡ್ಡು ಹೊಡ್ಯೋ ರೇಂಜ್ಗೆ ಫ್ರಾಂಚೈಸಿಗಳು ಬಿಡ್ ಮಾಡಿವೆ. ಅದ್ರಲ್ಲೂ ಐಪಿಎಲ್ ಹಿಸ್ಟರಿಯಲ್ಲೇ ಥರ್ಡ್ ಹೈಯೆಸ್ಟ್ ಬಿಡ್ಡಿಂಗ್ ನಡೆದಿದೆ. ಕ್ಯಾಮೆರಾನ್ ಗ್ರೀನ್ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಇಂಪ್ಯಾಕ್ಟ್ ಮಾಡಬಲ್ಲ ಪ್ಲೇಯರ್. ಹೀಗಾಗಿ 13 ಕೋಟಿವರೆಗೂ ಕೆಕೆಆರ್ ಮತ್ತು ರಾಜಸ್ಥಾನ ನಡುವೆ ಫೈಟ್ ನಡೀತು. ಇನ್ನೇನು ಕೆಕೆಆರ್ಗೆ ಸೋಲ್ಡ್ ಆಗೇ ಬಿಟ್ರು ಅನ್ನುವಷ್ಟ್ರಲ್ಲಿ ರೇಸ್ಗೆ ಬಂದ ಸಿಎಸ್ಕೆ ಠಕ್ಕರ್ ಕೊಡ್ತಾ ಹೋಯ್ತು. ಅಂತಿಮವಾಗಿ 25.20 ಕೋಟಿ ರೂಪಾಯಿಗೆ ಕ್ಯಾಮರಾನ್ ಗ್ರೀನ್ ಕೆಕೆಆರ್ ಪಾಲಾದ್ರು.
ಇದನ್ನೂ ಓದಿ : ತಪ್ಪು ತಿದ್ದಿ ನಡೆದ ಪೃಥ್ವಿ ಶಾಗೆ ಸಿಕ್ತು ಹೊಸ ಬದುಕು – ಅನ್ಸೋಲ್ಡ್ ಭಯದಲ್ಲಿದ್ದ ಪೃಥ್ವಿ ಕೈ ಹಿಡಿದ ಡೆಲ್ಲಿ
ಮುಂಬೈ, ಆರ್ ಸಿಬಿ ಆಯ್ತು.. ಈಗ ಕೆಕೆಆರ್ ಗೆ ಗ್ರೀನ್!
ಯೆಸ್. ಕ್ಯಾಮೆರಾನ್ ಗ್ರೀನ್ ಐಪಿಎಲ್ನಲ್ಲಿ ಆಡಿರೋದೇ 2 ಸೀಸನ್.. ಹೀಗಿದ್ರೂ ಐತಿಹಾಸಿಕ ಮೊತ್ತಕ್ಕೆ ಖರೀದಿ ಆಗಿದ್ದಾರೆ. ಅದಕ್ಕೆ ಕಾರಣ ಅವ್ರ ಇಂಪ್ರೆಸ್ಸಿವ್ ಪ್ರದರ್ಶನ. ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವ್ಯಾಲ್ಯುಯೇಬಲ್ ಇನ್ನಿಂಗ್ಸ್ ಆಡಿದ್ದಾರೆ. ಌಂಡ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡುವ ಸಾಮರ್ಥ್ಯ ಇದೆ. ಌಂಡ್ ಫೀಲ್ಡಿಂಗ್ ಎಬಿಲಿಟಿ ಕೂಡ ಯಾವುದೇ ಫ್ರಾಂಚೈಸಿಗೂ ಪ್ಲಸ್ ಪಾಯಿಂಟ್ ಆಗುತ್ತೆ. ಹೀಗಾಗೇ ಐಪಿಎಲ್ನಲ್ಲಿ ಫುಲ್ ಎಕ್ಸ್ಪೆನ್ಸಿವ್ ಪ್ಲೇಯರ್ರೇ ಆಗಿದ್ದಾರೆ. 2023ರ ಐಪಿಎಲ್ಗೂ ಮುನ್ನ 17.5 ಕೋಟಿಗೆ ಮುಂಬೈ ತಂಡ ಖರೀದಿ ಮಾಡಿತ್ತು. ಆ ವರ್ಷ ಮುಂಬೈ ಪರ 1 ಶತಕ, 2 ಅರ್ಧಶತಕಗಳ ಜೊತೆ 452 ರನ್ಸ್ ಕಲೆ ಹಾಕಿದ್ರು. ಌಂಡ್ ನೆಕ್ಸ್ಟ್ 2024ರ ಐಪಿಎಲ್ಗೂ ಮುನ್ನ ಆರ್ಸಿಬಿ ತಂಡ ಅದೇ ಮೊತ್ತಕ್ಕೆ ಟ್ರೇಡ್ ಮಾಡಿಕೊಂಡಿತ್ತು. ಆರ್ಸಿಬಿ ಪರ 255 ರನ್ಸ್ ಕಲೆ ಹಾಕಿದ್ರು. ಆದ್ರೆ 2025ರ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಹೆಸರು ಕೊಟ್ಟಿರಲಿಲ್ಲ. ಇಂಜುರಿ ಕಾರಣಕ್ಕೆ ಹಿಂದೆ ಸರಿದಿದ್ರು. ಬಟ್ ಈಗ ಮಿನಿ ಆಕ್ಷನ್ನಲ್ಲಿ ದಾಖಲೆ ಬೆಲೆಗೆ ಸೋಲ್ಡ್ ಆಗಿದ್ದಾರೆ. ಕ್ಯಾಮರೂನ್ ಗ್ರೀನ್ ಐಪಿಎಲ್ನಲ್ಲಿ 29 ಪಂದ್ಯಗಳನ್ನಾಡಿದ್ದು, 153ರ ಸ್ಟ್ರೈಕ್ರೇಟ್ನಲ್ಲಿ 707 ರನ್ಗಳಿಸಿದ್ದಾರೆ. ಬೌಲಿಂಗ್ನಲ್ಲೂ 16 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ 63 ಪಂದ್ಯಗಳಿಂದ 1 ಶತಕ, 8 ಅರ್ಧಶತಕಗಳ ನೆರವಿನಿಂದ 1334 ರನ್ಗಳಿಸಿದ್ದಾರೆ. ಬೌಲಿಂಗ್ನಲ್ಲಿ 28 ವಿಕೆಟ್ ಪಡೆದಿದ್ದಾರೆ. ಐಪಿಎಲ್ನಲ್ಲಿ ಗ್ರೀನ್ ದುಬಾರಿ ಬೆಲೆಯಿಂದ್ಲೇ ಸದ್ದು ಮಾಡಿದ್ರೂ ಕೂಡ ರಿಯಲ್ ಲೈಫಲ್ಲಿ ಅವ್ರ ಜರ್ನಿಯೇ ರೋಚಕವಾಗಿದೆ. ಸಾವನ್ನೇ ಗೆದ್ದು ಬಂದ ಗ್ರೀನ್ ಈಗ ಕ್ರಿಕೆಟ್ ಲೋಕದಲ್ಲಿ ಹಲ್ಚಲ್ ಎಬ್ಬಿಸ್ತಿದ್ದಾರೆ.
ಗ್ರೀನ್ ಗೆ ವೈದ್ಯರು ಕೊಟ್ಟಿದ್ದೇ 12 ವರ್ಷಗಳ ಆಯಸ್ಸು!
ಯೆಸ್.. ಆಸ್ಟ್ರೇಲಿಯಾ ಮೂಲದ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಸಾವನ್ನೇ ಗೆದ್ದು ನಿಂತಿದ್ದಾರೆ ಅಂದ್ರೆ ತಪ್ಪಾಗಲ್ಲ. ಪದೇಪದೆ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಳ್ತಿದೆ. ಕ್ರಾನಿಕ್ ಕಿಡ್ನಿ ಡಿಸೀಸ್ ಇರುವುದು ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಈ ಸಮಸ್ಯೆ ಇದ್ದವರಲ್ಲಿ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಗ್ರೀನ್ ಅವರ ತಾಯಿ 19 ವಾರಗಳ ಗರ್ಭಾವಸ್ತೆಯಲ್ಲಿ ನಡೆಸಲಾಗಿದ್ದ ಅಲ್ಟ್ರಾಸೌಂಡ್ ಸ್ಕ್ಯಾನ್ ವೇಳೆಯೇ ಈ ಸಮಸ್ಯೆ ಬಗ್ಗೆ ಗೊತ್ತಾಗಿತ್ತು. ಆಗ ವೈದ್ಯರು ನಿಮ್ಮ ಮಗುವಿನ ಆಯಸ್ಸು ಕೇವಲ 12 ವರ್ಷ ಮಾತ್ರ ಎಂದಿದ್ದರಂತೆ. ಆದ್ರೆ ಇಂತಹ ಆರೋಗ್ಯದ ಸಮಸ್ಯೆ ವಿರುದ್ಧ ಹೋರಾಡಿ ಇಂದು ಕ್ಯಾಮರೂನ್ ಗ್ರೀನ್ ಅತ್ಯಂತ ಯಶಸ್ವಿ ಕ್ರಿಕೆಟ್ ವೃತ್ತಿಬದುಕು ಕಟ್ಟಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿಯೇ ತಾನು ಯಾರ ಜೊತೆಗೂ ಅಷ್ಟೊಂದು ಬೆರೆಯೋದಿಲ್ಲ. ತಮ್ಮ ಈ ಸ್ವಭಾವಕ್ಕೆ ತಾವು ಎದುರಿಸಿರುವ ಆರೋಗ್ಯ ಸಮಸ್ಯೆಯೇ ಮೈನ್ ರೀಸನ್ ಅಂತಾ ಸ್ವತಃ ಗ್ರೀನ್ ಅವರೇ ಹೇಳ್ಕೊಂಡಿದ್ರು.
ವಿಶೇಷ ಆಹಾರ ಹಾಗೂ ದಿನಚರಿಯೇ ಗ್ರೀನ್ ಬದುಕಿನ ಗುಟ್ಟು!
ಗ್ರೀನ್ರನ್ನ ಕಾಡುತ್ತಿರೋದು ತೀರಾ ಅಪರೂಪದ ಕ್ರಾನಿಕ್ ಕಿಡ್ನಿ ಡಿಸೀಸ್ ಅನ್ನೋದು ಗೊತ್ತಾದಾಗ ಪ್ಯಾನಿಕ್ ಆಗಿಲ್ಲ. ಇರಬೇಕು ಇದ್ದು ಜಯಿಸಬೇಕು ಅಂತಾ ಇರೋ ಸತ್ಯವನ್ನ ಒಪ್ಪಿಕೊಂಡ್ರು. ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಂಪೂರ್ಣ ಚೇತರಿಕೆ ಅನ್ನೋದು ಸಾಧ್ಯವಿಲ್ಲ ಅನ್ನೋದು ಗ್ರೀನ್ಗೂ ಗೊತ್ತಿದೆ. ಹೀಗಿದ್ರೂ ಕ್ರಿಕೆಟ್ನಲ್ಲಿ ಯಶಸ್ಸು ಕಾಣಲು ಕಾರಣ ಅವರು ಪಾಲಿಸುವ ಫುಡ್ಸ್ಟೈಲ್ ಲೈಫ್ಸ್ಟೈಲ್. ಯಾವುದೇ ಪಂದ್ಯಗಳಿದ್ರೂ ಗ್ರೀನ್ ಅವರು ತಂಡದ ಮುಖ್ಯ ಚೆಫ್ ಸಹಾಯದಿಂದ ವಿಶೇಷ ಆಹಾರವನ್ನು ರೆಡಿ ಮಾಡಿಕೊಳ್ತಾರೆ. ಈ ಕಾಯಿಲೆ ಇದ್ದವ್ರಿಗೆ ಆಹಾರದ ಆಯ್ಕೆಗಳು ಬಹಳ ಸೀಮಿತವೂ ಆಗಿದೆ. ಆದ್ರೂ ಎಲ್ಲವನ್ನೂ ಅಚ್ಚುಕಟ್ಟಾಗಿ ಬ್ಯಾಲೆನ್ಸ್ ಮಾಡ್ತಿದ್ದಾರೆ.
ಆಟದ ವೇಳೆಯೇ ಹೊರ ನಡೆದಿದ್ದೂ ಇದೆ!
ಕ್ಯಾಮರಾನ್ ಗ್ರೀನ್ ಕೆಲವೊಮ್ಮೆ ಫೀಲ್ಡ್ನಲ್ಲಿ ಆಡುವಾಗಲೇ ಆರೋಗ್ಯ ಸಮಸ್ಯೆಗೆ ತುತ್ತಾಗಿ ಮೈದಾನದಿಂದ ಹೊರ ನಡೆದಿದ್ದೂ ಇದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಕ್ಯಾಮರೂನ್ ಗ್ರೀನ್ ಅವರ ಮಾಂಸಖಂಡಗಳಲ್ಲಿ ದಿಢೀರ್ ಸೆಳೆತ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೆ ಅವರ ಕಿಡ್ನಿ ಸಮಸ್ಯೆಯೇ ಮುಖ್ಯ ಕಾರಣ ಎನ್ನಲಾಗಿದೆ. ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಕೆಲವೊಮ್ಮೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂದು ಗ್ರೀನ್ ಅವ್ರೇ ಹೇಳ್ಕೊಂಡಿದ್ರು. ಮಾರಕ ಕಾಯಿಲೆಗೆ ತುತ್ತಾಗಿದ್ರೂ ಗ್ರೀನ್ ಛಲ ಬಿಡದೆ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಾಧನೆಗಳ ಮೈಲುಗೈ ಸಾಧಿಸುತ್ತಿದ್ದಾರೆ. ಈಗ ಮತ್ತೊಮ್ಮೆ ರಿಕವರ್ ಆಗಿ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಹೈಯೆಸ್ಟ್ ಬಿಡ್ ಆಗಿರೋದ್ರಿಂದ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿಯೂ ಎಲ್ಲಾ ಅಭಿಮಾನಿಗಳಲ್ಲಿದೆ.

ನೋಡಿರಿ

